IND vs AUS: ಆಸೀಸ್​ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್​, ತಂಡದಿಂದ ಸ್ಟಾರ್ ​ಬೌಲರ್​ ಔಟ್​

IND vs AUS: ಆಸೀಸ್ ವಿರುದ್ಧದ ಪಮದ್ಯಕ್ಕೆ​ ಇನ್ನೊಂದು ದಿನ ಬಾಕಿ ಇರುವ ಮುನ್ನವೇ ಟೀಂ ಇಂಡಿಯಾಗೆ ಸಂಕಷ್ಟವೊಂದು ಎದುರಾಗಿದೆ. ತಂಡದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

ಟೀಂ ಇಂಡಿಯಾ

ಟೀಂ ಇಂಡಿಯಾ

  • Share this:
ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ ಮೂರು T20 ಪಂದ್ಯಗಳ ಸರಣಿ ಮಂಗಳವಾರದಿಂದ (ಸೆಪ್ಟೆಂಬರ್ 20) ಆರಂಭವಾಗಲಿದೆ. ಎರಡೂ ತಂಡಗಳು ಮೊಹಾಲಿ (Mohali)  ತಲುಪಿವೆ. ಟಿ20 ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಆದರೆ ಪಂದ್ಯಕ್ಕೆ ಇನ್ನೊಂದು ದಿನ ಬಾಕಿ ಇರುವ ಮುನ್ನವೇ ಟೀಂ ಇಂಡಿಯಾಗೆ ಸಂಕಷ್ಟವೊಂದು ಎದುರಾಗಿದೆ. ತಂಡದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ (Mohammed Shami) ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೋವಿಡ್ (Covid) ಪಾಸಿಟಿವ್ ಇರುವ ಕಾರಣ ಶಮಿ ಆಸ್ಟ್ರೇಲಿಯಾ (Australia) ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ.

ಕೊರೋನಾದಿಂದ ಸರಣಿಯಿಂದ ಔಟ್​ ಆದ ಶಮಿ:

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯ ಸೆಪ್ಟೆಂಬರ್ 20 ರಂದು ಮೊಹಾಲಿಯಲ್ಲಿ ನಡೆಯಲಿದೆ. ಟೀಂ ಇಂಡಿಯಾ ಶನಿವಾರ ಮೊಹಾಲಿ ತಲುಪಿದ ನಂತರ, ಶಮಿ ಕೊರೋನಾ ಪಾಸಿಟಿವ್ ಎಂಬ ಮಾಹಿತಿ ಬಿಸಿಸಿಐ ಮತ್ತು ತಂಡದ ನಿರ್ವಹಣೆಗೆ ತಿಳಿದಿದೆ. ಹೀಗಾಗಿ ಅವರನ್ನು ಆಸೀಸ್​ ವಿರುದ್ಧದ ಸರಣಿಯಿಂದ ಕೈಬಿಟ್ಟಿರುವುದಾಗಿ ಬಿಸಿಸಿಐ ತಿಳಿಸಿದೆ. ಅಲ್ಲದೇ ಶಮಿಗೆ ಕೋವಿಡ್-19  ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ವಿಶ್ರಾಂತಿಯಲ್ಲಿದ್ದಾರೆ. ಇನ್ನು, ಆಸ್ಟ್ರೇಲಿಯಾ ತಂಡ ಕೂಡ ಮೊಹಾಲಿ ತಲುಪಿದ್ದು, ಆ್ಯರೋನ್ ಫಿಂಚ್ ನಾಯಕತ್ವದ ಕಾಂಗರೂ ತಂಡ ಅಭ್ಯಾಸವನ್ನೂ ಆರಂಭಿಸಿದೆ.

ಶಮಿ ಬದಲಿಗೆ ಉಮೇಶ್​ ಆಯ್ಕೆ:

ಹೌದು, ಮೊಹ್ಮಮದ್ ಶಮಿ ಅವರಿಗೆ ಕೊರೋನಾ ಪಾಸಿಟಿವ್ ಆದ ಕಾರಣ ಆಸೀಸ್​ ಸರಣಿಯಿಂದ ಹಿರನಡೆದಿದ್ದಾರೆ. ಹೀಗಾಗಿ ಶಮಿ ಬದಲಿ ಆಟಗಾರನಾಗಿ ತಂಡಕ್ಕೆ ಅನುಭವಿ ವೇಗಿ ಉಮೇಶ್​ ಯಾದವ್ ಆಯ್ಕೆ ಆಗಿದ್ದಾರೆ. ಉಮೇಶ್​ 7 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಕೊನೆಯ ಸಲ ಭಾರತದ ಪರ ಟಿ20 ಪಂದ್ಯವನ್ನಾಡಿದ್ದರು.

ಇದನ್ನೂ ಓದಿ: IND vs AUS: ಭಾರತ-ಆಸ್ಟ್ರೇಲಿಯಾ ಸರಣಿ; ಸ್ಥಳ, ಸಮಯ, ಲೈವ್ ಸ್ಟ್ರೀಮಿಂಗ್ ಕುರಿತ ಸಂಪೂರ್ಣ ವಿವರ

ಟಿ20 ವಿಶ್ವಕಪ್​ಗೂ ಆಯ್ಕೆ ಆಗದ ಶಮಿ:

32 ವರ್ಷದ ಮೊಹಮ್ಮದ್ ಶಮಿ ಮುಂಬರುವ T20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸೇರ್ಪಡೆಗೊಂಡಿಲ್ಲ. ಸುದೀರ್ಘ ಸಮಯದ ನಂತರ ಅವರು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ದೇಶೀಯ ಟಿ20 ತಂಡದಲ್ಲಿ ಸ್ಥಾನ ಪಡೆದರು. ಶಮಿ ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಆದರೆ ಇದೀಗ ಕೊರೋನಾ ಕಾರಣದಿಂದ ಅವರು ಆಸ್ಟ್ರೇಲಿಯಾ ಸರಣಿಯಿಂದಲೂ ಹೊರನಡೆಯಬೇಕಾಗಿದೆ.

IND vs AUS ವೇಳಾಪಟ್ಟಿ: 
 ಮೊದಲ T20- 20 ಸೆಪ್ಟೆಂಬರ್, ಮೊಹಾಲಿಎರಡನೇ T20- 23 ಸೆಪ್ಟೆಂಬರ್, ನಾಗ್ಪುರ
ಮೂರನೇ T20- 25 ಸೆಪ್ಟೆಂಬರ್, ಹೈದರಾಬಾದ್

ಪಂದ್ಯದ ನೇರಪ್ರಸಾರ ಎಲ್ಲಿ?:

ಇನ್ನು, ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯವು ಭಾರತದಲ್ಲಿಯೇ ನಡೆಲಿರುವ ಕಾರಣ ಅದರಲ್ಲಿಯೂ ಟಿ20 ಪಂದ್ಯಗಳಾಗಿರುವುದರಿಂದ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ನಡೆಯುತ್ತದೆ. ಜೊತೆಗೆ 7:30 ಪಂದ್ಯ ಆರಂಭವಾಗುತ್ತದೆ. ಈ ಸರಣಿಯನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನೇರ ಪ್ರಸಾರವನ್ನು ವೀಕ್ಷಿಸಬಹುದು.  ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಪಂದ್ಯದ ಲೈವ್ ಅಪ್‌ಡೇಟ್‌ಗಳಿಗಾಗಿ News18 Kannada ವೆಬ್‌ಸೈಟ್ ಅನುಸರಿಸಿ.

ಇದನ್ನೂ ಓದಿ: T20 Cricket New Rules: ಟಿ20 ಕ್ರಿಕೆಟ್​ನಲ್ಲಿ ಜಾರಿಯಾಗಲಿದೆ ಹೊಸ ನಿಯಮ, ಏನಿದು ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್?


ಆಸ್ಟ್ರೇಲಿಯಾ ಸರಣಿಗೆ ಭಾರತ ತಂಡ:

ರೋಹಿತ್ ಶರ್ಮಾ (C), ಕೆ.ಎಲ್. ರಾಹುಲ್ (WC), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಜಸ್‌ಪ್ರೀತ್ ಬುಮ್ರಾ, ಉಮೇಶ್ ಯಾದವ್.
Published by:shrikrishna bhat
First published: