ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-0 ಮುನ್ನಡೆ ಸಾಧಿಸಿದೆ. ಟೀಂ ಇಂಡಿಯಾ (IND vs AUS) ಸರಣಿ ಗೆಲ್ಲಬೇಕಾದರೆ ಇಂದೋರ್‌ನಲ್ಲಿ (Holkar Stadium) ಆಸೀಸ್ ವಿರುದ್ಧ ಭರ್ಜರಿ ಪೈಪೋಟಿ ನೀಡಬೇಕಿದೆ. ಸರಣಿಯ ಮೂರನೇ ಪಂದ್ಯವನ್ನು ಗೆಲ್ಲಲು ರೋಹಿತ್ ಶರ್ಮಾ (Rohit Sharma) ಪಡೆ ಅತ್ಯಂತ ಕಠಿಣ ಸವಾಲನ್ನು ಎದುರಿಸಬೇಕಾಗಿದೆ. ಕಳೆದ 141 ವರ್ಷಗಳಲ್ಲಿ ಮಾಡದ ಕೆಲಸವನ್ನು ಮಾಡುವ ಉದ್ದೇಶದಿಂದ ಭಾರತ ತಂಡವು ಮಾರ್ಚ್ 3 ಶುಕ್ರವಾರದಂದು ಪಂದ್ಯದ ಮೂರನೇ ದಿನ ಆಟಕ್ಕೆ ಪ್ರವೇಶಿಬೇಕಿದೆ.
ಕುತೂಹಲ ಮೂಡಿಸಿದ 3ನೇ ದಿನದಾಟ:
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯದ ನಿರ್ಧಾರವು ಪಂದ್ಯದ ಮೂರನೇ ದಿನದಲ್ಲಿ ಬರಲಿದೆ. ಆಸ್ಟ್ರೇಲಿಯಕ್ಕೆ ಪಂದ್ಯ ಗೆಲ್ಲಲು 76 ರನ್‌ಗಳ ಗುರಿ ಇದೆ. ಟೀಂ ಇಂಡಿಯಾ 10 ವಿಕೆಟ್ ಪಡೆಯಬೇಕಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಮೊದಲ ಇನಿಂಗ್ಸ್‌ನಲ್ಲಿ ಕೇವಲ 109 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆಸ್ಟ್ರೇಲಿಯಾ 197 ರನ್ ಗಳಿಸುವ ಮೂಲಕ 88 ರನ್ ಮುನ್ನಡೆ ಸಾಧಿಸಿತು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತವನ್ನು 163 ರನ್‌ಗಳಿಗೆ ಆಲೌಟ್ ಮಾಡಿದೆ. ಇದೀಗ ಭಾರತದ ಮುಂದೆ ಪಂದ್ಯ ಗೆಲ್ಲಲು ಪವಾಡವೇ ನಡೆಯಬೇಕಿದೆ.
141 ವರ್ಷಗಳ ಹಳೆಯ ದಾಖಲೆ:
ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಚಿಕ್ಕ ಗುರಿ ಬೆನ್ನಟ್ಟಿ, ಮುಜುಗರದ ಸೋಲಿನ ದಾಖಲೆ ಇಂಗ್ಲೆಂಡ್ ಹೆಸರಲ್ಲಿ ದಾಖಲಾಗಿದ್ದು ಬಿಟ್ಟರೆ ಬೇರಾರೂ ಅಲ್ಲ. 1882 ರಲ್ಲಿ, ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ 85 ರನ್‌ಗಳ ಗುರಿಯನ್ನು ಡಿಫೆಂಡ್ ಮಾಡಿತ್ತು. ಇಂಗ್ಲೆಂಡ್ ತಂಡವನ್ನು 77 ರನ್‌ಗಳಿಗೆ ಆಲೌಟ್ ಮಾಡಿ ಆಸ್ಟ್ರೇಲಿಯಾ ಪಂದ್ಯವನ್ನು 7 ರನ್‌ಗಳಿಂದ ಗೆದ್ದುಕೊಂಡಿತು. ಅಂದಹಾಗೆ, 2004ರಲ್ಲಿ ಮುಂಬೈನ ವಾಂಖೆಡೆಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 107 ರನ್‌ಗಳ ಡಿಫೆಂಡ್ ಮಾಡುವ ಮೂಲಕ ಗೆದ್ದಿತ್ತು. ಅದೇ ರೀತಿ ಇದೀಗ ಆಸೀಸ್ ವಿರುದ್ಧ 77 ರನ್ ಡಿಫೆಂಡ್ ಮಾಡಿದ್ದಲ್ಲಿ 141 ವರ್ಷಗಳ ದಾಖಲೆ ಮುರಿಯಲಿದೆ.
ಇದನ್ನೂ ಓದಿ: WTC 2023: ಸಂಕಷ್ಟದಲ್ಲಿ ಟೀಂ ಇಂಡಿಯಾ, ಆಸೀಸ್ ವಿರುದ್ಧ ಸೋತ್ರೆ WTC ಫೈನಲ್ ಕನಸು ಭಗ್ನ
ಸೋತರೆ WTC ಫೈನಲ್ ಹಾದಿ ಕಷ್ಟ:
ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ 2-0 ಮುನ್ನಡೆ ಸಾಧಿಸಿದೆ. ಇಂದೋರ್ ಟೆಸ್ಟ್ ಗೆಲ್ಲುವ ಮೂಲಕ ಭಾರತಕ್ಕೆ ಸರಣಿ ಗೆಲ್ಲುವ ಅವಕಾಶವಷ್ಟೇ ಅಲ್ಲ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟಿಕೆಟ್ ಪಡೆಯುವ ಅವಕಾಶವಿದೆ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 163 ರನ್‌ಗಳಿಗೆ ಆಲೌಟ್ ಆಗಿದ್ದು, ಇದೀಗ ಆಸ್ಟ್ರೇಲಿಯಕ್ಕೆ 76 ರನ್‌ಗಳ ಗುರಿ ಇದೆ. ಇಲ್ಲಿಂದ ಭಾರತಕ್ಕೆ ಗೆಲುವು ಕಷ್ಟವಾಗಿದೆ. ಭಾರತದ ಸೋಲು ಕಂಡರೆ ಅದು ನೇರವಾಗಿ WTCಪೈನಲ್ ರೇಸ್ಗೆ ಪರಿಣಾಮ ಬೀರಲಿದೆ. ಅಲ್ಲದೇ ಸೋತರೆ 4ನೇ ಪಂದ್ಯ ಮಾಡು ಇಲ್ಲವೇ ಮಡಿ ಎಂಬ ಹೋರಾಟದಲ್ಲಿ ಭಾರತ ಗೆಲ್ಲಲೇಬೇಕಿದೆ.
ಭಾರತ-ಆಸ್ಟ್ರೇಲಿಯಾ ಪ್ಲೇಯಿಂಗ್ 11:
ಟೀಂ ಇಂಡಿಯಾ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್‌ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ನಾಥನ್ ಲಿಯಾನ್, ಮ್ಯಾಥ್ಯೂ ಕುನ್ಹೆಮನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ