ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯವು ಇಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (Punjab Cricket Association) ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಆಸ್ಟ್ರೇಲಿಯಾ ಸರಣಿಗೆ ಮುಂಚಿತವಾಗಿ, ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಅವರು ರಿಷಭ್ ಪಂತ್ (Rishabh Pant) ಮತ್ತು ದಿನೇಶ್ ಕಾರ್ತಿಕ್ (Dinesh Karthik) ಇಬ್ಬರನ್ನೂ ಆಡುವ XI ನಲ್ಲಿ ಇರಿಸಲು ಬಯಸುತ್ತೀರಾ ಅಥವಾ ಇಬ್ಬರ ನಡುವೆ ಕೇವಲ ಒಬ್ಬ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅನ್ನು ಇರಿಸಬೇಕೇ ಎಂದು ನಿರ್ಧರಿಸುವ ಅಗತ್ಯವಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಪಂತ್ ಅವರಿಗಿಂತ ಮುಂಚಿತವಾಗಿ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡುವುದಾಗಿ ಭಾರತದ ಮಾಜಿ ಬ್ಯಾಟ್ಸ್‌ಮನ್ ವಾಸಿಂ ಜಾಫರ್ ಹೇಳಿದ್ದಾರೆ.
ವಾಸಿಂ ಜಾಫರ್ ತಂಡದಲ್ಲಿ ಪಂತ್ಗಿಲ್ಲ ಸ್ಥಾನ:
ರಿಷಭ್ ಪಂತ್ ಅವರು 4 ಅಥವಾ 5 ನೇ ಸ್ಥಾನಕ್ಕೆ ಹೊಂದಿಕೊಳ್ಳದ ಕಾರಣ ಅವರನ್ನು ವಿಶ್ವಕಪ್‌ನಲ್ಲಿ ಮತ್ತು ಆಸೀಸ್ ವಿರುದ್ಧದ ಸರಣಿಯಿಂದ ಪ್ಲೇಯಿಂಗ್ 11ನಲ್ಲಿ ಕೈಬಿಡುವುದು ಉತ್ತಮ ವಿಷಯ ಎಂದು ವಾಸಿಂ ಜಾಫರ್ ಹೇಳಿದ್ದಾರೆ. ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು 1, 2 ಮತ್ತು 3 ರಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಾರೆ. ರಿಷಬ್ ಪಂತ್ ಅವರನ್ನು ಕೈಬಿಡಬೇಕು ಎಂದು ನಾನು ಭಾವಿಸುತ್ತೇನೆ, ಇದು ವಿಶ್ವಕಪ್‌ನಲ್ಲಿ ಉತ್ತಮ ವಿಷಯವಾಗಿದೆ. ಪಂತ್ ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ವಿಶೇಷವಾದದ್ದೇನೂ ಮಾಡಿಲ್ಲ. ಫೆಬ್ರವರಿ 2022 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅವರ ಗರಿಷ್ಠ ಸ್ಕೋರ್ 52 ರನ್.
ಹೀಗಾಗಿ ಪಂತ್ ಬದಲಿಗೆ ದಿನೇಶ್ ಕಾರ್ತಿಕ್ ಪ್ಲೇಯಿಂಗ್ 11 ನಲ್ಲಿ ಕಾಣಿಸಿಕೊಳ್ಳುವುದು ಉತ್ತಮ. ಅಲ್ಲದೇ ಇಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ನಾನು ಪ್ಲೇಯಿಂಗ್ 11 ನಲ್ಲಿ ಇರುವಂತೆ ತಂಡವನ್ನು ರಚಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: IND vs AUS: ಇಂದು ಭಾರತ-ಆಸ್ಟ್ರೇಲಿಯಾ ಪಂದ್ಯ; ಇಲ್ಲಿದೆ ಉಭಯ ತಂಡಗಳ ಹೆಡ್ ಟು ಹೆಡ್, ಪ್ಲೇಯಿಂಗ್ 11
ಆಸೀಸ್ ವಿರುದ್ಧದ ಪಂದ್ಯಕ್ಕೆ ವಾಸೀಂ ಜಾಫರ್ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜವೇಂದ್ರ ಚಾಹಲ್.
ಪಂದ್ಯದ ವಿವರ:
ಭಾರತ ಮತ್ತು ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯವು ಮೊಹಾಲಿಯಲ್ಲಿ ನಡೆಯಲಿದೆ. ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಪ್ರಾರಂಭವಾಗಲಿದೆ. ಈ ಸರಣಿಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನೇರ ಪ್ರಸಾರವನ್ನು ವೀಕ್ಷಿಸಬಹುದು. ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಪಂದ್ಯದ ಲೈವ್ ಅಪ್‌ಡೇಟ್‌ಗಳಿಗಾಗಿ ನೀವು News 18 Kannada ವೆಬ್‌ಸೈಟ್ ಅನುಸರಿಸಿ.
ಇದನ್ನೂ ಓದಿ: Irfan Pathan: ಸೌದಿ ಮಾಡೆಲ್ ಫಸ್ಟ್ ಲುಕ್ಗೆ ಕ್ಲೀನ್ ಬೋಲ್ಡ್ ಆದ ಪಠಾಣ್, ಇಬ್ಬರ ನಡುವಿನ ವಯಸ್ಸಿನ ಅಂತರ ಗೊತ್ತಾ?
ಪಿಚ್ ವರದಿ:
ಇನ್ನು, ಪಂಜಾಬ್ ಕ್ರಿಕೆಟ್ ಸಂಸ್ಥೆ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿನ ವಿಕೆಟ್ ಬ್ಯಾಟಿಂಗ್ ಸ್ನೇಹಿ ಮೇಲ್ಮೈಯಾಗಿದ್ದು, ಇಲ್ಲಿ ಮತ್ತೊಮ್ಮೆ ಬ್ಯಾಟರ್‌ಗಳಿಗೆ ನೆರವಾಗುವ ನಿರೀಕ್ಷೆಯಿದೆ. ವೇಗಿಗಳು ಪಂದ್ಯದ ಉತ್ತರಾರ್ಧದಲ್ಲಿ ಸ್ವಲ್ಪ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಮೈದಾನದಲ್ಲಿ ಚೇಸಿಂಗ್ ಸೂಕ್ತ ಆಯ್ಕೆಯಾಗಿದೆ. ಹೀಗಾಗಿ ಮೊದಲು ಟಾಸ್ ಗೆದ್ದ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೇ ಹವಾಮಾನ ವರದಿಯ ಪ್ರಕಾರ ಇಂದು ಮೊಹಾಲಿಯಲ್ಲಿ ಯಾವುದೇ ಮಳೆಯ ಅಡಚಣೆ ಇಲ್ಲ ಎನ್ನಲಾಗಿದೆ. ಇನ್ನು, ಭಾರತ ಈ ಮೈದಾನದಲ್ಲಿ 3 ಪಂದ್ಯಗಳನ್ನು ಆಡಿದ್ದು, ಎಲ್ಲವನ್ನು ಗೆದ್ದಿದೆ. ಮತ್ತೊಂದೆಡೆ ಆಸ್ಟ್ರೇಲಿಯ 2 ಪಂದ್ಯಗಳನ್ನು ಆಡಿದ್ದು, 1ರಲ್ಲಿ ಗೆದ್ದು ಇನ್ನೊಂದರಲ್ಲಿ ಸೋತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ