• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Pathaan: ಆಸೀಸ್​ ಸರಣಿಗೂ ಮುನ್ನ 'ಪಠಾಣ್' ಅವತಾರ ತಾಳಿದ ವಾರ್ನರ್​, ಶಾರುಖ್​ ಲುಕ್​​ನಲ್ಲಿ ಮಿಂಚಿದ ಕಾಂಗರೂ ಪ್ಲೇಯರ್​

Pathaan: ಆಸೀಸ್​ ಸರಣಿಗೂ ಮುನ್ನ 'ಪಠಾಣ್' ಅವತಾರ ತಾಳಿದ ವಾರ್ನರ್​, ಶಾರುಖ್​ ಲುಕ್​​ನಲ್ಲಿ ಮಿಂಚಿದ ಕಾಂಗರೂ ಪ್ಲೇಯರ್​

ಡೇವಿಡ್ ವಾರ್ನರ್

ಡೇವಿಡ್ ವಾರ್ನರ್

Pathaan: ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬರಲಿದೆ. ಕಾಂಗರೂ ಟೀಂ ಇಂಡಿಯಾ ವಿರುದ್ಧ 4 ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ಫೆಬ್ರವರಿ 9 ರಿಂದ ಮೊದಲ ಪಂದ್ಯ ಆರಂಭವಾಗಲಿದೆ.

  • Share this:

ಆಸ್ಟ್ರೇಲಿಯಾ ತಂಡದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಕೂಡ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿರುತ್ತಾರೆ. ಅಲ್ಲದೇ ಅವರಿಗೆ ಸೌತ್​ ಸಿನಿಮಾಗಳ (South Movie) ಮೇಲೆ ಇನ್ನಿಲ್ಲದ ಪ್ರೀತಿ ಎಂದರೂ ತಪ್ಪಾಗಲಾರದು. ಇಲ್ಲಿನ ಹಾಡು, ಚಿತ್ರದ ಸೀನ್​ಗಳನ್ನು ಟಿಕ್ ಟಾಕ್​ ಮಾಡುತ್ತಿರುತ್ತಾರೆ. ಇದೀಗ ಅದೇ ರೀತಿ ವಾರ್ನರ್ ಹಿಂದಿಯ ಪಠಾಣ್ (Pathaan) ಚಿತ್ರದ ಸೀನ್​ ಒಂದಕ್ಕೆ ಇನ್ಸ್ಟಾಗ್ರಾಂ ರೀಲ್ಸ್ ಮಾಡಿದ್ದಾರೆ. ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಶಾರುಖ್ (Shah Rukh Khan) ಅವರಂತೆಯೇ ಕಾಣುತ್ತಾರೆ. ಈ ವಿಡಿಯೋ ಸಖತ್​ ವೈರಲ್ ಆಗಿದ್ದು, ಅಭಿಮಾನಿಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.


ಶಾರುಖ್ ಅವತಾರ ತಾಳಿದ ವಾರ್ನರ್:


ವಾರ್ನರ್ ಅವರ ವೀಡಿಯೊದಲ್ಲಿ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ, ಆಸ್ಕರ್ ನಾಮನಿರ್ದೇಶನಗಳು ಹತ್ತಿರದಲ್ಲಿವೆ ಎಂದು ಹೇಳಿದರೆ, ಇಮತ್ತೋರ್ವ ಬಳಕೆದಾರರು, ಆದರೆ, ಡೇವಿಡ್ ಖಾನ್ ಎಂದು ಹೇಳಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದ ಪಠಾಣ್ ಎಂದು ಕರೆದಿದ್ದಾರೆ. ನೀವು ಭಾರತೀಯ ಹೀರೋ, ಟಾಲಿವುಡ್ ನಿಮ್ಮನ್ನು ಸ್ವಾಗತಿಸುತ್ತದೆ ಎಂದೆಲ್ಲಾ ಬರೆದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಅಂತ್ಯದ ನಂತರ, ವಾರ್ನರ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್ ಪರ ಆಡುತ್ತಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡವನ್ನು ಸೋಲಿಸಿತು.




ಏಕದಿನ ವಿಶ್ವಕಪ್ ಮೇಲೆ ಕಣ್ಣು:


ಸಿಡ್ನಿ ಥಂಡರ್ ಸೋಲಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವಾರ್ನರ್, ನನಗೆ ತುಂಬಾ ಸುಸ್ತಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾನು ಕ್ರಿಕೆಟ್ ಆಸ್ಟ್ರೇಲಿಯಾದ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಬಹುಶಃ ನಾನು ಈ ವರ್ಷ ಹೆಚ್ಚು ಮುಕ್ತನಾಗುತ್ತೇನೆ. ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಸೇರಿದಂತೆ ಇದು ದೀರ್ಘ ಬೇಸಿಗೆಯಾಗಿರಲಿದೆ. ನಾನು ಉತ್ತಮವಾಗಿ ಆಡಲು ಪ್ರಯತ್ನಿಸಬೇಕು‘ ಎಂದಿದ್ದರು.


ಇದನ್ನೂ ಓದಿ: Womens IPL 2023: ಮಹಿಳಾ ಐಪಿಎಲ್‌ನಷ್ಟೂ ಇಲ್ಲ ಪಾಕ್‌ ಟಿ-20 ಲೀಗ್, ಪಿಎಸ್‌ಎಲ್‌ ಬಜೆಟ್‌ಗಿಂತ ಜಾಸ್ತಿ ಹಣಕ್ಕೆ ಹರಾಜಾಯ್ತು ವುಮೆನ್ಸ್‌ ಪ್ರಾಂಚೈಸಿ!


ಸೌತ್​ ಸಿನಿಮಾ ಮೇಲೆ ಹೆಚ್ಚು ಪ್ರೀತಿ:


ಇನ್ನು, ಆಸ್ಟ್ರೇಲಿಯಾದ ಕ್ರಿಕೆಟರ್​ ಡೇವಿಡ್​ ವಾರ್ನರ್​ ಕುಟುಂಬ​ ಅಲ್ಲು ಅರ್ಜುನ್​ ಅಲಾ ವೈಕುಂಠಪುರಂಲೋ ಸಿನಿಮಾದ ಬುಟ್ಟ ಬೊಮ್ಮ ಹಾಡಿಗೆ ಟಿಕ್​ ಟಾಕ್​ ಮಾಡಿದ್ದರು. ಆದಾದ ನಂತರ ವಾರ್ನರ್​​ ಮಹೇಶ್​ ಬಾಬು ಪೊಕಿರಿ ಸಿನಿಮಾದ ಸಿಗ್ನೇಚರ್​ ಡೈಲಾಗ್​​ ಹೇಳಿದ ವಿಡಿಯೋವನ್ನು ಹರಿಬಿಟ್ಟಿದ್ದರು. ಬಳಿಕ ಡೇವಿಡ್​​ ಅಲಾ ವೈಕುಂಠಪುರಂಲೋ ಸಿನಿಮಾದ ರಾಮುಲೋ ರಾಮುಲಾ ಹಾಡಿಗೆ, ಪುಷ್ಪ ಚಿತ್ರದ ಡೈಲಾಗ್​ ಮತ್ತು ಕೆಜಿಎಪ್ 2 ಚಿತ್ರ ಡೈಲಾಗ್​ಗಳನ್ನು ಹೇಳುವ ಮೂಕ ಎಂದಿಗೂ ಸಖತ್​ ಚರ್ಚೆಯಲ್ಲಿರುತ್ತಾರೆ.



ಬಾರ್ಡರ್-ಗವಾಸ್ಕರ್ ಟ್ರೋಫಿ:


ಬಾರ್ಡರ್-ಗವಾಸ್ಕರ್ ಟ್ರೋಫಿ ಅಡಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯ ಮೊದಲ ಟೆಸ್ಟ್ ಫೆಬ್ರವರಿ 9 ರಿಂದ ನಾಗ್ಪುರದಲ್ಲಿ, ಎರಡನೇ ಫೆಬ್ರವರಿ 17 ರಿಂದ ದೆಹಲಿಯಲ್ಲಿ, ಮೂರನೇ ಟೆಸ್ಟ್ ಮಾರ್ಚ್ 1 ರಿಂದ ಧರ್ಮಶಾಲಾದಲ್ಲಿ ಮತ್ತು ನಾಲ್ಕನೇ ಮಾರ್ಚ್ 9 ರಿಂದ ಅಹಮದಾಬಾದ್‌ನಲ್ಲಿ ನಡೆಯಲಿದೆ. . ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC) ಭಾಗವಾಗಿದೆ. ರೋಹಿತ್ ಶರ್ಮಾ ಅಂಡ್ ಕಂ ಫೈನಲ್‌ಗೆ ತಲುಪಲು ಈ ಸರಣಿಯನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಅದೇ ಸಮಯದಲ್ಲಿ, ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ, ಕಾಂಗರೂಗಳು ಸರಣಿಯನ್ನು ವಶಪಡಿಸಿಕೊಳ್ಳಲು ಸಂಪೂರ್ಣ ಪ್ರಯತ್ನಗಳನ್ನು ಮಾಡಲಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು