ಭಾರತ ಮತ್ತು ಆಸ್ಟ್ರೇಲಿಯಾ (IND vs AUS Test) ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯುತ್ತಿದೆ. ಇಂದು, ಪಂದ್ಯದ ನಾಲ್ಕನೇ ದಿನ, ವಿರಾಟ್ ಕೊಹ್ಲಿ (Virat Kohli ) ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ 3 ವರ್ಷಗಳ ನಂತರ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಇನ್ನು, ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಪ್ರಸ್ತುತ ಭಾರತ ಸುಸ್ಥಿತಿಯಲ್ಲಿದೆ. ಮೂರನೇ ದಿನದಾಟದಲ್ಲಿ ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ (Shubman Gill) ಅಮೋಘ ಶತಕ ದಾಖಲಿಸಿದರು. ಏತನ್ಮಧ್ಯೆ, ಶತಕಕ್ಕೂ ಮುನ್ನ 18ನೇ ಓವರ್‌ನಲ್ಲಿ ಡಿಆರ್‌ಎಸ್‌ನಲ್ಲಿಯೂ ಚೆಂಡು ಸ್ಟಂಪ್‌ಗೆ ಬಡಿದರೂ 3 ಮೀಟರ್ ನಿಯಮದ ಕಾರಣದಿಂದ ಅವರು ಔಟಾಗಲಿಲ್ಲ. ಡಿಆರ್‌ಎಸ್‌ನಲ್ಲಿ ಚೆಂಡನ್ನು ಸ್ಟಂಪ್‌ಗೆ ಹೊಡೆಯುವುದನ್ನು ತೋರಿಸಿದರೂ ಈ ನಿಯಮವು ಗಿಲ್‌ಗೆ ಜೀವ ದಾನ ನೀಡಿತು.
ಏನಿದು 3 ಮೀಟರ್ ರೂಲ್ಸ್?:
ಆಸ್ಟ್ರೇಲಿಯದ ಸ್ಪಿನ್ನರ್ ನಾಥನ್ ಲಿಯಾನ್ ಎಸೆದ ಚೆಂಡು ಶುಭ್‌ಮಾನ್ ಪ್ಯಾಡ್‌ಗೆ ಬಡಿಯಿತು. ಪರಿಣಾಮ ಬ್ಯಾಟ್ ಮತ್ತು ಪ್ಯಾಡ್ ನಡುವೆ ಇದ್ದಂತೆ ತೋರಿತು. ಫೀಲ್ಡ್ ಅಂಪೈರ್ ಅವರು ಗಿಲ್ ನಾಟೌಟ್ ತೀರ್ಪು ನೀಡಿದರು. ಆದರೆ ಸ್ಟೀವ್ ಸ್ಮಿತ್ ಡಿಆರ್‌ಎಸ್ ತೆಗೆದುಕೊಂಡರು. ಪರಿಣಾಮ ಮೂರು ಮೀಟರ್ ದೂರವಿದ್ದರೂ ಟಿವಿ ಅಂಪೈರ್ ಗಳು ಬಾಲ್ ಟ್ರ್ಯಾಕರ್ ಆಯ್ಕೆ ಮಾಡಿಕೊಂಡಿದ್ದರಿಂದ ಕೆಲಕಾಲ ಉದ್ವಿಗ್ನತೆ ಉಂಟಾಯಿತು.
ಬಾಲ್ ಟ್ರ್ಯಾಕರ್ ಚೆಂಡು ಸ್ಟಂಪ್‌ಗೆ ಬಡಿಯುತ್ತಿರುವುದನ್ನು ತೋರಿಸಿತು. ಆದರೆ ಅಂಪೈರ್ ಕೆಟಲ್‌ಬೊರೊಗ್ ಅವರ ನೋ-ಹಿಟ್ ನಿರ್ಧಾರವನ್ನು ಎತ್ತಿಹಿಡಿದರು. ನಂತರ ಆಸ್ಟ್ರೇಲಿಯಾ ನಾಯಕ ಸ್ಮಿತ್ ಮತ್ತು ಲಯನ್ ನಿರ್ಧಾರದ ನಂತರ ಗೊಂದಲಕ್ಕೊಳಗಾದರು. ಆಗ ಅಂಪೈರ್ ಮೂರು ಮೀಟರ್ ಪ್ರಭಾವದ ನಿಯಮದ ಪ್ರಕಾರ ಬ್ಯಾಟ್ಸ್‌ಮನ್‌ನನ್ನು ನಾಟೌಟ್ ಎಂದು ಘೋಷಿಸಲಾಗುತ್ತಿದೆ ಎಂದು ಹೇಳಿದರು. ಏಕೆಂದರೆ ಈ ಹಂತದಲ್ಲಿ ಬ್ಯಾಟ್ಸ್‌ಮನ್ ಮತ್ತು ಸ್ಟಂಪ್‌ಗಳ ನಡುವಿನ ಅಂತರವು ಮೂರು ಮೀಟರ್‌ಗಳಿಗಿಂತ ಹೆಚ್ಚು ಎಂಬ ಕಾರಣದಿಂದ ಇದನ್ನು ನಾಟೌಟ್ ಎಂದು ಹೇಳಲಾಯಿತು.
ಇದನ್ನೂ ಓದಿ: WTC 2023: ಆಸೀಸ್ ವಿರುದ್ಧದ ಪಂದ್ಯ ಡ್ರಾ ಆದ್ರೆ WTC ಕಥೆ ಏನು? ಸೋತ್ರೂ ಈ ರೀತಿ ಆದಲ್ಲಿ ಭಾರತ ಫೈನಲ್ ತಲುಪೋದು ಫಿಕ್ಸ್!
WTC 2023 ಕಥೆ ಏನು?:
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ 2-0 ಮುನ್ನಡೆ ಪಡೆದುಕೊಂಡಿದ್ದ ಭಾರತ ತಂಡಕ್ಕೆ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 9 ವಿಕೆಟ್‌ಗಳಿಂದ ಗೆಲುವು ಸಾಧಿಸಿ ತಿರುಗೇಟು ನೀಡಿತ್ತು. ಆ ಮೂಲಕ ಪ್ರವಾಸಿ ತಂಡ ಅಧಿಕೃತವಾಗಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದರು. ಇದೀಗ ಭಾರತ ತಂಡದ ಈ ಪಂದ್ಯವನ್ನು ಗೆದ್ದರೆ 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಈ ಪಂದ್ಯ ಸೋತರೆ ನ್ಯೂಜಿಲ್ಯಾಂಡ್ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಫಲಿತಾಂಶದ ಮೇಲೆ ಭಾರತದ ಅರ್ಹತೆ ನಿರ್ಧಾರವಾಗಲಿದೆ. ಆದರೆ ಈ ಪಂದ್ಯವು ನೂರಕ್ಕೆ ನೂರರಷ್ಟು ಡ್ರಾ ಆಗಲಿದೆ ಎಂದು ಕಾಣಿಸುತ್ತಿದೆ.
ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಉಮೇಶ್ ಯಾದವ್.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್, ನಾಥನ್ ಲಿಯಾನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ