IND vs AUS: ಟೀಂ ಇಂಡಿಯಾ ಎದುರು ಆಸ್ಟ್ರೇಲಿಯಾಗೆ ಭರ್ಜರಿ ಜಯ, ವ್ಯರ್ಥವಾದ ಪಾಂಡ್ಯ-ರಾಹುಲ್​ ಆಟ

IND vs AUS: ಆಸ್ಟ್ರೇಲಿಯಾ 19.2 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 211 ರನ್​ ಗಳಿಸುವ ಮೂಲಕ 4 ವಿಕೆಟ್​ಗಳ ಜಯ ದಾಖಲಿಸಿತು. ಈ ಮೂಲಕ ಸರಣಿಯಲ್ಲಿ ಆಸೀಸ್​ 1-0 ಅಂತರದ ಮುನ್ನಡೆ ಸಾಧಿಸಿತು.

ಆಸ್ಟ್ರೇಲಿಯಾ ತಂಡಕ್ಕೆ ಜಯ

ಆಸ್ಟ್ರೇಲಿಯಾ ತಂಡಕ್ಕೆ ಜಯ

  • Share this:
ಇಂದು ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (Punjab Cricket Association) ​​ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯಿತು. ಈ ಮ್ಯಾಚ್​ ನಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಕೆಎಲ್ ರಾಹುಲ್​ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ನಿಗದಿತ 20 ಓವರ್​ ನಲ್ಲಿ 6 ವಿಕೆಟ್​ ನಷ್ಟಕ್ಕೆ 208 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು 19.2 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 211 ರನ್​ ಗಳಿಸುವ ಮೂಲಕ 4 ವಿಕೆಟ್​ಗಳ ಜಯ ದಾಖಲಿಸಿತು. ಈ ಮೂಲಕ ಸರಣಿಯಲ್ಲಿ ಆಸೀಸ್​ 1-0 ಅಂತರದ ಮುನ್ನಡೆ ಸಾಧಿಸಿತು.

ಉತ್ತಮ ಬ್ಯಾಟಿಂಗ್​ ಮಾಡಿದ ಆಸೀಸ್​:

ಇನ್ನು,  ಆಸ್ಟ್ರೇಲಿಯಾ 19.2 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 211 ರನ್​ ಗಳಿಸುವ ಮೂಲಕ 4 ವಿಕೆಟ್​ಗಳ ಜಯ ದಾಖಲಿಸಿತು. ಈ ಮೂಲಕ ಸರಣಿಯಲ್ಲಿ ಆಸೀಸ್​ 1-0 ಅಂತರದ ಮುನ್ನಡೆ ಸಾಧಿಸಿತು. ಆರೋನ್ ಫಿಂಚ್ 22 ರನ್, ಕ್ಯಾಮೆರಾನ್ ಗ್ರೀನ್ 61 ರನ್, ಸ್ಟೀವನ್ ಸ್ಮಿತ್ 35 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 1 ರನ್, ಜೋಶ್ ಇಂಗ್ಲಿಸ್ 17 ರನ್, ಟಿಮ್ ಡೇವಿಡ್ 18 ರನ್, ಮ್ಯಾಥ್ಯೂ ವೇಡ್ 45 ರನ್ ಮತ್ತು ಪ್ಯಾಟ್ ಕಮ್ಮಿನ್ಸ್ 4 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.





ಉತ್ತಮ ದಾಳಿ ಮಾಡಿದ ಪಟೇಲ್​:

ಜಡೇಜಾ ಅವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಆಯ್ಕೆ ಆಗಿದ್ದ ಅಕ್ಷರ್ ಪಟೇಲ್​ ಇಂದು ಆಸೀಸ್​ ವಿರುದ್ಧ ಉತ್ತಮ ಬೌಲಿಂಗ್​ ದಾಳಿ ಮಾಡಿದರು. ಅವರು, 4 ಓವರ್ ಮಾಡಿ 17 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಉಮೇಶ್​ ಯಾದವ್ 2 ಮತ್ತು ಚಹಾಲ್ 1 ವಿಕೆಟ್​ ಪಡೆದರು.

ಇದನ್ನೂ ಓದಿ: ICC Cricket Rules: ಅಕ್ಟೋಬರ್ 1 ರಿಂದ ಹೊಸ ನಿಯಮ, ಬೌಲರ್​ ಈ ರೀತಿ ಮಾಡಿದ್ರೆ ಬ್ಯಾಟ್ಸ್​ಮನ್​ಗೆ ಸಿಗುತ್ತೆ 5 ರನ್

ಭಾರತದ ಪರ ಅಬ್ಬರಿಸಿದ ಪಾಂಡ್ಯ-ರಾಹುಲ್​:

ಹೌದು, ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡದ ಪರ ಇಂದು ಕೆಎಲ್ ರಾಹುಲ್​ ಮತ್ತು ಆಲ್​ ರೌಂಡರ್ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡಿದರು.  ರಾಹುಲ್​ ಇಂದು 35 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಫೋರ್​ ನೆರವಿನಿಂದ 55 ರನ್ ಗಳಿಸಿ ಜೋಶ್ ಹ್ಯಾಝಲ್‌ವುಡ್ ಬೌಲಿಂಗ್​ ನಲ್ಲಿ ವಿಕೆಟ್​ ಒಪ್ಪಿಸಿದರು. ಅದರಂತೆ ಮಿಡಲ್​ ಆರ್ಡರ್​ನಲ್ಲಿ ಹಾರ್ದಿಕ್ ಪಾಂಡ್ಯ 7 ಫೋರ್​ ಮತ್ತು 5 ಸಿಕ್ಸ್ ನೆರವಿನಿಂದ ಬರೋಬ್ಬರಿ 71 ರನ್ ಗಳಿಸಿ ಅಜೇಯರಾಗಿ ಉಳಿದರು.

ಉಳಿದಂತೆ ನಾಯಕ ರೋಹಿತ್​ ಶರ್ಮಾ 1 ಸಿಕ್ಸ್ 1 ಫೋರ್​ ನೆರವಿನಿಂದ ಕೇವಲ 11 ರನ್, ವಿರಾಟ್​ ಕೊಹ್ಲಿ 7 ಬೌಲ್​ ಆಡಿ ಕೇವಲ 2 ರನ್, ಸೂರ್ಯಕುಮಾರ್ ಯಾದವ್ 4 ಸಿಕ್ಸ್ ಮತ್ತು 2 ಬೌಂಡರಿ ನೆರವಿನಿಂದ 46 ರನ್. ಉಳಿದಂತೆ  ಅಕ್ಷರ್ ಪಟೇಲ್​ 6 ರನ್, ದಿನೇಶ್​ ಕಾರ್ತಿಕ್​ 6 ರನ್, ಹರ್ಷಲ್ ಪಟೇಲ್​ 7 ರನ್ ಗಳಿಸಿದರು.

ಇದನ್ನೂ ಓದಿ: MR Poovamma: ಉದ್ದೀಪನ ಮದ್ದು ಸೇವನೆ, ಕನ್ನಡತಿ ಅಥ್ಲೀಟ್​ಗೆ 2 ವರ್ಷ ನಿಷೇಧ

ಮುಂದಿನ ಪಂದ್ಯ ಯಾವಾಗ?:

ಭಾರತ ಮತ್ತು ಆಸೀಸ್​ ನಡುವಿನ ಮುಂದಿನ ಪಂದ್ಯ 2ನೇ ಟಿ20 ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಸೆ.23ರಂದು ಶುಕ್ರವಾರ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್​ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.
Published by:shrikrishna bhat
First published: