IND vs AUS: ಭಾರತ-ಆಸೀಸ್​ ಪಂದ್ಯಕ್ಕೆ ಮಳೆ ಕಾಟ? ಇಲ್ಲಿದೆ ಹವಾಮಾನ ವರದಿ

IND vs AUS ODI

IND vs AUS ODI

IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮುಂಬೈನ ವಾಂಖೇಡೆ ಮೈದಾನದಲ್ಲಿ ಇಂದು ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ.

  • News18 Kannada
  • 3-MIN READ
  • Last Updated :
  • Mumbai, India
  • Share this:

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಸರಣಿಯಿಂದ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. ಒಂದೂವರೆ ತಿಂಗಳ ಸುದೀರ್ಘ ವಿರಾಮದ ಬಳಿಕ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಮರಳುತ್ತಿದ್ದಾರೆ. ಬಾರ್ಡರ್​ ಗವಾಸ್ಕರ್​ ಟ್ರೋಫಿ (Border Gavaskar Trophy) ರೀತಿಯಲ್ಲಿಯೇ ಈ ಸರಣಿಯನ್ನೂಗೆದ್ದು ಮುಂಬರಲಿರುವ ಏಕದಿನ ವಿಶ್ವಕಪ್​ಗಾಗಿ ಸಿದ್ಧತೆ ನಡೆಸಲು ಭಾರತ ತಂಡ ಯೋಚಿಸುತ್ತಿದೆ. ಆದರೆ ಇಂದಿನ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ (Wankhede Stadium in Mumbai) ನಡೆಯುತ್ತಿದ್ದು, ಪಂದ್ಯಕ್ಕೆ ಮಳೆಯ ಕಾಟ ಇರುವ ಸಾಧ್ಯತೆ ಇದೆ ಯೇ? ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮನೆ ಮಾಡಿದೆ.


ಹವಾಮಾನ ವರದಿ:


ಹೌದು, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮುಂಬೈನ ವಾಂಖೇಡೆ ಮೈದಾನದಲ್ಲಿ ಇಂದು ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ. ಆದರೆ ಈ ಪಂದ್ಯಕ್ಕೆ ಮಳೆಯು ಅಡ್ಡಿಪಡಿಸುತ್ತದೆಯೇ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮನೆ ಮಾಡಿದೆ. ಈ ಪಂದ್ಯಕ್ಕೂ ಮುನ್ನ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದ್ದು, ಮುಂಬೈನಲ್ಲಿ ಮಳೆಯಾಗುವ ಸೂಚನೆ ನೀಡಿದೆ. ಹೌದು, ಈಗಾಗಲೇ ಮುಂಬೈ ಹಲವೆಡೆ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಜೊತೆಗೆ ಹಲವೆಡೆ ತುಂತುರು ಮಳೆಯಾಗಿದೆ. ಹೀಗಾಗಿ ಪಂದ್ಯದ ದಿನ ಮಳೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


ಇಂದು ಮುಂಬೈನಲ್ಲಿ ಹಲವೆಡೆ ಮೋಡ ಕವಿದ ವಾತಾವರಣವಿರಲಿದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಪಂದ್ಯಕ್ಕೆ ಮಳೆರಾಯ ವಿಲನ್​ ಆಗುವ ಸಾಧ್ಯತೆ ಇದ್ದು, ಉಭಯ ತಂಡಗಳಿಗೆ ಇದು ಕಷ್ಟಕರವಾಗಿರಲಿದೆ.


ಇದನ್ನೂ ಓದಿ: IND vs AUS ODI: ಭಾರತ-ಆಸೀಸ್​ ಸರಣಿಯಿಂದ 5 ಆಟಗಾರರು ಔಟ್​! ಯುವ ಪ್ಲೇಯರ್ಸ್​ಗಳಿಗೆ ಗೋಲ್ಡನ್​ ಚಾನ್ಸ್


ಪಿಚ್​ ರಿಪೋರ್ಟ್​:


ವಾಂಖೆಡೆ ಸ್ಟೇಡಿಯಂ ಬೌನ್ಸ್ ಮತ್ತು ಕ್ಯಾರಿಯೊಂದಿಗೆ ಬ್ಯಾಟರ್‌ಗಳಿಗೆ ಅತ್ಯುತ್ತಮ ಮೈದಾನಗಳಲ್ಲಿ ಒಂದಾಗಿದೆ. ವಾಂಖೆಡೆಯಲ್ಲಿನ ವಿಕೆಟ್ ವೇಗಿಗಳು ಮತ್ತು ಸ್ಪಿನ್ನರ್‌ಗಳಿಗೆ ಸಹಾಯವನ್ನು ನೀಡುತ್ತದೆ. ಪ್ರತಿ ಇನಿಂಗ್ಸ್‌ನ ಮೊದಲ 10 ಓವರ್‌ಗಳಲ್ಲಿ ಇದು ಗಣನೀಯ ಸ್ವಿಂಗ್ ಅನ್ನು ಹೊಂದಿದೆ. ಈ ಮೈದಾನದಲ್ಲಿ ODIಗಳಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ ಸುಮಾರು 270 ಆಗಿದೆ.
ನಿರೀಕ್ಷಿತ ಹವಾಮಾನ ಪರಿಸ್ಥಿತಿಗಳ ಬಗ್ಗೆ ನೋಡುವುದಾರೆ, ಮಧ್ಯಾಹ್ನದ ತಾಪಮಾನವು ಸುಮಾರು 33 ಡಿಗ್ರಿ ಇರುತ್ತದೆ. ಆರ್ದ್ರತೆ 52 ಪ್ರತಿಶತ ಇರುತ್ತದೆ. ಮಧ್ಯಾಹ್ನ ಉತ್ತಮವಾದ ಗಾಳಿ ಬೀಸಲಿದೆ. ಸಂಜೆ ತಾಪಮಾನವು 26 ಡಿಗ್ರಿಗಳಿಗೆ ಇಳಿಯುತ್ತದೆ ಮತ್ತು ತೇವಾಂಶವು ಶೇಕಡಾ 71 ಕ್ಕೆ ಏರುತ್ತದೆ. ಯಾವಾಗಲೂ ಭಾರತದಲ್ಲಿ ಆಡುವಾಗ, ಬಿಳಿ ಚೆಂಡಿನ ಆಟಗಳಲ್ಲಿ ಇಬ್ಬನಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಟಾಸ್ ಗೆದ್ದ ನಾಯಕ ಇಬ್ಬನಿಯ ಅಂಶವನ್ನು ಗಮನದಲ್ಲಿಟ್ಟುಕೊಂಡು ಟಾಸ್​ ಗೆದ್ದಲ್ಲಿ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡುವ ಸಾಧ್ಯತೆ ಇದೆ.


ಭಾರತ - ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್​ 11: ಶುಭಮನ್ ಗಿಲ್, ಇಶಾನ್ ಕಿಶನ್ (WK), ವಿರಾಟ್ ಕೊಹ್ಲಿ , ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (c), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.


ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್​ 11: ಡೇವಿಡ್ ವಾರ್ನರ್ , ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್ (ಸಿ), ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್ , ಮಿಚ್ ಮಾರ್ಷ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಾಕ್), ಆಷ್ಟನ್ ಅಗರ್, ಮಿಚ್ ಸ್ಟಾರ್ಕ್, ಆಡಮ್ ಝಂಪಾ

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು