ಇಂದಿನಿಂದ ಭಾರತ ಮತ್ತು ಬಾಂಗ್ಲಾದೇಶದ (IND vs BAN ODI) ನಡುವಿನ 3 ಪಂದ್ಯಗಳ ಏಕದಿನ (ODI) ಸರಣಿಯು ಆರಂಭವಾಗಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಭಾರತ ತಂಡವನ್ನು (Team India) ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಆದರೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡವು ಬಾಂಗ್ಲಾದೇಶದ ಬೌಲರ್ಗಳ ದಾಳಿಗೆ ತತ್ತರಿಸಿತು. ಭಾರತ ತಂಡವು 41.2 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 186 ರನ್ ಗಳಿಸುವ ಮೂಲಕ ಅಲ್ಪಮೊತ್ತಕ್ಕೆ ಕುಸಿಯಿತು. ಈ ಪಂದ್ಯದಲ್ಲಿ ಭಾರತದ ಪರ ಕೆಎಲ್ ರಾಹುಲ್ (KL Rahul) ಮಾತ್ರ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಗಮನ ಸೆಳೆದರು.
ಭಾರತ ತಂಡಕ್ಕೆ ಆಸರೆಯಾದ ರಾಹುಲ್:
ಇನ್ನು, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತವು 41.2 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 186 ರನ್ ಗಳಿಸುವ ಮೂಲಕ ಅಲ್ಪಮೊತ್ತಕ್ಕೆ ಕುಸಿಯಿತು. ಭಾರತದ ಪರ ಕನ್ನಡಿಗ ಕೆಎಲ್ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 70 ಎಸೆತದಲ್ಲಿ 4 ಸಿಕ್ಸ್ ಮತ್ತು 5 ಫೋರ್ಗಳ ಮೂಲಕ 73 ರನ್ ಗಳಿಸಿ ಮಿಂಚಿದರು. ಉಳಿದಂತೆ ನಾಯಕ ರೋಹಿತ್ ಶರ್ಮಾ 27 ರನ್, ಶಿಖರ್ ಧವನ್ 7 ರನ್, ವಿರಾಟ್ ಕೊಹ್ಲಿ 9 ರನ್, ಶ್ರೇಯಸ್ ಅಯ್ಯರ್ 24 ರನ್, ವಾಷಿಂಗ್ಟನ್ ಸುಂದರ್ 19 ರನ್, ಶಹಬಾಜ್ ಅಹ್ಮದ್ ಶೂನ್ಯ, ಶಾರ್ದೂಲ್ ಠಾಕೂರ್ 2 ರನ್, ದೀಪಕ್ ಚಹಾರ್ ಶೂನ್ಯ, ಮೊಹಮ್ಮದ್ ಸಿರಾಜ್ 9 ರನ್ ಮತ್ತು ಕುಲ್ದೀಪ್ ಸೇನ್ 2 ರನ್ ಗಳಿಸಿದರು.
India are all out for 186!
What a bowling performance from Bangladesh 👏
Follow the #BANvIND action 👉 https://t.co/Ymfh2IDe14 pic.twitter.com/J5QytJLtw1
— ICC (@ICC) December 4, 2022
ಇನ್ನು, ಟಾಸ್ ಗೆದ್ದು ಬೌಲಿಂಗ್ ಮಾಡಿದ ಬಾಂಗ್ಲಾ ಮೊದಲಿನಿಂದಲೂ ಟೀಂ ಇಂಡಿಯಾ ಬ್ಯಾಟರ್ಗಳ ಮೇಲೆ ಹಿಡಿತ ಸಾಧಿಸಿತು. ಬಾಂಗ್ಲಾದೇಶ ಪರ ಶಾಕಿಬ್ ಅಲ್ ಹಸನ್ ಉತ್ತಮ ದಾಳಿ ನಡೆಸಿದರು. ಅವರು 10 ಓವರ್ ಮಾಡಿ 36 ರನ್ ನೀಡಿ ಪ್ರಮುಖ 5 ವಿಕೆಟ್ ಕಬಳಿಸುವುದರ ಜೊತೆಗೆ 2 ಓವರ್ ಮೇಡಿನ್ ಮಾಡುವ ಮೂಲಕ ಭಾರತದ ಕುಸಿತಕ್ಕೆ ಕಾರಣರಾದರು. ಉಳಿದಂತೆ ಎಬಾಡೋತ್ ಹೊಸೈನ್ 4 ವಿಕೆಟ್ ಮತ್ತು ಮೆಹಿದಿ ಹಸನ್ 1 ವಿಕೆಟ್ ಪಡೆದು ಮಿಂಚಿದರು.
ಸರಣಿಯಿಂದ ರಿಷಭ್ ಪಂತ್ ಔಟ್:
ವೈದ್ಯಕೀಯ ತಂಡದೊಂದಿಗೆ ಮಾತನಾಡಿ ರಿಷಬ್ ಪಂತ್ ಅವರನ್ನು ಏಕದಿನ ಸರಣಿಯಿಂದ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಹೀಗಾಗಿ ರಿಷಭ್ ಪಂತ್ ಬಾಂಗ್ಲಾದ ಟೆಸ್ಟ್ ಸರಣಿಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬರ್ 14 ರಿಂದ ಆರಂಭವಾಗಲಿದೆ. ಮೊದಲ ಏಕದಿನ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಕೂಡ ಆಯ್ಕೆಗೆ ಲಭ್ಯರಿಲ್ಲ ಎಂದು ಮಂಡಳಿ ತಿಳಿಸಿದೆ.
ಇದನ್ನೂ ಓದಿ: Rohit Sharma: ಮತ್ತೆ ವಿಫಲರಾದ ರೋಹಿತ್ ಶರ್ಮಾ, 35 ತಿಂಗಳಾದ್ರೂ ಇಲ್ಲ ಒಂದೇ ಒಂದು ಶತಕ!
ಭಾರತ-ಬಾಂಗ್ಲಾದೇಶ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್ (ಉಪ ನಾಯಕ), ಶಾಹಬ್ಬಾಜ್ ಅಹ್ಮದ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಸೇನ್.
ಬಾಂಗ್ಲಾದೇಶ ಪ್ಲೇಯಿಂಗ್ 11: ಲಿಟ್ಟನ್ ದಾಸ್ (ನಾಯಕ), ಅನಾಮುಲ್ ಹಕ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (WK), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್, ಎಬಾಡೋತ್ ಹೊಸೈನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ