IND vs AUS ODI: ಕನ್ನಡಿಗನ ಕೆಚ್ಚೆದೆಯ ಹೋರಾಟಕ್ಕೆ ಮಣಿದ ಆಸೀಸ್​, ಭಾರತಕ್ಕೆ ರೋಚಕ ಜಯ

ಭಾರತ ತಂಡಕ್ಕೆ ಜಯ

ಭಾರತ ತಂಡಕ್ಕೆ ಜಯ

IND vs AUS ODI:

  • Share this:

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ (IND vs AUS 1st ODI) ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಆಸೀಸ್​ ವಿರುದ್ಧ ರೋಚಕ ಜಯ ದಾಖಲಿಸಿತು. ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಕನ್ನಡಿಗ ಕೆಎಲ್ ರಾಹುಲ್​ (KL Rahul) ಏಕಾಂಗಿ ಹೋರಾಟದಿಂದ ಭಾರತ ತಂಡ 39.5 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ  191  ರನ್​ ಗಳಿಸುವ ಮೂಲಕ ರೋಚಕ ಜಯ ದಾಖಲಿಸಿತು. ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 35.4 ಓವರ್​ಗೆ 10 ವಿಕೆಟ್​ ನಷ್ಟಕ್ಕೆ 188 ರನ್​ ಗಳಿಸಿತ್ತು. ಈ ವೇಳೆ ಭಾರತದ ಪರ ಸಿರಾಜ್​ ಮತ್ತು ಶಮಿ ಭರ್ಜರಿ ಬೌಲಿಂಗ್​ ದಾಳಿ ಮಾಡಿದ್ದರು.


ಕೆಎಲ್ ರಾಹುಲ್​ ಭರ್ಜರಿ ಕಂಬ್ಯಾಕ್​:


ಹೌದು, ಆಸೀಸ್​ ನೀಡಿದ್ದ 189 ರನ್​ ಗಳ ಟಾರ್ಗೆಟ್​ ಬೆನ್ನಟ್ಟಿದ ಭಾರತ ತಂಡವು ಆರಂಭಿಕ ಆಘಾಥ ಎದುರಿಸಬೇಕಾಯಿತು. ಮಿಚೆಲ್ ಸ್ಟಾರ್ಕ್​ ದಾಳಿಗೆ ತತ್ತರಿಸಿದ ಭಾರತದ ಆರಂಭಿಕರು ಒಬ್ಬರ ಹಿಂದೊಬ್ಬರಂತೆ ಫೆವೆಲಿಯನ್​ ಪರೇಡ್​ ನಡೆಸಿದರು. ಈ ವೇಳೆ ಕನ್ನಡಿಗ ಕೆಎಲ್ ರಾಹುಲ್​ ಏಕಾಂಗಿ ಹೋರಾಟ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ರಾಹುಲ್​ 91 ಎಸೆತದಲ್ಲಿ 1 ಸಿಕ್ಸ್ ಮತ್ತು 7 ಫೋರ್​ ಮೂಲಕ 75 ರನ್​ ಗಳಿಸಿದರು. ಉಳಿದಂತೆ ರಾಹುಲ್​ಗೆ ಉತ್ತಮ ಸಾಥ್​ ನೀಡಿದ ರವೀಂದ್ರ ಜಡೇಜಾ 69 ಎಸೆತದಲ್ಲಿ 45 ರನ್​​​, ನಾಯಕ ಹಾರ್ದಿಕ್ ಪಾಂಡ್ಯ 25 ರನ್, ಸೂರ್ಯಕುಮಾರ್ ಯಾದವ್ ಶೂನ್ಯ, ವಿರಾಟ್ ಕೊಹ್ಲಿ 4 ರನ್, ಶುಭ್​ಮನ್ ಗಿಲ್ 20 ರನ್ ಮತ್ತು ಇಶಾನ್ ಕಿಶನ್ 3 ರನ್​ ಗಳಿಸಿದ್ದರು.



ಸಿರಾಜ್-ಶಮಿ ಉತ್ತಮ ಬೌಲಿಂಗ್​:


ಇನ್ನು, ಟಾಸ್​ ಗೆದ್ದು ಮೊದಲು ಬೌಲಿಂಗ್​ ಮಾಡಿದ ಭಾರತ ತಂಡ ಆಸೀಸ್​ ಬ್ಯಾಟರ್​ಗಳ ಮೇಲೆ ಭರ್ಜರಿ ಬೌಲಿಂಗ್​ ದಾಳಿ ನಡೆಸಿತು. ಭಾರತದ ಪರ 6 ಓವರ್​ ಮಾಡಿ ಮೊಹಮ್ಮದ್ ಸಿರಾಜ್​ ಮತ್ತು ಮೊಹಮ್ಮದ್ ಶಮಿ ತಲಾ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ರವೀಂದ್ರ ಜಡೇಜಾ 2 ವಿಕೆಟ್​ ಪಡೆದರು. ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕುಲ್​ದೀಪ್​ ಯಾದವ್ ತಲಾ 1 ವಿಕೆಟ್ ಪಡೆದು ಆಸ್ಟ್ರೇಲಿಯಾ ಪತನಕ್ಕೆ ಕಾರಣರಾದರು.


ಇದನ್ನೂ ಓದಿ: MS Dhoni: ರಾಕಿ ಭಾಯ್​ ಫೇವರಿಟ್ ಕ್ರಿಕೆಟರ್​ ಯಾರು ಗೊತ್ತಾ? ಅವರೇ ಯಶ್​ ರೋಲ್ ಮಾಡೆಲ್ ಅಂತೆ!


ಆಸೀಸ್​ ಬ್ಯಾಟಿಂಗ್​ ವೈಫಲ್ಯ:


ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ​ ಪರ ಮಿಚೆಲ್ ಮಾರ್ಷ್ 81 ರನ್​ ಗಳಿಸುವ ಮೂಲಕ ಏಕಾಂಗಿಯಾಗಿ ಹೋರಾಡಿದರು. ಉಳಿದಂತೆ ಟ್ರಾವಿಸ್ ಹೆಡ್ 5 ರನ್, ಸ್ಟೀವ್ ಸ್ಮಿತ್ 22 ರನ್, ಮಾರ್ನಸ್ ಲಬುಶೇನ್ 15 ರನ್, ಜೋಶ್ ಇಂಗ್ಲಿಸ್ 26 ರನ್, ಕ್ಯಾಮೆರಾನ್ ಗ್ರೀನ್ 12 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 8 ರನ್, ಮಾರ್ಕಸ್ ಸ್ಟೊಯಿನಿಸ್ 5 ರನ್, ಸೀನ್ ಅಬಾಟ್ ಶೂನ್ಯ, ಮಿಚೆಲ್ ಸ್ಟಾರ್ಕ್ 4 ರನ್ ಮತ್ತು ಆಡಮ್ ಝಂಪಾ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು.




ರಾಹುಲ್​ ಭರ್ಜರಿ ಬ್ಯಾಟಿಂಗ್​:


ಭಾರತದ ಗೆಲುವಿನಲ್ಲಿ ಕೆಎಲ್ ರಾಹುಲ್ ಪ್ರಮುಖ ಪಾತ್ರ ವಹಿಸಿದ್ದರು. ಆರನೇ ವಿಕೆಟ್‌ಗೆ ರವೀಂದ್ರ ಜಡೇಜಾ ಅವರೊಂದಿಗೆ 100ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಜಯ ತಂದುಕೊಟ್ಟರು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಾಹುಲ್ ಉಪನಾಯಕತ್ವ ಕಳೆದುಕೊಂಡಿದ್ದರು. ಬಳಿಕ ಅವರನ್ನೂ ತಂಡದಿಂದ ಕೈಬಿಡಲಾಗಿತ್ತು. ಈ ಹಿಂದೆ ಟಿ20ಯಲ್ಲೂ ಅವರಿಗೆ ಅದೇ ಆಯಿತು. ಆದರೆ, ರಾಹುಲ್ ಮುಂಬೈ ಏಕದಿನದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು ಮತ್ತು ಕಷ್ಟದ ಸಮಯದಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು.

Published by:shrikrishna bhat
First published: