ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ 4 ಟೆಸ್ಟ್‌ಗಳ ಬಾರ್ಡರ್-ಗವಾಸ್ಕರ್ (Border–Gavaskar Trophy) ಸರಣಿಯು ಫೆಬ್ರವರಿ 9 ರಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೇಗಿರುತ್ತದೆ ಎಂಬ ಪ್ರಶ್ನೆ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ಮನದಲ್ಲೂ ಇದೆ. ಭಾರತದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡು ಆಸೀಸ್ ತಂಡ ಎಡಗೈ ಬ್ಯಾಟ್ಸ್‌ಮನ್ ಮ್ಯಾಟ್ ರೆನ್ ಶಾಗೆ (Matt Renshaw) ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಇದರ ನಡುವೆ ಭಾರತ-ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಸಂಬಂಧಿಸಿದ ಆಸಕ್ತಿದಾಯಕ ಕಥೆಯನ್ನು ಹೇಳಲಿದ್ದೇವೆ. ಆಸ್ಟ್ರೇಲಿಯಾ ತಂಡ 2016-17ರಲ್ಲಿ ಕೊನೆಯ ಬಾರಿಗೆ ಭಾರತಕ್ಕೆ ಭೇಟಿ ನೀಡಿತ್ತು. ನಂತರ ಭಾರತ 4 ಟೆಸ್ಟ್‌ಗಳ ಸರಣಿಯನ್ನು 2-1ರಿಂದ ಗೆದ್ದುಕೊಂಡಿತು. ಈ ವೇಳೆ ಪುಣೆಯಲ್ಲಿ (Pune) ನಡೆದ ಆ ಒಂದು ಪಂದ್ಯದಲ್ಲಿ ನಡೆದ ಘಟನೆ ಎಲ್ಲರ ನಡನಪಿನಲ್ಲಿ ಉಳಿದಿದೆ.
ಬ್ಯಾಟ್ ಬಿಟ್ಟು ಮೈದಾನ ತೊರೆದ ಆಸೀಸ್ ಪ್ಲೇಯರ್:
ಇನ್ನು, 2016-17ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಸರಣಿಯ ಪುಣೆ ಟೆಸ್ಟ್ ಅತಿಥಿಯ ಗೆಲುವಿನ ಹೊರತಾಗಿ ಮತ್ತೊಂದು ಕಾರಣಕ್ಕಾಗಿ ನೆನಪಾಗುತ್ತದೆ. ವಾಸ್ತವವಾಗಿ, ಈ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಎಡಗೈ ಬ್ಯಾಟ್ಸ್‌ಮನ್ ಮ್ಯಾಟ್ ರೆನ್‌ಶಾ ಡೇವಿಡ್ ವಾರ್ನರ್ ಅವರ ಆರಂಭಿಕರಾಗಿ ಕಣಕ್ಕಿಳಿದರು. 28ನೇ ಓವರ್‌ನಲ್ಲಿ ಡೇವಿಡ್ ವಾರ್ನರ್ ಔಟಾದ ತಕ್ಷಣ, ಮ್ಯಾಟ್ ರೆನ್‌ಶಾ ಅವರಿಗಿಂತ ಮೊದಲು ಪೆವಿಲಿಯನ್‌ನತ್ತ ನಡೆಯಲು ಪ್ರಾರಂಭಿಸಿದರು.
ಈ ಘಟನೆಯನ್ನು ನೋಡಿದವರಿಗೆ ಆಶ್ಚರ್ಯವಾಯಿತು. ಏಕೆಂದರೆ ವಾರ್ನರ್ ಔಟಾಗಿದ್ದರೂ ರೆನ್ ಶಾ ಹೊರ ನಡೆಯುತ್ತಿದ್ದರು. ರಾನ್ ಶಾಗೆ ಹೊಟ್ಟೆನೋವು ಬಂದ ಕಾರಣ ಶೌಚಾಲಯದ ಕಡೆಗೆ ಓಡಿದ್ದಾರೆ ಎಂದು ನಂತರ ತಿಳಿದುಬಂದಿತು. ಆದರೆ, ಟಾಯ್ಲೆಟ್ ಬ್ರೇಕ್ ನಂತರ ಮರಳಿದ ರೆನ್ ಶಾ ಅರ್ಧಶತಕ ಬಾರಿಸಿ ಔಟಾದರು. ಹಾಗಿದ್ದರೆ ಐಸಿಸಿ ನಿಯಮದ ಪ್ರಕಾರ ಈ ರೀತಿ ಆಟಗಾರ ಔಟಾಗದೇ ಮೈದಾನ ತೊರೆದರೆ ಮತ್ತೆ ಕಣಕ್ಕಿಳಿಯಬಹುದು. ಆಟಗಾರ ಇಂಜುರಿ ಸೇರಿದಂತೆ ಕೆಲ ಸಮಸ್ಯೆಗಳಿಂದ ಅಂಪೈರ್ಗೆ ಮಾಹಿತಿ ನೀಡಿ ಮೈದಾನದಿಂದ ಹೊರನಡೆದು ಮತ್ತೆ ಪಂದ್ಯಕ್ಕೆ ಕಂಬ್ಯಾಕ್ ಮಾಡುವ ಅವಕಾಶವಿದೆ.
ಇದನ್ನೂ ಓದಿ: Shubman Gill: ಶುಭ್ಮನ್ಗೆ ಶುರುವಾಯ್ತು ಮಹಿಳಾ ಅಭಿಮಾನಿಗಳ ಕಾಟ! ಮಿಂಗಲ್ ಆಗೋಕೆ ರೆಡಿಯಾದ್ರಾ ಸಿಂಗಲ್ ಗಿಲ್?
ನಾಗ್ಪುರದಲ್ಲಿ ರೆನ್ ಶಾಗೆ ಅವಕಾಶ ಸಿಗುತ್ತಾ?:
ಇದೀಗ ಅವರು ಭಾರತದ ವಿರುದ್ಧ ನಾಗ್ಪುರ ಟೆಸ್ಟ್‌ನಲ್ಲಿ ಆಡಲು ಆಸ್ಟ್ರೇಲಿಯಾದ ರೆನ್ ಶಾ ಎದುರು ನೋಡುತ್ತಿದ್ದಾರೆ. ಎಡಗೈ ಬ್ಯಾಟ್ಸ್‌ಮನ್‌ಗಳ ವಿರುದ್ಧ ಆರ್. ಅಶ್ವಿನ್ ಅವರ ಅತ್ಯುತ್ತಮ ದಾಖಲೆಯಿಂದಾಗಿ, ನಾಯಕ ಪ್ಯಾಟ್ ಕಮಿನ್ಸ್ ಈ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗೆ ಅವಕಾಶ ನೀಡುವ ಸಾದ್ಯತೆ ಹೆಚ್ಚಿದೆ. ಅವರು ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ನಶನ ನೀಡುತ್ತಿದ್ದಾರೆ.
ಭಾರತ - ಆಸ್ಟ್ರೇಲಿಯಾ ತಂಡ:
ಭಾರತ ತಂಡ (2 ಟೆಸ್ಟ್ಗಳಿಗೆ): ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ , ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ , ಪೀಟರ್ ಹ್ಯಾಂಡ್ಸ್‌ಕಾಂಬ್ , ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್ , ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾಮಿ , ಸ್ಟೀವ್ ಸ್ಮಿತ್, ಮಿಚೆಲ್ ಸ್ವೆಪ್ಸನ್, ಡೇವಿಡ್/ ಮಿಚೆಲ್ ಸ್ಟಾರ್ಕ್, ಕ್ಯಾಮರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್ (ಈ ಮೂವರು ಕಣಕ್ಕಿಳಿಯುವುದು ಅನುಮಾನ).
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ