• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • WTC Final 2023: ಆಸೀಸ್​ ವಿರುದ್ಧ 20 ವರ್ಷಗಳ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ? ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಇತಿಹಾಸ ಹೇಗಿದೆ?

WTC Final 2023: ಆಸೀಸ್​ ವಿರುದ್ಧ 20 ವರ್ಷಗಳ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ? ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಇತಿಹಾಸ ಹೇಗಿದೆ?

WTC 2023

WTC 2023

WTC Final 2023: ಭಾರತ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದೆ. ಭಾರತ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಗೆಲ್ಲುವ ಮೊದಲೇ WTC ಫೈನಲ್​ಗೆ ಟಿಕೆಟ್​ ಪಡೆದುಕೊಂಡಿತು.

  • Share this:

ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ (NZ vs SL) ತಂಡ 2 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಭಾರತ ಕನಸನ್ನು ನನಸು ಮಾಡಿತು. ನ್ಯೂಜಿಲೆಂಡ್ ವಿರುದ್ಧದ ಈ ಗೆಲುವಿನೊಂದಿಗೆ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (WTC 2023) ನೇರವಾಗಿ ಫೈನಲ್ ತಲುಪಿದೆ. ಇದರೊಂದಿಗೆ ಭಾರತ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ (WTC Final 2023) ತಲುಪಿದ ಗೌರವಕ್ಕೆ ಪಾತ್ರವಾಗಿದೆ. ಜೂನ್‌ನಲ್ಲಿ ಲಂಡನ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈಗ WTC Final ಫೈನಲ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಜೂನ್ 7 ರಿಂದ ನಡೆಯಲಿದೆ. WTC  ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಆಸ್ಟ್ರೇಲಿಯಾ (IND vs AUS) ಫೈನಲ್‌ಗೆ ಲಗ್ಗೆ ಇಟ್ಟಿದೆ. 68.52 ಅಂಕ ಗಳಿಸಿ ಫೈನಲ್ ಪ್ರವೇಶಿಸಿದ್ದು, ಭಾರತ 60.29 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.


ಸತತ 2ನೇ ಬಾರಿ ಫೈನಲ್​ಗೆ ಭಾರತ:


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಫೈನಲ್ ಆಡುತ್ತಿರುವುದು ಇದು ಸತತ ಎರಡನೇ ಬಾರಿ. ಈ ಟೂರ್ನಿಯ ಮೊದಲ ಋತುವಿನಲ್ಲಿ ಭಾರತ ತಂಡವೂ ಫೈನಲ್ ತಲುಪಿತ್ತು. ಇದಕ್ಕೂ ಮುನ್ನ 2021ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧ ಪ್ರಶಸ್ತಿ ಪಂದ್ಯವನ್ನು ಆಡಿತ್ತು. ಭಾರತವನ್ನು ಸೋಲಿಸುವ ಮೂಲಕ ಚೊಚ್ಚಲ ಬಾರಿಗೆ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಹೀಗಾಗಿ ಈ ಬಾರಿಯಾದರೂ ಭಾರತ ತಂಡ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.


WTC ಅಲ್ಲಿ ಭಾರತದ ಸಾಧನೆ:


ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಲಂಡನ್‌ನಲ್ಲಿ ಜೂನ್ 7 ರಿಂದ ಜೂನ್ 11ರ ವರೆಗೆ ನಡೆಯಲಿದೆ. ಭಾರತದ ಬಗ್ಗೆ ನೋಡುವುದಾದರೆ, ಅದು ತನ್ನ 18 ಪಂದ್ಯಗಳಲ್ಲಿ 10 ಅನ್ನು ಗೆದ್ದಿದೆ. ಚಾಂಪಿಯನ್‌ಶಿಪ್‌ನ ಸಂಪೂರ್ಣ ಋತುವಿನಲ್ಲಿ ಭಾರತಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಯಾವುದೇ ತಂಡ ಗೆದ್ದಿಲ್ಲ. ಆಸ್ಟ್ರೇಲಿಯಾ ಭಾರತಕ್ಕಿಂತ ಒಂದು ಪಂದ್ಯವನ್ನು ಕಡಿಮೆ ಗೆದ್ದಿದೆ. ಆದಾಗ್ಯೂ, ಭಾರತಕ್ಕಿಂತ 2 ಪಂದ್ಯಗಳನ್ನು ಕಡಿಮೆ ಸೋತ ಕಾರಣ ಅವರು ಪಾಯಿಂಟ್ ಪಟ್ಟಿಯಲ್ಲಿ ನಂಬರ್-1 ಆಗಿ ಉಳಿದಿದ್ದಾರೆ.


ಇದನ್ನೂ ಓದಿ: IND vs AUS ODI: ಆಸೀಸ್​ ಏಕದಿನ ಸರಣಿಯಿಂದ ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​ ಔಟ್​? ಸಂಜು ಸ್ಯಾಮ್ಸನ್​ಗೆ ಸಿಗುತ್ತಾ ಚಾನ್ಸ್?


ಭಾರತ-ಆಸೀಸ್​ ಮತ್ತೆ ಮುಖಾಮುಖಿ:


ಜೂನ್ 7 ರಂದು ನಡೆಯಲಿರುವ WTC ಫೈನಲ್ ಬಗ್ಗೆ ಮಾತನಾಡುತ್ತಾ, ಈ ಪಂದ್ಯ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಐಸಿಸಿ ಟೂರ್ನಿಯ ಇತಿಹಾಸದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2003ರಲ್ಲಿ ಒಮ್ಮೆ ಮಾತ್ರ ಎರಡೂ ತಂಡಗಳು ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಇದು ಏಕದಿನ ವಿಶ್ವಕಪ್‌ನ ಫೈನಲ್ ಆಗಿದ್ದು, ಇದರಲ್ಲಿ ಆಸ್ಟ್ರೇಲಿಯಾ ಭಾರತವನ್ನು ಸುಲಭವಾಗಿ ಸೋಲಿಸಿತು. ಇದೀಗ ಜೂನ್‌ನಲ್ಲಿ ಭಾರತಕ್ಕೆ 2003ರ ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಸಿಗಲಿದೆ.




ಭಾರತ ಕೆಲವು ವರ್ಷಗಳ ಹಿಂದೆ ಆಸ್ಟ್ರೇಲಿಯಾವನ್ನು ಅವರ ತವರಿನಲ್ಲಿ ಸೋಲಿಸಿತ್ತು. ರೋಹಿತ್ ಶರ್ಮಾ ನೇತೃತ್ವದ ತಂಡ ಈಗ ಆಸ್ಟ್ರೇಲಿಯಾವನ್ನು ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ 2-1 ಅಂತರದಲ್ಲಿ ಸೋಲಿಸಿದೆ. ಹೀಗಾಗಿ ಆಂಗ್ಲ ನಾಡಿನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಟ್ರೋಫಿ ಕೂಡ ಗೆಲ್ಲುವ ಉತ್ಸಾಹದಲ್ಲಿ ಟೀಂ ಇಂಡಿಯಾವಿದೆ.

Published by:shrikrishna bhat
First published: