IND vs AUS: ಲಿಯಾನ್ ದಾಳಿಗೆ ತತ್ತರಿಸಿದ ಭಾರತ, ಪೂಜಾರ ಏಕಾಂಗಿ ಹೋರಾಟ

IND vs AUS

IND vs AUS

IND vs AUS: 2ನೇ ಇನ್ನಿಂಗ್ಸ್ ಬ್ಯಾಟಿಂಗ್​ ಆರಂಭಿಸಿದ ಭಾರತ ತಂಡ 2ನೇ ದಿನದಾಟದ ಅಂತ್ಯಕ್ಕೆ 60.3 ಓವರ್​ಗೆ 163 ನರ್​ಗಳಿಸುವ ಮೂಲಕ ಆಸೀಸ್​ಗೆ 75 ರನ್​ಗಳ ಗೆಲುವಿನ ಗುರಿ ನೀಡಿದೆ.

  • Share this:

ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ (Holkar Stadium) ನಡೆಯುತ್ತಿದೆ. ಮೊದಲ ದಿನ ಭಾರತ ತಂಡ 109 ರನ್‌ಗಳಿಗೆ ಕುಸಿದಿತ್ತು. ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ ಆಸ್ಟ್ರೇಲಿಯಾದ ಇನ್ನಿಂಗ್ಸ್ ಅನ್ನು 197 ರನ್‌ಗಳಿಗೆ ಆಲೌಟ್ ಮಾಡಿ ಕೇವಲ 88 ರನ್‌ಗಳ ಮುನ್ನಡೆ ಪಡೆಯಿತು. ಈ ಮೊತ್ತದ ನಂತರ 2ನೇ ಇನ್ನಿಂಗ್ಸ್ ಬ್ಯಾಟಿಂಗ್​ ಆರಂಭಿಸಿದ ಭಾರತ ತಂಡ 2ನೇ ದಿನದಾಟದ ಅಂತ್ಯಕ್ಕೆ 60.3 ಓವರ್​ಗೆ 163 ನರ್​ಗಳಿಸುವ ಮೂಲಕ ಆಸೀಸ್​ಗೆ 75 ರನ್​ಗಳ ಗೆಲುವಿನ ಗುರಿ ನೀಡಿದೆ. ಈ ಮೂಲಕ ನಾಳೆಗೆ 3ನೇ ಪಂದ್ಯದ ಫಲಿತಾಂಶ ದೊರಕಲಿದೆ ಎಂದು ಹೇಳಬಹುದು. ಅಲ್ಲದೇ ನಾಳೆ ಭಾರತ ಗೆಲ್ಲಬೇಕಾದರೆ ಬೌಲಿಂಗ್​ ದಾಳಿ ನಿಖರವಾಗಿರಬೇಕಾಗಿದೆ. ಅಲ್ಲದೇ ಜಡೇಜಾ ಮತ್ತು ಅಶ್ವಿನ್​ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ.


ಬ್ಯಾಟಿಂಗ್​ನಲ್ಲಿ ಎಡವಿದ ಭಾರತ:


ಆಸ್ಟ್ರೇಲಿಯಾವನ್ನು 197 ರನ್​ಗಳಿಗೆ ಆಲೌಟ್​ ಮಾಡಿದ ಭಾರತ 2ನೇ ದಿನದಾಟದ ಬೋಜನ ವಿರಾಮದ ವೇಳೆಗೆ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿತು. ಆದರೆಮತ್ತೊಮ್ಮೆ ಆಸೀಸ್​ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ, ದೊಡ್ಡ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಭಾರತದ ಪರ ನಾಯಕ ರೋಹಿತ್ ಶರ್ಮಾ 12 ರನ್, ಶುಭ್​ಮನ್ ಗಿಲ್ 5 ರನ್, ಚೇತೇಶ್ವರ್ ಪೂಜಾರ 142 ಬಾಲ್​ಗೆ 59 ರನ್​ಗಳ ಏಕಾಂಗಿ ಹೋರಾಟ ನಡೆಸಿದರು. ಉಳಿದಂತೆ ವಿರಾಟ್ ಕೊಹ್ಲಿ 13 ರನ್, ರವೀಂದ್ರ ಜಡೇಜಾ 7 ರನ್, ಶ್ರೇಯಸ್​ ಅಯ್ಯರ್ 26 ರನ್, ಶಿಖರ್ ಭರತ್ 3 ರನ್, ಅಶ್ವಿನ್ 16 ರನ್, ಉಮೇಶ್ ಯಾದವ್ ಶೂನ್ಯ,  ಅಕ್ಷರ್​ ಪಟೇಲ್​ 15 ರನ್ ಮತ್ತು ಮೊಹಮ್ಮದ್ ಸಿರಾಜ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು.



ಟೀಂ ಇಂಡಿಯಾ ಭರ್ಜರಿ ಬೌಲಿಂಗ್​:


ಇನ್ನು, ಭಾರತ ತಂಡ 3ನೇ ಟೆಸ್ಟ್​​ನ 2ನೇ ದಿನದಾಟದ ಆರಂಭದಲ್ಲಿಯೇ ಭರ್ಜರಿ ಕಂಬ್ಯಾಕ್​ ಮಾಡಿತು. ಈ ಮೂಲಕ ಆಸ್ಟ್ರೇಲಿಯಾ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 197 ರನ್​ಗಳಿಗೆ ಆಲೌಟ್​ ಆಗುವ ಮೂಲಕ 88 ರನ್​ಗಳ ಮುನ್ನಡೆ ಸಾಧಿಸಿದೆ. ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್​ ಮತ್ತು ಉಮೇಶ್ ಯಾವದ್​ ಹಾಗೂ ರವಿಚಂದ್ರನ್​ ಅಶ್ವೀನ್​ ತಲಾ 3 ವಿಕೆಟ್​ ಪಡೆದರು.


ಇದನ್ನೂ ಓದಿ: Virat Kohli: ಆಸೀಸ್​ ವಿರುದ್ಧದ ಕೊನೆ ಟೆಸ್ಟ್​ಗೆ ಕೊಹ್ಲಿ ಔಟ್​? ಮಹತ್ವದ ನಿರ್ಧಾರಕ್ಕೆ ಮುಂದಾಯ್ತಾ ಬಿಸಿಸಿಐ?


11 ರನ್​​ಗೆ 6 ವಿಕೆಟ್​ ಪತನ:


ಇನ್ನು, 2ನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡ ಅಂತಿಮವಾಗಿ 11 ರನ್​ಗೆ 6 ವಿಕೆಟ್​ ಕಳೆದುಕೊಳ್ಳುವ ಮೂಲಕ 197 ರನ್​ಗಳಿಗೆ ಆಲೌಟ್​ ಆಯಿತು. ಈ ಮೂಲಕ 88 ರನ್​ಗಳ ಮುನ್ನಡೆ ಸಾಧಿಸಿತು. ಆಸೀಸ್​ ಪರ ಟ್ರಾವಿಸ್ ಹೆಡ್ 9 ರನ್, ಉಸ್ಮಾನ್ ಖವಾಜಾ 60 ರನ್, ಮಾರ್ನಸ್ ಲ್ಯಾಬುಸ್ಚಾಗ್ನೆ 31 ರನ್, ಸ್ಟೀವ್ ಸ್ಮಿತ್ 26 ರನ್, ಪೀಟರ್ ಹ್ಯಾಂಡ್ಸ್‌ಕಾಂಬ್ 19 ರನ್, ಕ್ಯಾಮೆರಾನ್ ಗ್ರೀನ್ 21 ರನ್, ಅಲೆಕ್ಸ್ ಕ್ಯಾರಿ 3 ರನ್, ಮಿಚೆಲ್ ಸ್ಟಾರ್ಕ್ 1 ರನ್, ಟಾಡ್ ಮರ್ಫಿ 0 ರನ್, ನಾಥನ್ ಲಿಯಾನ್ 5 ರನ್, ಮ್ಯಾಥ್ಯೂ ಕುನ್ಹೆಮನ್ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು.




ಭಾರತ-ಆಸ್ಟ್ರೇಲಿಯಾ ಪ್ಲೇಯಿಂಗ್​ 11:


ಟೀಂ ಇಂಡಿಯಾ ಪ್ಲೇಯಿಂಗ್​ 11: ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್.


ಆಸ್ಟ್ರೇಲಿಯಾ ಪ್ಲೇಯಿಂಗ್​ 11: ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್‌ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ನಾಥನ್ ಲಿಯಾನ್, ಮ್ಯಾಥ್ಯೂ ಕುನ್ಹೆಮನ್.

Published by:shrikrishna bhat
First published: