ಸುಮಾರು 1 ವರ್ಷದ ಬಳಿಕ ಧೋನಿ ಬ್ಯಾಟ್​ನಿಂದ ಬಂತು ಅರ್ಧಶತಕ

ಧೊನಿ ಸುಮಾರು 1 ವರ್ಷದ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ಅರ್ಧಶತಕ ಗಳಿಸಿದರು. ಧೋನಿ ಅವರು ಡಿ. 10, 2017 ರಂದು ಶ್ರೀಲಂಕಾ ವಿರುದ್ಧ 65 ರನ್ ಗಳಿಸಿ ಕೊನೆಯ ಅರ್ಧಶತಕ ಬಾರಿಸಿದ್ದರು.

Vinay Bhat | news18
Updated:January 12, 2019, 5:14 PM IST
ಸುಮಾರು 1 ವರ್ಷದ ಬಳಿಕ ಧೋನಿ ಬ್ಯಾಟ್​ನಿಂದ ಬಂತು ಅರ್ಧಶತಕ
ಎಂ ಎಸ್ ಧೋನಿ
  • News18
  • Last Updated: January 12, 2019, 5:14 PM IST
  • Share this:
ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಸೋಲುಂಡಿದೆ. 34 ರನ್​ಗಳಿಂದ ಗೆದ್ದು ಬೀಗಿದ ಕಾಂಗರೂ ಪಡೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಈ ಮಧ್ಯೆ 4 ರನ್​ಗೆ 3 ವಿಕೆಟ್ ಕಳೆದುಕೊಂಡು ಕುಸಿಯುವ ಭೀತಿಯಲ್ಲಿದ್ದ ತಂಡವನ್ನು ಮೇಲೆತ್ತಿದ್ದು ರೋಹಿತ್ ಶರ್ಮಾ ಜೊತೆಯಾದ ಮಾಜಿ ನಾಯಕ ಎಂ ಎಸ್ ಧೋನಿ. ರನ್​ಬರ ಎದುರಿಸುತ್ತಿದ್ದ ತಂಡಕ್ಕೆ ಧೋನಿ ಅವರು ಸಮಯೋಚಿತ ಆಟ ಪ್ರದರ್ಶಿಸಿ ಆಪತ್ಬಾಂಧವ ಎನಿಸಿಕೊಂಡರು.

ಈ ಪಂದ್ಯದಲ್ಲಿ ಭಾರತ ಸೋಲು ಕಂಡಿರಬಹುದು. ಆದರೆ, ತನ್ನನ್ನು ಟೀಕೆ ಮಾಡುತ್ತಿದ್ದವರಿಗೆ ಧೋನಿ ಸರಿಯಾಗೆ ಉತ್ತರ ನೀಡಿದ್ದಾರೆ. ಬ್ಯಾಡ್ ಫಾರ್ಮ್​​ನಲ್ಲಿದ್ದ ಧೋನಿ 96 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ 51 ರನ್ ಬಾರಿಸಿದರು.

ಇದನ್ನೂ ಓದಿ: ರೋಹಿತ್ ಏಕಾಂಗಿ ಹೋರಾಟ ವ್ಯರ್ಥ: ಏಕದಿನ ಪಂದ್ಯದಲ್ಲಿ ಆಸೀಸ್ ಶುಭಾರಂಭ

ಈ ಮೂಲಕ ಧೊನಿ ಸುಮಾರು 1 ವರ್ಷದ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ಅರ್ಧಶತಕ ಗಳಿಸಿದರು. ಧೋನಿ ಅವರು ಡಿ. 10, 2017 ರಂದು ಶ್ರೀಲಂಕಾ ವಿರುದ್ಧ 65 ರನ್ ಗಳಿಸಿ ಕೊನೆಯ ಅರ್ಧಶತಕ ಬಾರಿಸಿದ್ದರು. ಅದಾದ ಬಳಿಕ 2018ರಲ್ಲಿ ಧೋನಿ ಬ್ಯಾಟ್​​ನಿಂದ ಏಕದಿನ ಕ್ರಿಕೆಟ್​​ನಲ್ಲಿ ಒಂದೇ ಒಂದು ಫಿಫ್ಟಿ ಬಂದಿರಲಿಲ್ಲ. ಸದ್ಯ ಆಸೀಸ್ ನೆಲದಲ್ಲಿ ಫಾರ್ಮ್​ಗೆ ಮರಳಿರುವ ಧೋನಿ ವಿಶ್ವಕಪ್​​​ಗೆ ತಯಾರಾಗಿದ್ದೇನೆ ಎಂಬ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: 'ನಿವೃತ್ತಿ ಬಳಿಕ ಮತ್ತೆಂದೂ ಬ್ಯಾಟ್​ ಎತ್ತಲಾರೆ' ವಿರಾಟ್​ ಕೊಹ್ಲಿ ಅಚ್ಚರಿಯ ಹೇಳಿಕೆ

ಇಷ್ಟೆ ಅಲ್ಲದೆ ಧೋನಿ 10 ಸಹಸ್ರ ರನ್​ಗಳ ದಾಖಲೆ ಮಾಡಿ, ಏಕದಿನ ಪಂದ್ಯಗಳಲ್ಲಿ 10,000 ರನ್ ಪೂರೈಸಿದ ಭಾರತದ ಐದನೇ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ 10 ಸಾವಿರ್ ಪೂರೈಸಿದ ಪಟ್ಟಿಯಲ್ಲಿದ್ದಾರೆ. ಸದ್ಯ ಧೋನಿ ಕೂಡ 330 ಏಕದಿನ ಪಂದ್ಯಗಳಲ್ಲಿ 10 ಸಾವಿರ ರನ್​ಗಳ ಗಡಿ ದಾಟಿ ಇದೇ ಸಾಲಿಗೆ ಸೇರಿದ್ದಾರೆ.
First published: January 12, 2019, 5:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading