Rishabh Pant: ಸೋಲಿನ ಬಳಿಕ ನೆನಪಾದ ರಿಷಭ್​ ಪಂತ್​, ಮಿಸ್​ ಯು ಹೀರೋ ಎಂದ ಫ್ಯಾನ್ಸ್

ರಿಷಭ್ ಪಂತ್

ರಿಷಭ್ ಪಂತ್

Rishabh Pant: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಮೂರನೇ ದಿನದಾಟದಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗಳಿಂದ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪ್ರವೇಶಿಸಿತು.

  • Share this:

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಭಾರತ ಎರಡೂ ಇನ್ನಿಂಗ್ಸ್‌ಗಳಲ್ಲಿ 109 ಮತ್ತು 163 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಮೂರನೇ ದಿನದಾಟದಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗಳಿಂದ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿತು. ಇಂದೋರ್ ಟೆಸ್ಟ್ ಪಂದ್ಯದ ಸೋಲಿನ ನಂತರ, ಪ್ರಸ್ತುತ ಗಾಯದಿಂದ ಬಳಲುತ್ತಿರುವ ರಿಷಭ್ ಪಂತ್ ಅವರನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.


ಪಂತ್​ ನೆನಪಿಸಿಕೊಂಡ ಫ್ಯಾನ್ಸ್:


ಕೆಲವು ವರ್ಷಗಳ ಹಿಂದೆ, ಅಜಿಂಕ್ಯ ರಹಾನೆ ನಾಯಕತ್ವದಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಅವರ ತವರು ನೆಲದಲ್ಲಿ ಸೋಲಿಸಿತು. ಈ ಸರಣಿಯಲ್ಲಿ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಪ್ರದರ್ಶನ ಗಮನಾರ್ಹವಾಗಿತ್ತು. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಕೂಡ ಭಾರತ ತಂಡದ ಭಾಗವಾಗಿದ್ದರು. ಆದರೆ 30 ಡಿಸೆಂಬರ್ 2022ರಂದು ಅವರ ಕಾರು ಭೀಕರ ಅಪಘಾತಕ್ಕೆ ಒಳಗಾಯಿತು ಮತ್ತು ರಿಷಭ್ ಕೂಡ ಗಂಭೀರವಾಗಿ ಗಾಯಗೊಂಡರು.



ಸದ್ಯ ರಿಷಭ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಪಂತ್ ಅನುಪಸ್ಥಿತಿಯಲ್ಲಿ ಭಾರತ ತಂಡದ ಸೋಲಿನ ನಂತರ ಅಭಿಮಾನಿಗಳು ರಿಷಭ್ ಪಂತ್ ಅವರನ್ನು ಮಿಸ್ ಮಾಡಿಕೊಂಡಿದ್ದಾರೆ. ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಭಾರತದ ಸೋಲಿನ ನಂತರ ಅನೇಕರು ರಿಷಭ್​ ಪಂತ್ ಅವರ ಮೀಮ್‌ಗಳನ್ನು ಹಂಚಿಕೊಳ್ಳುವ ಮೂಲಕ ಭಾರತ ತಂಡವನ್ನು ಟ್ರೋಲ್ ಮಾಡಿದ್ದಾರೆ. ಸದ್ಯ ಈ ಮೀಮ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಮಿಸ್​ ಯು ಪಂತ್​ ಎಂದು ಹೇಳುತ್ತಿದ್ದಾರೆ.



ಮಿಸ್​ ಯು ಪಂತ್​ ಎಂದ ಫ್ಯಾನ್ಸ್:


ಇನ್ನು, ಕಳೆದ ಬಾರ್ಡರ್​ ಗವಾಸ್ಕರ್​ ಟ್ರೋಫಿ ಸರಣಿಯಲ್ಲಿ ರಿಷಭ್​ ಪಂತ್​ ಏಕಾಂಗಿಯಾಗಿ ಹೋರಾಡಿ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ ಆಸೀಸ್​ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲಿಯೂ ಸ್ಪಿನ್​ ಪಿಚ್​ನಲ್ಲಿ ಅಬ್ಬರಿಸಿದ ಪಂತ್​ ಅದ್ಭುತ ಬ್ಯಾಟಿಂಗ್​ ಮಾಡಿದ್ದರು.



ಅದರಲ್ಲಿಯೂ ಆಸೀಸ್​ನ ನಾಥನ್​ ಲಿಯೋನ್​ ಬಾಲಿಂಗ್​ಗೆ ಪಂತ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ದರು. ಹೀಗಾಗಿ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತ ತಂಡದ ಭಾಗವಾಗಿದ್ದರು. ಆದರೆ ಇದೀಗ ಗಾಯದ ಸಮಸ್ಯೆಯಿಂದ ಹೊರಗಿರುವುದರಿಂದ ಅವರನ್ನು ಅಭಿಮಾನಿಗಳು ಸಖತ್​ ಮಿಸ್​ ಮಾಡಿಕೊಳ್ಳುತ್ತಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಮೀಮ್ಸ್ ಹರಿದಾಡುತ್ತಿದೆ.


ಇದನ್ನೂ ಓದಿ: WTC 2023 ಫೈನಲ್​ಗೆ ಆಸೀಸ್​ ಎಂಟ್ರಿ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಿಂದ ಟೀಂ ಇಂಡಿಯಾ ಔಟ್​?


ಹೇಗಿದೆ ಪಂತ್​ ಆರೋಗ್ಯ?:


ಇನ್ನು, ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ರಿಷಭ್​​ ಪಂತ್ ಕಾರು ಅಪಘಾತಕ್ಕೀಡಾಗಿದ್ದು ಗೊತ್ತೇ ಇದೆ. ಈ ಅಪಘಾತದಲ್ಲಿ ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದರು. ಅಪಘಾತದಲ್ಲಿ ಅವರ ಬೆನ್ನು, ತಲೆಗಳಿಗೆ ಗಾಯಗಳಾಗಿದ್ದವು. ಅವರ ಬಲಗಾಲಿನ ಮೂರು ಅಸ್ಥಿರಜ್ಜು ಹಾಳಾಗಿತ್ತು. ಆದರೆ ವೈದ್ಯರು ಅವರ ಕಾಲಿಗೆ ಎರಡು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಇದೀಗ ಅವರು ಎದ್ದು ನಿಲ್ಲುವಂತಾಗಿದ್ದು, ಯಾವಾಗ ಮತ್ತೆ ಮರಳಿ ಮೈದಾನಕ್ಕೆ ಬರುತ್ತಾರೆ ಎಂಬ ಪ್ರಶ್ನೆಗೆ ಸೌರವ್​ ಗಂಗೂಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.




ಹೌದು, ಗಂಗೂಲಿ ರಿಷಭ್​ ಪಂತ್ ಅವರ ಗಾಯಗಳ ಬಗ್ಗೆ ಪ್ರಮುಖ ನವೀಕರಣವನ್ನು ನೀಡಿದ್ದಾರೆ. ಟೀಂ ಇಂಡಿಯಾಗೆ ಆದಷ್ಟು ಬೇಗ ಕಂಬ್ಯಾಕ್ ಮಾಡುತ್ತೇನೆ ಎಂದು ಪಂತ್ ಹೇಳಿದ್ದಾರೆ. ಆದರೆ ಇದು ಒಂದು ವರ್ಷ ಅಥವಾ ಎರಡು ವರ್ಷ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಗಂಗೂಲಿ ಹೇಳಿದ್ದಾರೆ. ಗಂಗೂಲಿ ಅವರ ಹೇಳಿಕೆಗಳನ್ನು ಗಮನಿಸಿದರೆ, ಪಂತ್ ಕನಿಷ್ಠ ಎರಡು ವರ್ಷಗಳ ಕಾಲ ಆಟದಿಂದ ಹೊರಗುಳಿಯುವ ಸಾಧ್ಯತೆಯಿದೆ. ಇದಕ್ಕೆ ಪ್ರಮುಖ ಕಾರಣ ಕಾಲಿನ ಅಸ್ಥಿರಜ್ಜುಗ ಗಾಯ ಎಂದು ಹೇಳಲಾಗುತ್ತಿದೆ.

Published by:shrikrishna bhat
First published: