• Home
  • »
  • News
  • »
  • sports
  • »
  • Border Gavaskar Trophy: ಟೀಂ ಇಂಡಿಯಾಗೆ ಬಿಗ್​ ಶಾಕ್, ಮಹತ್ವದ ಸರಣಿಯಿಂದ ಸ್ಟಾರ್​ ಬೌಲರ್​ ಔಟ್​!

Border Gavaskar Trophy: ಟೀಂ ಇಂಡಿಯಾಗೆ ಬಿಗ್​ ಶಾಕ್, ಮಹತ್ವದ ಸರಣಿಯಿಂದ ಸ್ಟಾರ್​ ಬೌಲರ್​ ಔಟ್​!

ಜಸ್ಪ್ರೀತ್ ಬೂಮ್ರಾ

ಜಸ್ಪ್ರೀತ್ ಬೂಮ್ರಾ

Team India: ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಬಳಿಕ ಇದೀಗ ಜನವರಿ 27ರಿಂದ ಟಿ20 ಸರಣಿ ಆರಂಭವಾಗಲಿದೆ. ಬಳಿಕ ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗಲಿದೆ.

  • Share this:

ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ (IND vs NZ) ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಇಂದೋರ್‌ನಲ್ಲಿ ನಡೆದ ಕೊನೆಯ ಏಕದಿನ ಪಂದ್ಯವನ್ನು ಭಾರತ ತಂಡ ಗೆದ್ದು 3-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಇದೀಗ ಜನವರಿ 27ರಿಂದ ಕಿವೀಸ್​ ವಿರುದ್ಧ ಟಿ20 ಸರಣಿಯಲ್ಲಿ ಸೆಣಸಾಡಲಿದೆ. ಇದರ ಬಳಿಕ ರೋಹಿತ್ ಪಡೆ ಬಾರ್ಡರ್ ಗವಾಸ್ಕರ್ ಟ್ರೋಫಿ (Border–Gavaskar Trophy) ಮೇಲೆ ಕಣ್ಣಿಟ್ಟಿದೆ. ಈ ಪಂದ್ಯಾವಳಿಯಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಲಭ್ಯತೆಯ ಕುರಿತು ಬಿಗ್​ ಅಫ್​ಡೇಟ್​ ಒಂದು ಹೊರಬಿದ್ದಿದೆ. ಬುಮ್ರಾ ಅವರು ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಅವರು ಮುಂಬರಲಿರುವ ಆಸೀಸ್​ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.


ಸಂಪೂರ್ಣವಾಗಿ ಫಿಟ್​ ಆಗಿಲ್ಲ ಬುಮ್ರಾ:


ಇನ್ನು, ರೋಹಿತ್ ಶರ್ಮಾ ಅವರು ಬುಮ್ರಾ ಕುರಿತು ಮಹತ್ವದ ಮಾಹಿತಿಯನ್ನು ಹೊರಹಾಕಿದ್ದಾರೆ. ನನಗೆ ಬುಮ್ರಾ ಬಗ್ಗೆ ಇನ್ನೂ ಖಚಿತವಾಗಿಲ್ಲ. ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ಅವರು ಖಂಡಿತವಾಗಿಯೂ ಲಭ್ಯವಾಗುವುದಿಲ್ಲ. ಉಳಿದ 2 ಪಂದ್ಯಗಳಿಗೂ ಅವರು ನಮ್ಮೊಂದಿಗೆ ಇರುತ್ತಾರೆ ಎಂಬ ಭರವಸೆ ನನಗಿದೆ. ಇದರಿಂದಾಗಿ ನಾವು ಅವರ ವಿಷಯದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಅದು ಸಮಸ್ಯೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ಬೆನ್ನಿನ ಗಾಯ ಯಾವಾಗಲೂ ಗಂಭೀರವಾಗಿರುತ್ತದೆ.


ಇದರ ನಂತರವೂ ನಾವು ಅನೇಕ ಪಂದ್ಯಗಳನ್ನು ಆಡಬೇಕಾಗಿದೆ. ಹೀಗಾಗಿ ಆ ಪಂದ್ಯಗಳಿಗೆ ಅವರ ಲಭ್ಯತೆ ನಮಗೆ ಮುಖ್ಯವಾಗಿರುತ್ತದೆ ಎಂದು ರೋಹಿತ್ ಹೇಳಿದ್ದಾರೆ. ನಾವು NCA ಯಲ್ಲಿ ವೈದ್ಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ನಾವು ಅವರ ಮೇಲೆ ನಿಗಾ ಇಡುತ್ತೇವೆ. ಅವರಿಗೆ ಬೇಕಾದಷ್ಟು ಸಮಯ ಕೊಡುತ್ತೇವೆ ಎಂದಿದ್ದಾರೆ.


ಇದನ್ನೂ ಓದಿ: IND vs NZ T20: ಟಿ20 ಸರಣಿಯಿಂದ ಕೊಹ್ಲಿ-ರೋಹಿತ್ ಔಟ್​, ಯುವ ಆಟಗಾರರಿಗೆ ಚಾನ್ಸ್!


ಬಾರ್ಡರ್ ಗವಾಸ್ಕರ್ ಟ್ರೋಫಿ:


ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ನಂತರ ಫೆಬ್ರವರಿಯಲ್ಲಿ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ sಎಣಸಾಡಲಿದೆ. ಈ ಸರಣಿಯು ಫೆಬ್ರವರಿ 9 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 13ರ ವರೆಗೆ ನಡೆಯಲಿದೆ. ಈ ಸರಣಿಯು ಅತ್ಯಂತ ಮಹತ್ವದ್ದಾಗಿದೆ ಏಕೆಂದರೆ ಈ ಸರಣಿಯಲ್ಲಿ ಭಾರತದ ಗೆಲುವು ಅಥವಾ ಸೋಲು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನ್ನು ನಿರ್ಧರಿಸುತ್ತದೆ.


ಭಾರತ ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ


ಮೊದಲ ಟೆಸ್ಟ್, ಫೆಬ್ರವರಿ 9 ರಿಂದ 13, 9.30 ನಾಗ್ಪುರ
ಎರಡನೇ ಟೆಸ್ಟ್, ಫೆಬ್ರವರಿ 17 ರಿಂದ 21, 9.30 ದೆಹಲಿ
ಮೂರನೇ ಟೆಸ್ಟ್, ಮಾರ್ಚ್ 1 ರಿಂದ 5, 9.30 ಧರ್ಮಶಾಲಾ
ನಾಲ್ಕನೇ ಟೆಸ್ಟ್, ಮಾರ್ಚ್ 9 ರಿಂದ 13, 9.30 , ಅಹಮದಾಬಾದ್ , ಅಹಮದಾಬಾದ್
ಭಾರತ-ಆಸ್ಟ್ರೇಲಿಯಾ ತಂಡ:


ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (WK), ಇಶಾನ್ ಕಿಶನ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.


ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್​ ಸ್ಮಿತ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಜೋಶ್ ಹೆಜಲ್​ವುಡ್​, ಟ್ರಾವಿಸ್ ಹೆಡ್, ಆಷ್ಟನ್ ಅಗರ್, ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲಾಬುಶೇನ್, ನೇಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಷಾ, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್, ಮಿಚೆಲ್ ಸ್ವೆಪ್ಸನ್, ಪೀಟರ್ ಹ್ಯಾಂಡ್​ಸ್ಕಾಂಬ್.

Published by:shrikrishna bhat
First published: