• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs AUS, WTC Final: ಟಾಸ್​ ಗೆದ್ದ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಬಲಿಷ್ಠ ತಂಡ ಕಣಕ್ಕಿಳಿಸಿದ ರೋಹಿತ್​

IND vs AUS, WTC Final: ಟಾಸ್​ ಗೆದ್ದ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಬಲಿಷ್ಠ ತಂಡ ಕಣಕ್ಕಿಳಿಸಿದ ರೋಹಿತ್​

ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್ 2023

ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್ 2023

IND vs AUS, WTC Final: ಈಗಾಗಲೇ ಟಾಸ್​ ಆಗಿದ್ದು, ಓವೆಲ್​ನಲ್ಲಿ ಟಾಸ್​ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

  • Share this:

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-2023ರ (ICC WTC Final 2023) ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ತಂಡಗಳು ಮುಖಾಮುಖಿಯಾಗಿವೆ. ಉಭಯ ತಂಡಗಳ ನಡುವಿನ ಈ ಪಂದ್ಯ ಲಂಡನ್‌ನ ಓವಲ್ (The Oval) ಮೈದಾನದಲ್ಲಿ ಆರಂಭವಾಗಿದೆ. ಈ ಮಹತ್ವದ ಪಂದ್ಯವು ಇಂದಿನಿಂದ ಜೂನ್​ 11ರ ವರೆಗೆ ನಡೆಯಲಿದೆ. ಇನ್ನು, ಪಂದ್ಯಕ್ಕೆ ಜೂನ್​ 12ರಂದು ಒಂದು ದಿನ ಮೀಸಲು ದಿನವನ್ನಾಗಿ ಇಡಲಾಗಿದೆ. ಈಗಾಗಲೇ ಟಾಸ್​ ಆಗಿದ್ದು, ಓವೆಲ್​ನಲ್ಲಿ ಟಾಸ್​ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು, ಡಬ್ಲ್ಯೂಟಿಸಿ ವಿಜೇತ ತಂಡ 13.23 ಕೋಟಿ ಹಾಗೂ ರನ್ನರ್ ಅಪ್ ತಂಡ 6.61 ಕೋಟಿ ರೂ. ಪಡೆಯುತ್ತದೆ.


ಹೆಡ್ ಟು ಹೆಡ್ ದಾಖಲೆ:


ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದುವರೆಗೆ ಒಟ್ಟು 106 ಟೆಸ್ಟ್ ಪಂದ್ಯಗಳು ನಡೆದಿವೆ. ಇಲ್ಲಿ ಟೀಂ ಇಂಡಿಯಾ ಆಸೀಸ್​ ವಿರುದ್ಧ ಅಷ್ಟಾಗಿ ಅಬ್ಬರಿಸಲಿಲ್ಲ. ಭಾರತ ವಿರುದ್ಧ ಆಸ್ಟ್ರೇಲಿಯಾ 44 ಪಂದ್ಯಗಳನ್ನು ಗೆದ್ದಿದೆ. ಮತ್ತೊಂದೆಡೆ ಕಾಂಗರೂ ತಂಡದ ವಿರುದ್ಧ ಟೀಂ ಇಂಡಿಯಾ 32 ಪಂದ್ಯಗಳಲ್ಲಿ ಯಶಸ್ಸು ಕಂಡಿದೆ. ಇದಲ್ಲದೇ 29 ಪಂದ್ಯಗಳು ಡ್ರಾ ಆಗಿದ್ದು, ಒಂದು ಪಂದ್ಯ ಟೈ ಆಗಿದೆ. ಆದರೆ ಕೊನೆಯ ಬಾರ್ಡರ್​ - ಗವಾಸ್ಕರ್​ ಟ್ರೋಫಿಯಲ್ಲಿ ಭಾರತ ತಂಡ ಸರಣಿಯನ್ನು ಆಸೀಸ್​ ವಿರುದ್ಧ ಗೆದ್ದಿರುವುದರಿಂದ ಆತ್ಮವಿಶ್ವಾದಲ್ಲಿದೆ.ಉಚಿತವಾಗಿ WTC ವೀಕ್ಷಿಸಿ:


ಇನ್ನು, ಡಬ್ಲ್ಯೂಟಿಸಿ ಫೈನಲ್​ ಪಂದ್ಯವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮ್ಯಾಚ್​ನ್ನು ಅಭಿಮಾನಿಗಳು ವೀಕ್ಷಿಸಬಹುದು, ಲೈವ್ ಸ್ಟ್ರೀಮಿಂಗ್ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ, ಆದರೆ ನೀವು ಇವುಗಳನ್ನು ಹೊಂದಿಲ್ಲದಿದ್ದರೆ, ನೀವು ಫೈನಲ್ ಅನ್ನು ಉಚಿತವಾಗಿ ಡಿಡಿ ಸ್ಪೋರ್ಟ್ಸ್‌ನಲ್ಲಿ ವೀಕ್ಷಿಸಬಹುದು.


ಇದನ್ನೂ ಓದಿ: WTC Final 2023: ಭಾರತ-ಆಸೀಸ್​ ಪಂದ್ಯಕ್ಕೆ ಹೈ ಅಲರ್ಟ್​, ಐಸಿಸಿ ಚಿಂತೆ ಹೆಚ್ಚಿಸಿದ ಪ್ರತಿಭಟನಾಕಾರರು


20 ವರ್ಷಗಳ ನಂತರ ಫೈನಲ್​ನಲ್ಲಿ ಮುಖಾಮುಖಿ:


ಭಾರತ-ಆಸ್ಟ್ರೇಲಿಯಾ ಪೈಪೋಟಿ ಏಕೆ ವಿಶೇಷ ಎಂಬುದನ್ನು ಟೀಂ ಇಂಡಿಯಾ ಆಟಗಾರರು ಬಹಿರಂಗಪಡಿಸಿದ್ದಾರೆ. ಐಸಿಸಿ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಖಾಮುಖಿಯಾದ 20 ವರ್ಷಗಳ ನಂತರ, ಎರಡು ದಶಕಗಳ ನಂತರ ಮತ್ತೊಮ್ಮೆ ಐಸಿಸಿ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಪರಸ್ಪರ ಮುಖಾಮುಖಿಯಾಗುತ್ತವೆ.
ಓವಲ್ ಪಿಚ್/ ಹವಾಮಾನ ವರದಿ:


ಓವಲ್‌ನಲ್ಲಿರುವ ಪಿಚ್ ಉತ್ತಮ ವೇಗ ಮತ್ತು ಬೌನ್ಸ್‌ಗೆ ಹೆಸರುವಾಸಿಯಾಗಿದೆ, ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಇಂಗ್ಲೆಂಡ್‌ನಲ್ಲಿ ಬೇಸಿಗೆಯ ಆರಂಭವನ್ನು ಸೂಚಿಸುವ ಜೂನ್‌ನಲ್ಲಿ ಇದೇ ಮೊದಲ ಬಾರಿಗೆ ಈ ಮೈದಾನದಲ್ಲಿ ಟೆಸ್ಟ್ ಆಡಲಾಗುತ್ತಿರುವ ಕಾರಣ WTC ಫೈನಲ್‌ನಲ್ಲಿ ಸನ್ನಿವೇಶವು ಸ್ವಲ್ಪ ಭಿನ್ನವಾಗಿರಬಹುದು. ಪಂದ್ಯವು ಮೂರನೇ ದಿನಕ್ಕೆ ಮತ್ತು ನಂತರದವರೆಗೆ ಸಾಗುತ್ತಿದ್ದಂತೆ ಸ್ಪಿನ್ನರ್‌ಗಳಿಗೆ ಪಿಚ್​ ಸಹಕಾರಿಯಾಗಿದೆ. ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮಳೆಯು ಹಾಳಾಗುವ ಸಾಧ್ಯತೆಗಳಿಲ್ಲದ ಕಾರಣ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿಯಾಗಿದೆ.


ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್​ 11:


ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ( C), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್​ ಭರತ್ (WK), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.


ಆಸ್ಟ್ರೇಲಿಯಾ ಪ್ಲೇಯಿಂಗ್ XI: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (WK), ಪ್ಯಾಟ್ ಕಮಿನ್ಸ್ (C), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.

First published: