ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ (Border–Gavaskar Trophy) ಸರಣಿಯ ಮೊದಲ ಪಂದ್ಯ ನಾಗಪುರದಲ್ಲಿ ನಡೆಯಲಿದೆ. ಫೆಬ್ರವರಿ 9 ರಿಂದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ (Vidarbha Cricket Association Stadium) ಆರಂಭವಾಗಲಿದೆ. ಈ ಸರಣಿಯ ಬಗ್ಗೆ ಕ್ರಿಕೆಟ್ ಪ್ರೇಮಿಗಳ ಕುತೂಹಲ ಮುಗಿಲು ಮುಟ್ಟಿದೆ. ಈಗಾಗಲೇ ಪಂದ್ಯದ ಟಿಕೆಟ್ ಮಾರಾಟ ಆರಂಭವಾಗಿದ್ದು, ಕೇವಲ ಹತ್ತು ರೂಪಾಯಿಗೆ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಹೌದು, ಮೊದಲ ಟೆಸ್ಟ್ ಪಂದ್ಯದ ಟಿಕೆಟ್‌ಗಳು ಜನವರಿ 29ರಿಂದ ಮಾರಾಟವಾಗಿವೆ. ಟಿಕೆಟ್ ಮಾರಾಟದ ಮೊದಲ ಮೂರು ದಿನಗಳನ್ನು ಲೈಫ್ ಸದಸ್ಯರು ಮತ್ತು ಅದರ ಅಂಗಸಂಸ್ಥೆ ಕ್ಲಬ್‌ಗಳಿಗೆ ಕಾಯ್ದಿರಿಸಲಾಗಿದೆ. ಆನ್‌ಲೈನ್‌ನಲ್ಲಿ ಟಿಕೆಟ್‌ಗಳು ಲಭ್ಯವಿಲ್ಲದ ಕಾರಣ, ಪ್ರೇಕ್ಷಕರು ಆಫ್‌ಲೈನ್ ಟಿಕೆಟ್‌ಗಳನ್ನು ಬುಕ್ ಮಾಡಲು ಬಿಲಿಮೋರಿಯಾ ಪೆವಿಲಿಯನ್, ವಿಸಿಎ, ಸಿವಿಲ್ ಲೈನ್ಸ್, ನಾಗ್ಪುರಕ್ಕೆ ಹೋಗಬೇಕಾಗುತ್ತದೆ. ಟಿಕೆಟ್ ವಿಂಡೋ ಬೆಳಿಗ್ಗೆ 10:00 ರಿಂದ ಸಂಜೆ 05:00ರ ವರೆಗೆ ತೆರೆದಿರುತ್ತದೆ. ಜೊತೆಗೆ ಟಿಕೆಟ್ ಮಾರಾಟವು ಫೆಬ್ರವರಿ 7 ರಂದು ಸಂಜೆ 5:00 ಗಂಟೆ ವರೆಗೆ ದೊರಕಲಿದೆ.
10 ರೂಪಾಯಿಗೆ ಟಿಕೆಟ್:
ಹೌದು, ವಿದರ್ಭ ಕ್ರಿಕೆಟ್ ಸಂಸ್ಥೆ ವತಿಯಿಂದ ಈ ವರ್ಷ ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಮಹತ್ವ ನೀಡುವ ಕಾರಣ, ವಿಸಿಎ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ವಿದ್ಯಾರ್ಥಿಗೆ ಕೇವಲ 10 ರೂಪಾಯಿ ಟಿಕೆಟ್ ದರದಲ್ಲಿ ಪಂದ್ಯವನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ.
ವಿದ್ಯಾರ್ಥಿಗಳಿಗೆ 4,000 ಟಿಕೆಟ್:
ವಿದ್ಯಾರ್ಥಿಗಳಿಗಾಗಿ ಅಂದಾಜು 4 ಸಾವಿರ ಟಿಕೆಟ್‌ಗಳನ್ನು ಕಾಯ್ದಿರಿಸಿರುವುದರಿಂದ, ಈ ಟಿಕೆಟ್‌ಗಳನ್ನು ಶಾಲೆಯ ಮೂಲಕ ಮತ್ತು ಆಫ್‌ಲೈನ್ ಮೂಲಕ ಮಾತ್ರ ಖರೀದಿಸಬಹುದು. ಆದಾಗ್ಯೂ, ಈ ಟಿಕೆಟ್‌ಗಳು ಪ್ರತ್ಯೇಕವಾಗಿ ಲಭ್ಯವಿರುವುದಿಲ್ಲ. ಪ್ರತಿ 25 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಬ್ಬರಿಗೂ ವಿತರಿಸಲಾಗುವುದು. ಪಂದ್ಯದ ದಿನದಂದು ಗುರುತಿನ ಚೀಟಿಯನ್ನು ಕೊಂಡೊಯ್ಯಬೇಕು. ವಿದ್ಯಾರ್ಥಿಗಳ ಟಿಕೆಟ್‌ಗಳನ್ನು ಹೊರತುಪಡಿಸಿ, ಇತರ ಎಲ್ಲಾ ಟಿಕೆಟ್‌ಗಳು ಸೀಸನ್ ಪಾಸ್‌ಗಳಾಗಿವೆ, ಇದು ಟೆಸ್ಟ್ ಪಂದ್ಯದ ಎಲ್ಲಾ ಐದು ದಿನಗಳವರೆಗೆ ಮಾನ್ಯವಾಗಿರುತ್ತದೆ.
ಇದನ್ನೂ ಓದಿ: IND vs AUS Test: ಆಸೀಸ್ ಸರಣಿಗೂ ಮುನ್ನ ಬಿಸಿಸಿಐ ಮಹತ್ವದ ನಿರ್ಧಾರ, ಈ ಇಬ್ಬರು ಆಟಗಾರರ ಮೇಲೆ ಹೆಚ್ಚಿದ ನಿರೀಕ್ಷೆ
4 ಟಿಕೆಟ್‌ಗಳ ಮಿತಿ:
ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಸದಸ್ಯರ ಟಿಕೆಟ್‌ಗಳು ಲಭ್ಯವಿಲ್ಲದ ಕಾರಣ ಟಿಕೆಟ್‌ಗಳನ್ನು ಬುಕ್ ಮಾಡಲು ಬಿಲಿಮೋರಿಯಾ ಪೆವಿಲಿಯನ್, ವಿಸಿಎ, ಸಿವಿಲ್ ಲೈನ್ಸ್, ನಾಗ್ಪುರಕ್ಕೆ ಭೇಟಿ ನೀಡಬೇಕು. ಬುಕ್ ಮೈ ಶೋ ಎಂಬ ಆನ್‌ಲೈನ್ ಟಿಕೆಟ್ ಪಾಲುದಾರರ ಮೂಲಕ ಮಾತ್ರ ಸಾಮಾನ್ಯ ಟಿಕೆಟ್‌ಗಳು ಲಭ್ಯವಿರುತ್ತವೆ. ಗರಿಷ್ಠ ಮಿತಿ ಪ್ರತಿ ವ್ಯಕ್ತಿಗೆ ನಾಲ್ಕು ಟಿಕೆಟ್‌ಗಳು.
WTC ರೇಸ್ನಲ್ಲಿ ಭಾರತ:
ಆಸ್ಟ್ರೇಲಿಯಾ ತಂಡದ ದಾಖಲೆ ಭಾರತದಲ್ಲಿ ವಿಶೇಷವಾಗಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಟೇಬಲ್ ಬಗ್ಗೆ ಮಾತನಾಡುತ್ತಾ, ಕಾಂಗರೂ ತಂಡ ಪ್ರಸ್ತುತ ನಂಬರ್ ಒನ್ ಸ್ಥಾನದಲ್ಲಿದೆ. ಮತ್ತೊಂದೆಡೆ ಟೀಂ ಇಂಡಿಯಾ ಎರಡನೇ ಸ್ಥಾನದಲ್ಲಿದೆ. ಜೂನ್‌ನಲ್ಲಿ ಇಬ್ಬರ ನಡುವೆ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇದೆ. ಇದು ಚಾಂಪಿಯನ್‌ಶಿಪ್‌ನ ಎರಡನೇ ಋತುವಾಗಿದೆ. ಮೊದಲ ಸೀಸನ್ ನಲ್ಲೂ ಭಾರತ ತಂಡ ಪ್ರಶಸ್ತಿ ಸುತ್ತು ತಲುಪಿದ್ದರೂ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿತ್ತು.
ಆಸೀಸ್ ವಿರುದ್ಧದ 2 ಟೆಸ್ಟ್‌ಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (WK), ಇಶಾನ್ ಕಿಶನ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ