ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಇಂದೋರ್‌ನಲ್ಲಿ ನಡೆಯುತ್ತಿದೆ. ಹೋಳ್ಕರ್ ಕ್ರೀಡಾಂಗಣದಲ್ಲಿ (Holkar Stadium) ಈ ಪಂದ್ಯ ನಡೆಯುತ್ತಿದ್ದು, ಪಂದ್ಯದ ಎರಡನೇ ದಿನವಾದ ಇಂದು ಆಸ್ಟ್ರೇಲಿಯಾ (IND vs AUS) ತಂಡ 88 ರನ್‌ಗಳ ಮುನ್ನಡೆ ಸಾಧಿಸಿ ಆಲೌಟ್ ಆಯಿತು. ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ಆಸ್ಟ್ರೇಲಿಯಾ ಬೌಲರ್‌ಗಳ ಎದುರು ಪರದಾಡುತ್ತಿರುವ ದೃಶ್ಯ ಕಂಡು ಬಂತು. ಏತನ್ಮಧ್ಯೆ, ಮೂರನೇ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ 11 ರೊಳಗೆ ಬಂದ ಶುಭ್‌ಮನ್ ಗಿಲ್ (Shubman Gill) ಅವರನ್ನು ಮೈದಾನದಲ್ಲಿ ನೋಡಿದ ನಂತರ ಅಭಿಮಾನಿಗಳು ಮತ್ತೊಮ್ಮೆ ಅವರ ಮತ್ತು ಸಾರಾ ಅವರ ಬಗ್ಗೆ ಘೋಷಣೆಗಳನ್ನು ಕೂಗಿದರು.
ಮತ್ತೆ ಮೊಳಗಿದ ಸಾರಾ ಘೋಷಣೆ:
ಭಾರತದ ಯುವ ಸ್ಟಾರ್ ಆಟಗಾರ ಶುಭ್‌ಮನ್ ತಮ್ಮ ಕ್ರಿಕೆಟ್ ಹೊರತಾಗಿ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಶುಭಮಾನ್ ಗಿಲ್ ಅವರ ಹೆಸರು ಕೆಲವೊಮ್ಮೆ ಸಾರಾ ತೆಂಡೂಲ್ಕರ್ ಮತ್ತು ಕೆಲವೊಮ್ಮೆ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ಕೇಳಿಬರುತ್ತದೆ. ಆದರೆ ಶುಭಮನ್ ಡೇಟಿಂಗ್ ಮಾಡುತ್ತಿರುವ ಸಾರಾ ಯಾರು ಎಂಬುದನ್ನು ಅವರು ಇನ್ನೂ ಸ್ಪಷ್ಟಪಡಿಸಿಲ್ಲ. ಅಭಿಮಾನಿಗಳು ಅವರನ್ನು 'ಸಾರಾ' ಎಂಬ ಹೆಸರಿನಿಂದ ಕೀಟಲೆ ಮಾಡುವುದನ್ನು ಹೆಚ್ಚಾಗಿ ಕಾಣಬಹುದು.
He couldn't stop blushing ☺️ .
Then next ball he caught Usman khawaja catch..... 😂🥰😍....
And then finally he switched his position with Axar🫠..........@RVCJ_FB @_Confusedaatma_ @StarSportsIndia @ShubmanGill #IndvsAus #INDvsAUSTest #BorderGavaskarTrophy2023 #BGT2023 pic.twitter.com/PryhwEjBYX
— Uday Kumar (@Uday__uppi) March 1, 2023
ಇದನ್ನೂ ಓದಿ: Virat Kohli: ಆಸೀಸ್ ವಿರುದ್ಧದ ಕೊನೆ ಟೆಸ್ಟ್ಗೆ ಕೊಹ್ಲಿ ಔಟ್? ಮಹತ್ವದ ನಿರ್ಧಾರಕ್ಕೆ ಮುಂದಾಯ್ತಾ ಬಿಸಿಸಿಐ?
ಕಳಪೆ ಫಾರ್ಮ್‌ನಲ್ಲಿರುವ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಟ್ಟು ಶುಭಮನ್ ಗಿಲ್ ಅವರನ್ನು ಆಡುವ ಇಲೆವೆನ್‌ಗೆ ಸೇರಿಸಲಾಗಿದೆ. ಆದರೆ ಎರಡೂ ಬ್ಯಾಟಿಂಗ್ ಇನ್ನಿಂಗ್ಸ್‌ಗಳಲ್ಲಿ ಶುಭ್‌ಮನ್ ಗಿಲ್ ಭಾರತಕ್ಕೆ ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಇಂದು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ಶುಭಮನ್ ಕೇವಲ 5 ರನ್‌ಗಳಿಗೆ ಔಟಾದರು.
ಭಾರತ-ಆಸ್ಟ್ರೇಲಿಯಾ ಪ್ಲೇಯಿಂಗ್ 11:
ಟೀಂ ಇಂಡಿಯಾ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್‌ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ನಾಥನ್ ಲಿಯಾನ್, ಮ್ಯಾಥ್ಯೂ ಕುನ್ಹೆಮನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ