• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Border–Gavaskar Trophy 2023: 7 ವರ್ಷದಲ್ಲಿ 3 ಟ್ರೋಫಿ, ಬಾರ್ಡರ್​-ಗವಾಸ್ಕರ್​ ಸರಣಿಯಲ್ಲಿ ಯಾವ ತಂಡ ಹೆಚ್ಚು ಬಲಿಷ್ಠ?  ಇಲ್ಲಿದೆ ವಿವರ

Border–Gavaskar Trophy 2023: 7 ವರ್ಷದಲ್ಲಿ 3 ಟ್ರೋಫಿ, ಬಾರ್ಡರ್​-ಗವಾಸ್ಕರ್​ ಸರಣಿಯಲ್ಲಿ ಯಾವ ತಂಡ ಹೆಚ್ಚು ಬಲಿಷ್ಠ?  ಇಲ್ಲಿದೆ ವಿವರ

IND vs AUS

IND vs AUS

IND vs AUS Test: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 4 ಪಂದ್ಯಗಳ ಟೆಸ್ಟ್ ಸರಣಿ ಫೆಬ್ರವರಿ 9 ರಿಂದ ನಾಗ್ಪುರದಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ಉಭಯ ತಂಡಗಳಿಗೆ ಇದು ಮಹತ್ವದ್ದಾಗಿದೆ.

  • Share this:

ಹೊಸ ವರ್ಷದಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಅನ್ನು ತವರಿನಲ್ಲಿ ಸೋಲಿಸಿದ ನಂತರ, ಭಾರತೀಯ ಕ್ರಿಕೆಟ್ ತಂಡವು ಈಗ ಆಸ್ಟ್ರೇಲಿಯಾ (IND vs AUS) ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ (Border–Gavaskar Trophy 2023) ಮೇಲೆ ಕಣ್ಣಿಟ್ಟಿದೆ. ಉಭಯ ತಂಡಗಳ ನಡುವಿನ 4 ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯ ಫೆಬ್ರವರಿ 9ರಿಂದ ನಾಗ್ಪುರದಲ್ಲಿ (Vidarbha Cricket Association Stadium) ನಡೆಯಲಿದೆ. ಈ ಸರಣಿಯಲ್ಲಿ ಉಭಯ ತಂಡಗಳಿಗೆ ಬಹಳಷ್ಟು ಮಹತ್ವದ್ದಾಗಿದೆ. ವಿಶ್ವದ ನಂಬರ್ ಒನ್ ತಂಡವಾದ ಆಸ್ಟ್ರೇಲಿಯಾ (Australia ) ಮತ್ತು ವಿಶ್ವದ ಎರಡನೇ ಶ್ರೇಯಾಂಕಿತ ತಂಡವಾದ ಟೀಂ ಇಂಡಿಯಾವನ್ನು (Team India) ಎದುರಿಸಲಿದೆ. ಹಾಗಿದ್ದರೆ, ಈ ಮಹತ್ವದ ಸರಣಿಯಲ್ಲಿ ಉಭಯ ತಂಡಗಳಲ್ಲಿ ಯಾವ ತಂಡ ಹೆಚ್ಚು ಬಲಿಷ್ಠವಾಗಿದೆ ಎಂದು ನೋಡೋಣ ಬನ್ನಿ.


ಬಾರ್ಡರ್​ ಗವಾಸ್ಕರ್ ಟ್ರೋಫಿ ಹೆಡ್​ ಟು ಹೆಡ್​:


ಇನ್ನು, ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಈವರೆಗಿನ ಮುಖಾಮುಖಿ ನೋಡುವುದಾದರೆ, 2016ರಿಂದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡವು ಹೆಚ್ಚು ಸರಣಿಯನ್ನು ಗೆದ್ದಿದೆ. 1996 ರಿಂದ ಪ್ರಾರಂಭವಾದ ಈ ಪ್ರತಿಷ್ಠಿತ ಟ್ರೋಫಿ ಅಡಿಯಲ್ಲಿ ಇದುವರೆಗೆ 15 ಸರಣಿಗಳನ್ನು ಆಯೋಜಿಸಲಾಗಿದೆ. ಈ ವೇಳೆ ಭಾರತ 9 ಬಾರಿ ಟ್ರೋಫಿ ವಶಪಡಿಸಿಕೊಂಡರೆ, ಕಾಂಗರೂ ತಂಡ 5 ಬಾರಿ ಸರಣಿ ಗೆದ್ದಿದೆ.


ಒಮ್ಮೆ ಸರಣಿ ಡ್ರಾದಲ್ಲಿ ಅಂತ್ಯಗೊಂಡಿದೆ. ಅಲ್ಲದೇ ಕಳೆದ 7 ವರ್ಷಗಳಲ್ಲಿ ಭಾರತವು 3 ಬಾರಿ ಸರಣಿಯನ್ನು ಗೆದ್ದಿದೆ. 2016-17ರಲ್ಲಿ ನಡೆದ ಈ ಸರಣಿಯಲ್ಲಿ ಭಾರತ ಕಾಂಗರೂಗಳನ್ನು 2-1 ಅಂತರದಿಂದ ಸೋಲಿಸಿದರೆ, 2018-19 ಮತ್ತು 2020-21ರಲ್ಲಿಯೂ ಆಕರ್ಷಕ ಜಯ ದಾಖಲಿಸಿತ್ತು.


ಇದನ್ನೂ ಓದಿ: IND vs AUS: ಆಸ್ಟ್ರೇಲಿಯಾ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್​, ತಂಡದಿಂದ ಮತ್ತೊಬ್ಬ ಸ್ಟಾರ್ ಆಟಗಾರ ಔಟ್


2014-15ರಲ್ಲಿ ಸರಣಿ ಸೋಲು:


ಭಾರತ ತಂಡವು ಕಳೆದ 7 ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಸರಣಿಯನ್ನು ಮೂರು ಬಾರಿ ಗೆದ್ದಿದೆ. ಅವರು 2016-17 ರಲ್ಲಿ ಆಸ್ಟ್ರೇಲಿಯಾವನ್ನು 2-1 ರಿಂದ ಸೋಲಿಸಿದರು. ಇದಾದ ಬಳಿಕ 2018-19 ಮತ್ತು 2020-21ರಲ್ಲೂ ಹೀನಾಯ ಸೋಲು ಕಂಡಿತ್ತು. ಇದಕ್ಕೂ ಮುನ್ನ 2014-15ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ 0-2 ಅಂತರದಲ್ಲಿ ಸೋತಿತ್ತು.


ಭಾರತವು 1996-97ರಲ್ಲಿ 1-0ಯಿಂದ ಸರಣಿಯನ್ನು ವಶಪಡಿಸಿಕೊಂಡರೆ, 1997-98ರಲ್ಲಿ ಕಾಂಗರೂಗಳನ್ನು 2-1 ಅಂತರದಿಂದ ಸೋಲಿಸಿತು. 1999ರಲ್ಲಿ ಭಾರತ ಸೋಲನ್ನು ಎದುರಿಸಬೇಕಾಯಿತು. ಈ ಟ್ರೋಫಿ ಅಡಿಯಲ್ಲಿ 4 ಪಂದ್ಯಗಳನ್ನು ಆಯೋಜಿಸುತ್ತಿರುವುದು ಇದೇ ಮೊದಲ ಬಾರಿ ಆಗಿದೆ.
ಭಾರತ - ಆಸ್ಟ್ರೇಲಿಯಾ ತಂಡ:


ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (WK), ಇಶಾನ್ ಕಿಶನ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.


ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್​ ಸ್ಮಿತ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಜೋಶ್ ಹೆಜಲ್​ವುಡ್​, ಟ್ರಾವಿಸ್ ಹೆಡ್, ಆಷ್ಟನ್ ಅಗರ್, ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲಾಬುಶೇನ್, ನೇಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಷಾ, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್, ಮಿಚೆಲ್ ಸ್ವೆಪ್ಸನ್, ಪೀಟರ್ ಹ್ಯಾಂಡ್​ಸ್ಕಾಂಬ್.

Published by:shrikrishna bhat
First published: