• Home
  • »
  • News
  • »
  • sports
  • »
  • IND vs AUS: ಕೊಹ್ಲಿ-ಯಾದವ್​ ಅಬ್ಬರಕ್ಕೆ ತತ್ತರಿಸಿದ ಆಸೀಸ್​, ಸರಣಿ ಗೆದ್ದ ಟೀಂ ಇಂಡಿಯಾ ಬಾಯ್ಸ್

IND vs AUS: ಕೊಹ್ಲಿ-ಯಾದವ್​ ಅಬ್ಬರಕ್ಕೆ ತತ್ತರಿಸಿದ ಆಸೀಸ್​, ಸರಣಿ ಗೆದ್ದ ಟೀಂ ಇಂಡಿಯಾ ಬಾಯ್ಸ್

ಭಾರತ ತಂಡಕ್ಕೆ ಜಯ

ಭಾರತ ತಂಡಕ್ಕೆ ಜಯ

IND vs AUS: ಟೀಂ ಇಂಡಿಯಾ 19.5 ಓವರ್​ಗಳಲ್ಲಿ4 ವಿಕೆಟ್​ ನಷ್ಟಕ್ಕೆ 187 ರನ್ ಗಳಿಸುವ ಮೂಲಕ ಭರ್ಜರಿ 6 ವಿಕೆಟ್​ಜಯ ದಾಖಲಿಸು ಮೂಲಕ ಸರಣಿಯನ್ನು ಗೆದ್ದು ಬೀಗಿದೆ.

  • Share this:

ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ 3 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯವು ಇಂದು ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Rajiv Gandhi International Cricket Stadium Hyderabad) ನಡೆಯಿತು. ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಆಸೀಸ್​ ಭಾರತ ತಂಡಕ್ಕೆ 187 ರನ್​ಗಳ ಟಾರ್ಗೆಟ್​ ನೀಡಿತು. ಈ ಮೊತ್ತ ಬೆನ್ನಟ್ಟಿದ  ಟೀಂ ಇಂಡಿಯಾ 19.5 ಓವರ್​ಗಳಲ್ಲಿ4 ವಿಕೆಟ್​ ನಷ್ಟಕ್ಕೆ 187 ರನ್ ಗಳಿಸುವ ಮೂಲಕ ಭರ್ಜರಿ 6 ವಿಕೆಟ್​ಜಯ ದಾಖಲಿಸು ಮೂಲಕ ಸರಣಿಯನ್ನು ಗೆದ್ದು ಬೀಗಿದೆ. ಈ ಮೂಲಕ ಟಿ20 ವಿಶ್ವಕಪ್​ಗೂ ಮುನ್ನ ಭಾರತ ಸರಣಿ ಗೆದ್ದಿರುವುದು ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.


ಯಾದವ್​-ಕೊಹ್ಲಿ ಅದ್ಭುತ ಬ್ಯಾಟಿಂಗ್:


ಇನ್ನು, 187 ರನ್ ಗಳ ಟಾರ್ಗೆಟ್​ ಬೆನ್ನಟ್ಟಿದ ಟೀಂ ಇಂಡಿಯಾ 19.5 ಓವರ್​ಗಳಲ್ಲಿ4 ವಿಕೆಟ್​ ನಷ್ಟಕ್ಕೆ 187 ರನ್ ಗಳಿಸುವ ಮೂಲಕ ಭರ್ಜರಿ 6 ವಿಕೆಟ್​ಜಯ ದಾಖಲಿಸು ಮೂಲಕ ಸರಣಿಯನ್ನು ಗೆದ್ದು ಬೀಗಿದೆ. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 1 ರನ್ ಮತ್ತು ನಾಯಕ ರೋಹಿತ್ ಶರ್ಮಾ ಕೇವಲ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ಜೊತೆಗೂಡಿದ ಕಿಂಗ್​ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್​ 100 ರನ್ ಜೊತೆಯಾಟ ಆಡುವ ಮೂಲಕ ಆಸೀ್ಸ್​ ಬೌಲರ್​ಗಳ ಬೆವರಿಳಿಸಿದರು. ಸೂರ್ಯಕುಮಾರ್ ಯಾದವ್ 36 ಎಸೆತದಲ್ಲಿ 5 ಸಿಕ್ಸ ಮತ್ತು 5 ಬೌಂಡರಿಗಳ ನೆರವಿನಿಂದ 69 ರನ್ ಗಳಿಸಿ ಅಬ್ಬರಿಸಿದರು.ಅವರಂತೆ ಕಿಂಗ್ ಕೊಹ್ಲಿ ಸಹ 48 ಬೌಲ್​ಗಳಲ್ಲಿ 4 ಸಿಕ್ಸ್ ಮತ್ತು 3 ಪೋರ್​ಹಳ ನೆರವಿನಿಂದ 63 ರನ್ ಗಳಿಸಿ ತಂಡ ಗೆಲ್ಲುವಲ್ಲಿ ಪ್ರಮುಖರಾದರು. ಉಳಿದಂತೆ ಹಾರ್ದಿಕ್ ಪಾಂಡ್ಯ 25 ರನ್  ಮತ್ತು ಅಂತಿಮವಾಗಿ 1 ರನ್ ಗಳಿಸಿದರು.


ಸಂಘಟಿತ ಬೌಲಿಂಗ್​ ಮಾಡಿದ ಆಸೀಸ್​:


ಆಸೀಸ್​ ಪರ ಯಾವೊಬ್ಬ ಬೌಲರ್​ ಸಹ ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಲಿಲ್ಲ. ಡ್ಯಾನಿಯಲ್ ಸ್ಯಾಮ್ಸ್ 2 ವಿಕೆಟ್​, ಜೋಸ್​ ಹ್ಯಾಜಲ್ಸ್ವುಡ್​ ಮತ್ತು ಪ್ಯಾಟ್​ ಕಮ್ಮಿಂಗ್​ಸನ್​ ತಲಾ 12 ವಿಕೆಟ್​ ಪಡೆದರೂ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದವರು.


ಇದನ್ನೂ ಓದಿ: Matthew Wade: 11 ತಿಂಗಳಲ್ಲಿ ಕೇವಲ 1 ಬಾರಿ ಔಟ್, ಕ್ಯಾನ್ಸರ್ ಗೆದ್ದವ ಇದೀಗ T20 ಕ್ರಿಕೆಟ್​ನ ಗ್ರೇಟ್​ ಫಿನಿಶರ್!


ಬೌಲಿಂಗ್​ನಲ್ಲಿ ಮಿಂಚಿದ ಅಕ್ಷರ್​ ಪಟೇಲ್​:


ಈ ಸರಣಿಯಲ್ಲಿ ಭಾರತದ ಪರ ಅಕ್ಷರ್​ ಪಟೇಲ್​ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇಂದೂ ಸಹ ಅಕ್ಷರ್​ ಉತ್ತಮ ಬೌಲಿಂಗ್​ ದಾಳಿ ನಡೆಸಿದ ಅವರು 4 ಓವರ್ ಮಾಡಿ 33 ರನ್​​ ನೀಡಿ ಪ್ರಮುಖ 3 ವಿಕೆಟ್​ ಪಡೆದರು. ಅಕ್ಷರ್​ ಪಟೇಲ್​ ಈ ಸರಣಿಯಲ್ಲಿ ಒಟ್ಟು 8 ವಿಕೆಟ್​ ಪಡೆದು ಮಿಂಚಿದ್ದಾರೆ. ಉಳಿದಂತೆ ಚಹಾಲ್​ 22 ರನ್ ನೀಡಿ 2 ವಿಕೆಟ್​ ಪಡೆದರೆ, ಇತ್ತ ಬುಮ್ರಾ 4 ಓವರ್ ಬೌಲ್​ ಮಾಡಿ 50 ರನ್ ನೀಡಿ ಪಂದ್ಯದಲ್ಲಿ ದುಬಾರಿ ಬೌಲರ್​ ಆದರು. ಅವರಂತೆ ಭುವನೇಶ್ವರ್ ಕುಮಾರ್ ಸಹ  4 ಓವರ್ ಬೌಲ್ ಮಾಡಿ 1 ವಿಕೆಟ್​ಗೆ 39 ರನ್ ನೀಡಿ ಇವರೂ ಸಹ ಇಂದು ಕಾಸ್ಟ್ಲಿ ಆದರು.  ಉಳಿದಂತೆ ಹರ್ಷಲ್ ಪಟೇಲ್ 2 ಓವರ್ ಮಾಡಿ 18 ರನ್ ನೀಡಿ 1 ವಿಕೆಟ್ ಪಡೆದರು.

Published by:shrikrishna bhat
First published: