IND vs AUS: ಭಾರತ-ಆಸೀಸ್​ 3ನೇ ದಿನದಾಟ ಅಂತ್ಯ, ಶತಕದತ್ತ ವಿರಾಟ್ ಕೊಹ್ಲಿ ದಾಪುಗಾಲು

IND vs AUS

IND vs AUS

IND vs AUS: ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದೆ. ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ 480 ರನ್‌ಗಳಿಗೆ ಸೀಮಿತವಾಗಿತ್ತು.

  • Share this:

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ (IND vs AUS) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯುತ್ತಿದೆ. ಪಂದ್ಯದ ಮೂರನೇ ದಿನ ಭಾರತ 36 ರನ್‌ಗಳ ಮುಂದೆ ಆಟ ಆರಂಭಿಸಿತು. ಟೀ ಸಮಯಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತ್ತು. ಅಹಮದಾಬಾದ್ ಟೆಸ್ಟ್ ನ ಮೂರನೇ ದಿನ ಭಾರತ ಬಲಿಷ್ಠವಾಗಿ ಆಡಿದೆ. ಶುಭಮನ್ ಗಿಲ್ (Shubman Gill) ಅವರು ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ಟೆಸ್ಟ್ ಶತಕವನ್ನು ಗಳಿಸಿದಾಗ, ಕೊಹ್ಲಿ ಸರಣಿಯಲ್ಲಿ ಮೊದಲ ಬಾರಿಗೆ ಐವತ್ತರ ಗಡಿ ದಾಟಿದರು. ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದೆ. ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ 480 ರನ್‌ಗಳಿಗೆ ಸೀಮಿತವಾಗಿತ್ತು.


ಉತ್ತಮ ಬ್ಯಾಟಿಂಗ್​ ಮಾಡುತ್ತಿರುವ ಭಾರತ:


ಕೊನೆಯ ಟೆಸ್ಟ್​ ಪಂದ್ಯಗಳಿಂದಲೂ ಸತತ ವೈಪಲ್ಯದಿಂದ ಬ್ಯಾಟಿಂಗ್​ ಮಾಡುತ್ತಿದ್ದ, ಶುಭ್​ಮನ್ ಗಿಲ್​ ಇಂದು ಆಸೀಸ್​ ವಿರುದ್ಧ ಮತ್ತೊಮ್ಮೆ ಕಂಬ್ಯಾಕ್​ ಮಾಡಿದರು. ಆ ಮೂಲಕ ಗಿಲ್​ 235 ಎಸೆತದಲ್ಲಿ 12 ಫೋರ್​ ಮತ್ತು 1 ಸಿಕ್ಸ್ ಮೂಲಕ 128 ರನ್​ ಗಳಿಸಿದರು. ಉಳಿದಂತೆ ನಾಯಕ ರೋಹಿತ್ ಶರ್ಮಾ 35 ರನ್, ಚೇತೇಶ್ವರ್​ ಪೂಜಾರ 42 ರನ್ ಗಳಿಸಿ ಔಟ್​ ಆಗಿದ್ದಾರೆ. ವಿರಾಟ್ ಕೊಹ್ಲಿ 59 ರನ್ ಮತ್ತು ರವೀಂದ್ರ ಜಡೇಜಾ 16 ರನ್​​ ಗಳಿಸಿ ನಾಳೆಗೆ ಕ್ರೀಸ್​ ಕಾಯ್ದುಕೊಂಡಿದ್ದಾರೆ.ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ತಲುಪಿರುವ ಆಸೀಸ್:


ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ 2-0 ಮುನ್ನಡೆ ಪಡೆದುಕೊಂಡಿದ್ದ ಭಾರತ ತಂಡಕ್ಕೆ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 9 ವಿಕೆಟ್‌ಗಳಿಂದ ಗೆಲುವು ಸಾಧಿಸಿ ತಿರುಗೇಟು ನೀಡಿತ್ತು. ಆ ಮೂಲಕ ಪ್ರವಾಸಿ ತಂಡ ಅಧಿಕೃತವಾಗಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದರು. ಇದೀಗ ಭಾರತ ತಂಡದ ಈ ಪಂದ್ಯವನ್ನು ಗೆದ್ದರೆ 2023ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಈ ಪಂದ್ಯ ಸೋತರೆ ನ್ಯೂಜಿಲ್ಯಾಂಡ್ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಫಲಿತಾಂಶದ ಮೇಲೆ ಭಾರತದ ಅರ್ಹತೆ ನಿರ್ಧಾರವಾಗಲಿದೆ.


ಇದನ್ನೂ ಓದಿ: Rohit Sharma: ಟೆಸ್ಟ್​​ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ, ಹಿಟ್​ಮ್ಯಾನ್​​ ನೂತನ ಸಾಧನೆ


ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್​ 11:


ಭಾರತ ಪ್ಲೇಯಿಂಗ್​ 11: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಉಮೇಶ್ ಯಾದವ್.
ಆಸ್ಟ್ರೇಲಿಯಾ ಪ್ಲೇಯಿಂಗ್​ 11: ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್, ನಾಥನ್ ಲಿಯಾನ್.

Published by:shrikrishna bhat
First published: