IND vs AUS: ಆಸೀಸ್​ ವಿರುದ್ಧ ಸೋಲಿಗೆ ಕಾರಣಗಳೇನು? ನಾಯಕ ರೋಹಿತ್​​ ಶರ್ಮಾ ಹೇಳಿದ್ದೇನು?

IND vs AUS: ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯನ್ನು ಭಾರತ ಸೋಲಿನೊಂದಿಗೆ ಪ್ರಾರಂಭಿಸಿದೆ. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಸ್ಟ್ರೇಲಿಯಾ (Australia) ವಿರುದ್ಧದ ಮೂರು ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಸೋತಿದೆ. ಟೀಂ ಇಂಡಿಯಾ (Team India) ಮೊದಲ ಬ್ಯಾಟಿಂಗ್ ವೇಳೆ 209 ರನ್ ಗಳ ಬೃಹತ್ ಗುರಿ ನೀಡಿತ್ತು. ಆದರೆ ಭಾರತದ ಬೌಲರ್‌ಗಳು ಈ ಗುರಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.  ಈ ಪಂದ್ಯದ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಮುಂದಿನ 2ನೇ ಪಂದ್ಯದಲ್ಲಾದರೂ ಭಾರತ ಗೆದ್ದರೆ ಮಾತ್ರ ಸರಣಿ ಜೀವನಂತವಾಗಿ ಉಳಿಯುತ್ತದೆ. ಇನ್ನು, ಈ ಸೋಲಿನ ಬಳಿಕ ನಾಯಕ ರೋಹಿತ್ ಶರ್ಮಾ (Rohit Sharma) ಪಂದ್ಯದ ಸೋಲಿಗೆ ಕಾರಣಗಳು ಏನು ಎಂದು ಹೇಳಿದ್ದಾರೆ.

ಆಸೀಸ್​ ವಿರುದ್ಧದ ಸೋಲಿಗೆ ಕಾರಣಗಳು:

ಟಾಸ್:  ರೋಹಿತ್ ಟಿ20 ಮಾದರಿಯಲ್ಲಿ ಟಾಸ್ ಸೋತಿರುವುದು ಇದು ಸತತ 5ನೇ ಬಾರಿ. ಮೊಹಾಲಿ ಪಿಚ್ ಬ್ಯಾಟಿಂಗ್ ವಿಕೆಟ್ ಆಗಿದೆ, ಅದೇ ಸಮಯದಲ್ಲಿ, ಇಬ್ಬನಿ ಅಂಶದಿಂದಾಗಿ, ಎರಡನೇ ಬಾರಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಗೆಲ್ಲುವ ಹೆಚ್ಚಿನ ಅವಕಾಶವಿತ್ತು. ಟಾಸ್ ಸೋತ ಭಾರತ ಗೆಲುವಿನ ಸಾಧ್ಯತೆಗೆ ಧಕ್ಕೆಯಾಯಿತು.

ಫೀಲ್ಡಿಂಗ್:  ಈ ಪಂದ್ಯದಲ್ಲಿ ಭಾರತದ ಫೀಲ್ಡಿಂಗ್ ಬಗ್ಗೆ ಎಷ್ಟು ಕಡಿಮೆ ಹೇಳಿದರೆ ಅಷ್ಟು ಒಳ್ಳೆಯದು. ಮೂರು ಕ್ಯಾಚ್‌ಗಳನ್ನು ಕೈಬಿಟ್ಟರು. ಹರ್ಷಲ್ ಪಟೇಲ್ ಅವರ ಸಿಕ್ಸರ್ ಅನ್ನು ಮ್ಯಾಕ್ಸ್ ವೆಲ್ ಅದ್ಭುತವಾಗಿ ನಿಲ್ಲಿಸಿ 5 ರನ್ ಉಳಿಸಿದರೆ, ನಮ್ಮ ಆಟಗಾರರು ಸುಲಭವಾದ ಕ್ಯಾಚ್‌ಗಳನ್ನು ಕೈಬಿಟ್ಟು ಪಂದ್ಯದ ಸೋಲಿನಲ್ಲಿ ಕಾರಣವಾದಂತಾಯಿತು.

ಇದನ್ನೂ ಓದಿ: Tristan Stubbs: ದಕ್ಷಿಣ ಆಫ್ರಿಕಾದ ಟಿ20 ಹರಾಜಿನಲ್ಲಿ ಹಣದ ಮಳೆ, 4.1 ಕೋಟಿಗೆ ಸೇಲ್​ ಆದ ಯುವ ಆಟಗಾರ

ಡೆತ್ ಬೌಲಿಂಗ್:  ಏಷ್ಯಾಕಪ್ ನಿಂದ ಭಾರತವನ್ನು ಡೆತ್ ಬೌಲಿಂಗ್ ಸಮಸ್ಯೆ ಕಾಡುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20ಯಲ್ಲಿ ಭಾರತದ ಸೋಲಿಗೆ ಇದು ಕೂಡ ಪ್ರಮುಖ ಕಾರಣವಾಗಿತ್ತು. 16 ಓವರ್‌ಗಳ ಅಂತ್ಯಕ್ಕೆ ಆಸ್ಟ್ರೇಲಿಯಾ ಗೆಲುವಿನಿಂದ ದೂರ ಉಳಿದಿತ್ತು. ಕೊನೆಯ ನಾಲ್ಕು ಓವರ್‌ಗಳಲ್ಲಿ ಆಸೀಸ್ ಗೆಲುವಿಗೆ 55 ರನ್‌ಗಳ ಅಗತ್ಯವಿತ್ತು. ಭುವನೇಶ್ವರ್ 17ನೇ ಓವರ್ ಬೌಲ್ ಮಾಡಿ 15 ರನ್ ಬಿಟ್ಟುಕೊಟ್ಟರು. ಹರ್ಷಲ್ ಪಟೇಲ್ 18ನೇ ಓವರ್ ಬೌಲ್ ಮಾಡಿ ಮೂರು ಸಿಕ್ಸರ್ ಸಹಿತ 22 ರನ್ ನೀಡಿದರು. ಭುವಿ ಮತ್ತೆ 19ನೇ ಓವರ್ ನಲ್ಲಿ 16 ರನ್ ನೀಡಿದರು. ಹೀಗಾಗಿ ಭಾರತ ಕೇವಲ 20 ಎಸೆತಗಳಲ್ಲಿ 57 ರನ್ ಬಿಟ್ಟುಕೊಟ್ಟು ಡೆತ್​ ಓವರ್​ನಲ್ಲಿ ಮತ್ತೆ ಎಡವಿತು.

ನಾಯಕತ್ವ:  ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವವೂ ನಿರೀಕ್ಷೆಗೆ ತಕ್ಕಂತೆ ಇrಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ತಂಡದ ಆಯ್ಕೆ. ಉಮೇಶ್ ಯಾದವ್ ಟಿ20 ವಿಶ್ವಕಪ್ ತಂಡದಲ್ಲಿ ಇಲ್ಲ. ಈ ವೇಳೆ ಅಂತಿಮ ತಂಡದಲ್ಲಿ ದೀಪಕ್ ಚಹಾರ್‌ಗೆ ಸ್ಟ್ಯಾಂಡ್‌ ಬೈ ಅವಕಾಶ ನೀಡಬಹುದಿತ್ತು. ಆದರೆ, ಭಾರತ ಹಾಗೆ ಮಾಡಲಿಲ್ಲ. ಪಂದ್ಯದಲ್ಲಿ, ಉಮೇಶ್ ಯಾದವ್ ತಮ್ಮ ಮೊದಲ ಓವರ್‌ನಲ್ಲಿ ಸತತ ನಾಲ್ಕು ಬೌಂಡರಿಗಳನ್ನು ನೀಡುವ ಮೂಲಕ 24 ರನ್ ನೀಡಿದರು. ಆದರೆ ನಿರ್ಣಾಯಕ ಸಮಯದಲ್ಲಿ ಸ್ಮಿತ್ ಮತ್ತು ಮ್ಯಾಕ್ಸ್ವೆಲ್ ಅವರನ್ನು ಔಟ್ ಮಾಡಿದರು. ಆದರೆ ಇನ್ನೂ 2 ಓವರ್ ಇದ್ದರೂ ಉಮೇಶ್ ಅವರಿಗೆ ಬೌಲಿಂಗ್​ ನೀಡದಿರುವುದು ಒಂದು ಸಮಸ್ಯೆಯಾಯಿತು ಎನ್ನಲಾಗುತ್ತಿದೆ.

ಇದನ್ನೂ ಓದಿ: ICC Cricket Rules: ಅಕ್ಟೋಬರ್ 1 ರಿಂದ ಹೊಸ ನಿಯಮ, ಬೌಲರ್​ ಈ ರೀತಿ ಮಾಡಿದ್ರೆ ಬ್ಯಾಟ್ಸ್​ಮನ್​ಗೆ ಸಿಗುತ್ತೆ 5 ರನ್

ವೇಡ್, ಗ್ರೀನ್:  ಪಂದ್ಯದಲ್ಲಿ ಕ್ಯಾಮರೂನ್ ಗ್ರೀನ್ ಮತ್ತು ಮ್ಯಾಥ್ಯೂ ವೇಡ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು. ಆಸ್ಟ್ರೇಲಿಯಕ್ಕೆ ಗ್ರೀನ್ ದೊಡ್ಡ ಹೊಡೆತಗಳ ಮೂಲಕ ಸೂಪರ್ ಆರಂಭ ನೀಡಿದರೆ, ವೇಡ್ ಕೊನೆಯಲ್ಲಿ ಅದ್ಬುತ ಫಿನಿಶ್ ನೀಡಿದರು. ಇವರಿಬ್ಬರು ತಮ್ಮ ಬ್ಯಾಟಿಂಗ್‌ನಿಂದ ಭಾರತದ ಗೆಲುವನ್ನು ಕಸಿದುಕೊಂಡರು.

ಬೌಲಿಂಗ್​ನಲ್ಲಿ ಎಡವಿದೆವು ಎಂದ ನಾಯಕ:

ಇನ್ನು, ಪಂದ್ಯ ಬಳಿಕ ಮಾತನಾಡಿದ ನಾಯಕ ರೋಹಿತ್, ‘'ನಾವು ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ ಎಂದು ನಾನು ಭಾವಿಸುವುದಿಲ್ಲ. 200 ರನ್‌ಗಳ ರಕ್ಷಣೆಗೆ ಉತ್ತಮ ಅವಕಾಶವಿತ್ತು. ಪಂದ್ಯದಲ್ಲಿ ಸಿಕ್ಕ ಅವಕಾಶಗಳನ್ನು ನಾವು ಸದುಪಯೋಗಪಡಿಸಿಕೊಳ್ಳಲಿಲ್ಲ. ತಂಡದ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಆಡಿದರು. ಆದರೆ ಬೌಲರ್‌ಗಳಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದು ಗಮನ ಹರಿಸಬೇಕಾದ ವಿಷಯ. ನಿಖರವಾಗಿ ಏನು ತಪ್ಪಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ‘ ಎಂದು ಹೇಳಿದ್ದಾರೆ.
Published by:shrikrishna bhat
First published: