ವಿರಾಟ್ದೆಹಲಿ ಟೆಸ್ಟ್‌ನಲ್ಲಿ ಭಾರತ ತಂಡ ಕೇವಲ ಎರಡೂವರೆ ದಿನಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ (IND vs AUS) ಗೆಲುವು ದಾಖಲಿಸಿದೆ. ನಾಗ್ಪುರದ ಮಾದರಿಯಲ್ಲಿ ದೆಹಲಿಯಲ್ಲೂ ರವೀಂದ್ರ ಜಡೇಜಾ ಭಾರತದ ಗೆಲುವಿನ ಹೀರೋ ಆಗಿದ್ದರು. ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಇನ್ನು ಟೀಂ ಇಂಡಿಯಾ (Team India) ಇನ್ನೆರಡು ಪಂದ್ಯಗಳಲ್ಲಿ ಒಂದನ್ನು ಗೆಲ್ಲಬೇಕಾಗಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ (WTC 2023) ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ದೆಹಲಿ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿಯ (Virat Kohli) ಪ್ರತಿಕ್ರಿಯೆಯ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.
RCB ಎಂದವರಿಗೆ ವಿರಾಟ್ ಉತ್ತರ:
ಪಂದ್ಯದ ವೇಳೆ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಸ್ಲಿಪ್ ನಲ್ಲಿ ಕೆಎಸ್ ಭರತ್ ಬಳಿ ನಿಂತಿದ್ದರು. ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಮಾಡುತ್ತಿತ್ತು. ಏತನ್ಮಧ್ಯೆ, ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಜನರು RCB...RCB... ಎಂದು ಘೋಷಣೆಗಳನ್ನು ಎತ್ತಲಾರಂಭಿಸಿದರು. ವಿರಾಟ್ ಅಭಿಮಾನಿಗಳ ಕಡೆಗೆ ತಿರುಗಿ ಅವರ ಮುಂದೆ ಜರ್ಸಿಯಲ್ಲಿ ಬಿಸಿಸಿಐ ಲೋಗೋ ಕಡೆಗೆ ಬೆರಳು ತೋರಿಸಿದರು.
See what #ViratKohli did when crowd was chanting 'RCB'. 🇮🇳#INDvAUS pic.twitter.com/vpLipJAGcY
— Nikhil🏏 (@CricNiks) February 20, 2023
ಕೊಹ್ಲಿ ಶತಕಕ್ಕಾಗಿ ಅಭಿಮಾನಿಗಳ ಕಾತುರ:
ಪಂದ್ಯದ ಕುರಿತು ನೋಡುವುದಾದರೆ, ಮಾಜಿ ನಾಯಕ ಮೊದಲ ಇನ್ನಿಂಗ್ಸ್‌ನಲ್ಲಿ 44 ರನ್‌ಗಳ ಕೊಡುಗೆ ನೀಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 20 ರನ್‌ಗಳಿಗೆ ಸ್ಟಂಪ್ ಆದರು. ಮೊದಲ ಇನಿಂಗ್ಸ್‌ನಲ್ಲೂ ಕೆಟ್ಟ ಅಂಪೈರಿಂಗ್‌ಗೆ ಔಟ್ ಆಗಿದ್ದರು. ಇದರ ಹೊರತಾಗಿಯೂ ಟೀಂ ಇಂಡಿಯಾ 6 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಇದೀಗ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮಾರ್ಚ್ 1 ರಿಂದ ಇಂದೋರ್‌ನಲ್ಲಿ ಮೂರನೇ ಟೆಸ್ಟ್ ಪಂದ್ಯವನ್ನು ಆಡಲಿವೆ.
ಇದನ್ನೂ ಓದಿ: IPL 2023: ಪಂದ್ಯದ ಸ್ವರೂಪವನ್ನು ಬದಲಿಸಲಿದೆ ಈ ನಿಯಮ, ಐಪಿಎಲ್ 2023ರಲ್ಲಿ ಬರಲಿದೆ ನ್ಯೂ ರೂಲ್ಸ್
ಆಸ್ಟ್ರೇಲಿಯಾ ವಿರುದ್ಧದ 3 ಮತ್ತು 4 ಟೆಸ್ಟ್‌ಗೆ ಭಾರತದ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (WK), ಇಶಾನ್ ಕಿಶನ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನದ್ಕತ್.
ಉಪನಾಯಕ ಸ್ಥಾನ ಕಳೆದುಕೊಂಡ ರಾಹುಲ್:
ಸತತ ವೈಫಲ್ಯ ಅನುಭವಿಸಿರುವ ರಾಹುಲ್ಗೆ ಒಂದು ಕಡೆ ಅವಕಾಶ ನೀಡಬಾರೆದೆಂದು ಕನ್ನಡಿಗ ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಮಾಜಿ ಆಟಗಾರರು ಒತ್ತಾಯಿಸುತ್ತಿದ್ದಾರೆ. ಆದರೂ ಬಿಸಿಸಿಐ ಆಯ್ಕೆಸಮಿತಿ ಕೊನೆಯ ಎರಡು ಟೆಸ್ಟ್‌ಗೆ ಅವರನ್ನು ಆಯ್ಕೆ ಮಾಡಿದೆ. ಆದರೆ ಅವರನ್ನು ಉಪನಾಯಕ ಸ್ಥಾನದಿಂದ ಕೆಳಗಿಳಿಸಿ ಎಚ್ಚರಿಕೆ ನೀಡಿದೆ. ಒಂದು ವೇಳೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ತಂಡದಿಂದಲೂ ಹೊರ ಹಾಕುವ ಪರೋಕ್ಷ ವಾರ್ನಿಂಗ್ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ