• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Rohit Sharma: ಪಂದ್ಯದ ವೇಳೆ ಕೋಪಗೊಂಡ ರೋಹಿತ್ ಶರ್ಮಾ, ಮತ್ತೆ ಮೈದಾನದಲ್ಲಿಯೇ ಸಿಟ್ಟಾದ ಹಿಟ್​ಮ್ಯಾನ್

Rohit Sharma: ಪಂದ್ಯದ ವೇಳೆ ಕೋಪಗೊಂಡ ರೋಹಿತ್ ಶರ್ಮಾ, ಮತ್ತೆ ಮೈದಾನದಲ್ಲಿಯೇ ಸಿಟ್ಟಾದ ಹಿಟ್​ಮ್ಯಾನ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Rohit Sharma: ನಾಗ್ಪುರ ಟೆಸ್ಟ್‌ನಲ್ಲಿ ಭಾರತ ತಂಡ ದೊಡ್ಡ ಗೆಲುವು ಸಾಧಿಸಿದೆ. ಪಂದ್ಯದ ವೇಳೆ ನಾಯಕ ರೋಹಿತ್ ಶರ್ಮಾ ಒಂದು ಕ್ಷಣ ಮೈದಾನದಲ್ಲಿಯೇ ಸಿಟ್ಟಾಗಿದ್ದುಮ, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

  • Share this:

ಬಾರ್ಡರ್ ಗವಾಸ್ಕರ್ ಟ್ರೋಫಿಯ (Border–Gavaskar Trophy) ಮೊದಲ ಪಂದ್ಯವು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ (VCA) ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡ (Team India) ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯ ಫೆಬ್ರವರಿ 17 ರಿಂದ ದೆಹಲಿಯಲ್ಲಿ ನಡೆಯಲಿದೆ. ಆದರೆ ಪಂದ್ಯದ ವೇಳೆ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಕ್ಯಾಮರಾಮನ್ ಮೇಲೆ ಒಂದು ಕ್ಷಣ ಕೋಪಗೊಂಡಿದ್ದರು. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.


ಸಿಟ್ಟಾದ ರೋಹಿತ್ ಶರ್ಮಾ:


ಹೌದು, ರೋಹಿತ್ ಶರ್ಮಾ ಅವರ ಮೂರನೇ ದಿನದ ಪಂದ್ಯದ ವಿಡಿಯೋವೊಂದು ಹೊರಬಿದ್ದಿದೆ. ಇದರಲ್ಲಿ, ಡಿಆರ್‌ಎಸ್ ಸಮಯದಲ್ಲಿ, ಅವರು ಕ್ಯಾಮರಾಮನ್ ಮೇಲೆ ಕೋಪಗೊಳ್ಳುವುದನ್ನು ಕಾಣಬಹುದು. ನನ್ನನ್ನು ಯಾಕೆ ತೋರಿಸುತ್ತೀಯಾ, ಅಲ್ಲಿ ತೋರಿಸು ಎಂದು ಅವರು ಹೇಳುವುದನ್ನು ಕೇಳಬಹುದು. ಅಂದರೆ ಪರದೆಯ ಮೇಲೆ ತೋರಿಸು, ಅಂಪೈರ್ ನಿರ್ಧಾರ ಏನು ಎಂದು ಹೇಳುವಂತೆ ಭಾಸವಾಗಿದೆ. ಸೂರ್ಯಕುಮಾರ್ ಯಾದವ್ ಅವರ ಮಾತು ಕೇಳಿ ಜೋರಾಗಿ ನಗುತ್ತಿರುವುದು ಕಂಡು ಬಂದಿದೆ. ಪಂದ್ಯದಲ್ಲಿ ರೋಹಿತ್ ಕೂಡ ಶತಕ ಸಿಡಿಸಿದ್ದರು. ನಾಯಕನಾಗಿ ಇದು ಅವರ ಟೆಸ್ಟ್ ವೃತ್ತಿಜೀವನದ ಮೊದಲ ಶತಕವಾಗಿದೆ.



ಭಾರತ ತಂಡಕ್ಕೆ ಗೆಲುವು:


ನಾಗ್ಪುರ ಟೆಸ್ಟ್‌ನ ಕುರಿತು ಮಾತನಾಡುತ್ತಾ, ಇಲ್ಲಿ ಆಸ್ಟ್ರೇಲಿಯಾ ತಂಡವು ಟಾಸ್ ಗೆದ್ದು ಮೊದಲ ಇನ್ನಿಂಗ್ಸ್‌ನಲ್ಲಿ 177 ರನ್ ಗಳಿಸಿತು. ಅದೇ ಸಮಯದಲ್ಲಿ, ಭಾರತ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 400 ರನ್‌ಗಳ ದೊಡ್ಡ ಸ್ಕೋರ್ ಗಳಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಭಾರತ ತಂಡ ಮೊದಲ ಇನಿಂಗ್ಸ್ ಆಧಾರದಲ್ಲಿ 223 ರನ್ ಗಳ ಬೃಹತ್ ಮುನ್ನಡೆ ಪಡೆದುಕೊಂಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರವಾಸಿ ತಂಡ 32.3 ಓವರ್‌ಗಳಲ್ಲಿ ಕೇವಲ 91 ರನ್‌ಗಳಿಗೆ ಆಲೌಟ್​ ಆಯಿತು. ಈ ಮೂಲಕ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 132 ರನ್‌ಗಳಿಂದ ಐತಿಹಾಸಿಕ ಜಯ ಸಾಧಿಸಿದೆ.


ಇದನ್ನೂ ಓದಿ: Ravindra Jadeja: ಬಾಲ್​ ಟ್ಯಾಂಪರಿಂಗ್​ ವಿವಾದದ ಬೆನ್ನಲ್ಲೇ ಜಡೇಜಾಗೆ ಐಸಿಸಿಯಿಂದ ಬಿಗ್ ಶಾಕ್​!


ಒಂದೇ ಒಂದು ಟೆಸ್ಟ್‌ನಲ್ಲಿ ಸೋತಿಲ್ಲ:


ರೋಹಿತ್ ಶರ್ಮಾ ನಾಯಕನಾಗಿ ಇದುವರೆಗೆ ಒಂದೇ ಒಂದು ಟೆಸ್ಟ್‌ನಲ್ಲಿ ಸೋತಿಲ್ಲ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಬಗ್ಗೆ ಮಾತನಾಡುತ್ತಾ, ಟೀಂ ಇಂಡಿಯಾ ಕಳೆದ ಮೂರು ಸರಣಿಗಳನ್ನು ವಶಪಡಿಸಿಕೊಂಡಿದೆ. ತವರಿನಲ್ಲಿ ಭಾರತಕ್ಕೆ ಮತ್ತೊಮ್ಮೆ ಸರಣಿ ಗೆಲ್ಲುವ ದೊಡ್ಡ ಅವಕಾಶವಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ 2 ಟೆಸ್ಟ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಒಂದು ಪಂದ್ಯ ಗೆದ್ದಿದೆ.




ರೋಹಿತ್ ಕ್ಷಮೆ ಕೇಳಿದ ರೋಹಿತ್:


ಇನ್ನು, ಮೊದಲ ಇನ್ನಿಂಗ್ಸ್ ವೇಳೆ ರೋಹಿತ್ ಮತ್ತು ಕೊಹ್ಲಿ ಬ್ಯಾಟಿಂಗ್​ ಮಾಡುವಾಗ 48ನೇ ಓವರ್​ನ ನೇಥನ್ ಲ್ಯಾನ್ ಬೌಲಿಂಗ್​ನಲ್ಲಿ ವಿರಾಟ್ ಕೊಹ್ಲಿ ಮಿಡ್ ವಿಕೆಟ್ ಕಡೆ ಹೊಡೆದು ಓಡಲು ಮುಂದಾದರು. ನಾನ್​ ಸ್ಟ್ರೈಕರ್​ನಲ್ಲಿದ್ದ ರೋಹಿತ್ ಶರ್ಮಾಗೆ ಓಡಿ ಬರುವಂತೆ ಕೊಹ್ಲಿ ಕರೆ ನೀಡಿದರು. ಕೊಹ್ಲಿ ಮಾತಿನಂತೆ ರೋಹಿತ್ ಅರ್ಧದ ವರೆಗೆ ಓಡಿ ಬಂದರು. ಚೆಂಡು ಅಲ್ಲೆ ಸರ್ಕಲ್​ನಲ್ಲಿ ಇದ್ದಿರುವುದನ್ನು ಗಮನಿಸಿದ ಕೊಹ್ಲಿ ತಕ್ಷಣ ತನ್ನ ನಿರ್ಧಾರವನ್ನು ಬದಲಾಯಿಸಿ ನೋ ಎಂದರೆ, ಹೀಗಾಗಿ ರೋಹಿತ್ ಸ್ವಲ್ಪದರಲ್ಲೇ ಔಟಾಗದೇ ಉಳಿದರು. ಇದಕ್ಕೆ ವಿರಾಟ್​ ಕೊಹ್ಲಿ ರೋಹಿತ್​ ಶರ್ಮಾಗೆ ಸಾರಿ ಕೇಳಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Published by:shrikrishna bhat
First published: