ಇಂದು ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ಕ್ರಿಕೆಟ್ ತಂಡಗಳ ನಡುವೆ ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಸರಣಿಯಲ್ಲಿ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿವೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ (M.A Chidambaram Stadium) ಉಭಯ ತಂಡಗಳು ಸರಣಿಗಾಗಿ ಸೆಣಸಾಡುತ್ತಿದ್ದು, ಟಾಸ್ ಗೆದ್ದ ಆಸೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಕುಲದೀಪ್ ಯಾದವ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ 49 ಓವರ್ಗಳಿಗೆ 10 ವಿಕೆಟ್ ನಷ್ಟಕ್ಕೆ 269 ರನ್ ಗಳಿಸುವ ಮೂಲಕ ಭಾರತ ತಂಡಕ್ಕೆ 270 ರನ್ಗಳ ಟಾರ್ಗೆಟ್ ನೀಡಿದೆ.
ಬ್ಯಾಟಿಂಗ್ನಲ್ಲಿ ಎಡವಿದ ಆಸೀಸ್:
ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 49 ಓವರ್ಗಳಿಗೆ 10 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿದೆ. ಆಸೀಸ್ ಪರ, ಡೇವಿಡ್ ವಾರ್ನರ್ 23 ರನ್, ಟ್ರಾವಿಸ್ ಹೆಡ್ 33 ರನ್, ಮಿಚೆಲ್ ಮಾರ್ಷ್ 47 ರನ್, ಸ್ಟೀವ್ ಸ್ಮಿತ್ ಶೂನ್ಯ, ಮಾರ್ನಸ್ ಲಬುಶೇನ್ 28 ರನ್, ಅಲೆಕ್ಸ್ ಕ್ಯಾರಿ 38 ರನ್, ಮಾರ್ಕಸ್ ಸ್ಟೊಯಿನಿಸ್ 25 ರನ್, ಆಷ್ಟನ್ ಅಗರ್ 17 ರನ್, ಸೀನ್ ಅಬಾಟ್ 26 ರನ್, ಮಿಚೆಲ್ ಸ್ಟಾರ್ಕ್ 10 ರನ್ ಮತ್ತು ಆಡಮ್ ಝಂಪಾ 10 ರನ್ ಗಳಿಸಿದರು.
Innings Break!
Australia are all out for 2⃣6⃣9⃣ in the first innings!
3️⃣ wickets each for @hardikpandya7 & @imkuldeep18
2️⃣ wickets each for @akshar2026 & @mdsirajofficial
Over to our batters 💪🏻
Scorecard ▶️ https://t.co/eNLPoZpkqi #TeamIndia | #INDvAUS | @mastercardindia pic.twitter.com/2LcTkRSPiC
— BCCI (@BCCI) March 22, 2023
ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಭಾರತ ತಂಡ ಭರ್ಜರಿ ಬೌಲಿಂಗ್ ಮಾಡಿತು. ಆರಂಭದಿಂದಲೂ ಸಂಘಟಿತ ದಾಳಿ ನಡೆಸಿದ ಟೀಂ ಇಂಡಿಯಾ ಆಸ್ಟ್ರೇಲಿಯಾ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಭಾರತದ ಪರ ಹಾರ್ದಿಕ್ ಪಾಂಡ್ಯ ಮತ್ತು ಕಲ್ದೀಪ್ ಯಾದವ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಾಲ 2 ವಿಕೆಟ್ ಕಬಳಿಸಿದರು.
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ 2023 ವೇಳಾಪಟ್ಟಿ ಲೀಕ್, ಈ ದಿನ ನಡೆಯುತ್ತಂತೆ ಫೈನಲ್!
ದಾಖಲೆ ಮುಂದುವರೆಸಲು ಟೀಂ ಇಂಡಿಯಾ ಸಿದ್ಧ:
ಆತಿಥೇಯ ಭಾರತ ತಂಡ ತನ್ನ ತವರು ನೆಲದಲ್ಲಿ ಸತತ ಎಂಟನೇ ಏಕದಿನ ಸರಣಿ ಗೆಲ್ಲುವತ್ತ ಕಣ್ಣಿಟ್ಟಿದೆ. 2019 ರಿಂದ, ಭಾರತವು ತವರಿನಲ್ಲಿ ಯಾವುದೇ ಏಕದಿನ ಸರಣಿಯನ್ನು ಕಳೆದುಕೊಂಡಿಲ್ಲ. ಆಗ ಆಸ್ಟ್ರೇಲಿಯಾ ಮಾತ್ರ ಅವರನ್ನು 3-2ರಿಂದ ಸೋಲಿಸಿತು. ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಕಾಂಗರೂಗಳನ್ನು ಸೋಲಿಸಿದರೆ, ವಿಶಾಖಪಟ್ಟಣಂನಲ್ಲಿ ಆಸ್ಟ್ರೇಲಿಯಾ 10 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಭಾರತ ಇಲ್ಲಿ ಆಡಿದ 13 ಏಕದಿನ ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿದೆ. ಚೆನ್ನೈನಲ್ಲಿ 21 ಏಕದಿನ ಪಂದ್ಯಗಳು ನಡೆದಿದ್ದು, ಇದರಲ್ಲಿ ಟಾಸ್ ಗೆದ್ದ ತಂಡ 15 ಪಂದ್ಯಗಳನ್ನು ಗೆದ್ದಿದೆ.
ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೊಯಿನಿಸ್, ಆಷ್ಟನ್ ಅಗರ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ