• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs AUS: ಆಸೀಸ್​ ವಿರುದ್ಧದ ಸೋಲಿನ ನಡುವೆ ಭಾರತಕ್ಕೆ ಐಸಿಸಿ ಬಿಗ್​ ಶಾಕ್! ಬರೋಬ್ಬರಿ 1 ವರ್ಷ ನಿಷೇಧ?

IND vs AUS: ಆಸೀಸ್​ ವಿರುದ್ಧದ ಸೋಲಿನ ನಡುವೆ ಭಾರತಕ್ಕೆ ಐಸಿಸಿ ಬಿಗ್​ ಶಾಕ್! ಬರೋಬ್ಬರಿ 1 ವರ್ಷ ನಿಷೇಧ?

IND vs AUS

IND vs AUS

IND vs AUS: ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಬಾರ್ಡರ್-ಗವಾಸ್ಕರ್ ಸರಣಿಯ 3ನೇ ಪಂದ್ಯದಲ್ಲಿ ಆಸೀಸ್​ ವಿರುದ್ಧ ಭಾರತ ತಂಡ ಸೋಲನ್ನಪ್ಪಿದೆ. ಆದರೆ ಈ ಪಿಚ್​ ಕುರಿತು ಸಾಕಷ್ಟು ಚರ್ಚೆಗಲಾಗುತ್ತಿವೆ.

  • Share this:

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಬಾರ್ಡರ್ ಗವಾಸ್ಕರ್ ಟ್ರೋಫಿ 2023 (Border-Gavaskar Trophy) ಟೆಸ್ಟ್ ಪಂದ್ಯಕ್ಕಾಗಿ ಬಳಸಲಾದ ಹೋಲ್ಕರ್ ಸ್ಟೇಡಿಯಂ (Holkar Stadium) ಪಿಚ್ ಅನ್ನು ಕಳಪೆ ಎಂದು ಐಸಿಸಿ ಹೇಳಿದೆ. ಇದರಲ್ಲಿ ಆಸ್ಟ್ರೇಲಿಯಾ ಮೂರನೇ ದಿನ ಭಾರತವನ್ನು 9 ವಿಕೆಟ್‌ಗಳಿಂದ ಸೋಲಿಸಿತು. ಈ ಕೆಟ್ಟ ರೇಟಿಂಗ್‌ನಿಂದಾಗಿ ಇಂದೋರ್ ಮೂರು ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದುಕೊಂಡಿದೆ ಮತ್ತು ಈ ಅಂಕಗಳು ಐದು ವರ್ಷಗಳವರೆಗೆ ಸಕ್ರಿಯವಾಗಿರುತ್ತವೆ. ಭಾರತ ತಂಡವು ಎರಡೂ ಇನಿಂಗ್ಸ್‌ಗಳಲ್ಲಿ 109 ಮತ್ತು 163 ರನ್‌ಗಳಿಗೆ ಆಲೌಟ್​ ಆಗಿತ್ತು. ಆದರೆ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 197 ರನ್ ಗಳಿಸಿತು ಮತ್ತು ನಂತರ ಮೂರನೇ ದಿನ ಬೆಳಿಗ್ಗೆ 76 ರನ್‌ಗಳ ಗುರಿಯನ್ನು ನಿರಾಯಾಸವಾಗಿ ಬೆನ್ನಟ್ಟುವ ಮೂಲಕ ಪಂದ್ಯವನ್ನು ಗೆದ್ದತು.


ಇಂದೋರ್​ ಪಿಚ್​ಗೆ ಡಿಮೆರಿಟ್ ಪಾಯಿಂಟ್:


ಐಸಿಸಿ ಬಿಡುಗಡೆ ಮಾಡಿದ ವರದಿ ಪ್ರಕಾರ, ಐಸಿಸಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರು ತಮ್ಮ ವರದಿಯನ್ನು ಸಲ್ಲಿಸಿದ್ದಾರೆ, ಅದರಲ್ಲಿ ಅವರು ಪಂದ್ಯದ ಅಧಿಕಾರಿಗಳು ಮತ್ತು ಎರಡೂ ತಂಡಗಳ ನಾಯಕರೊಂದಿಗೆ ಮಾತನಾಡಿದ ನಂತರ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ಮೌಲ್ಯಮಾಪನದ ನಂತರ, ಸ್ಥಳಕ್ಕೆ ಮೂರು ಡಿಮೆರಿಟ್ ಅಂಕಗಳನ್ನು ನೀಡಲಾಯಿತು.


ಈ ವರದಿಯನ್ನು ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಗೆ ಕಳುಹಿಸಲಾಗಿದ್ದು, ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು 14 ದಿನಗಳ ಕಾಲಾವಕಾಶವಿದೆ. ಕ್ರಿಸ್ ಬ್ರಾಡ್, ಪಿಚ್ ತುಂಬಾ ಶುಷ್ಕವಾಗಿತ್ತು, ಇದು ಬ್ಯಾಟ್ ಮತ್ತು ಬಾಲ್ ನಡುವೆ ಯಾವುದೇ ಸಮತೋಲನವನ್ನು ಒದಗಿಸಲಿಲ್ಲ ಮತ್ತು ಇದು ಮೊದಲಿನಿಂದಲೂ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತಿದೆ ಎಂದು ಹೇಳಿದರು. ಪಂದ್ಯದ ಉದ್ದಕ್ಕೂ ಅತಿಯಾದ ಚಲನೆಯನ್ನು ಉಂಟುಮಾಡಿತು. ಮೊದಲ ಅರ್ಧ ಗಂಟೆಯಲ್ಲಿ ಚೆಂಡು 'ಮೇಲ್ಮೈ ತಿರುವು' ತೆಗೆದುಕೊಳ್ಳುತ್ತಿದ್ದ ಕಾರಣ ಭಾರತ ಈಗಾಗಲೇ ಮೊದಲ ಸೆಷನ್‌ನಲ್ಲಿ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತ್ತು ಎಂದು ಹೇಳಿದ್ದಾರೆ.


ಇದನ್ನೂ ಓದಿ: WTC 2023 ಫೈನಲ್​ಗೆ ಆಸೀಸ್​ ಎಂಟ್ರಿ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಿಂದ ಟೀಂ ಇಂಡಿಯಾ ಔಟ್​?


ಐಸಿಸಿ ಕಠಿಣ ನಿರ್ಧಾರ:


ಇನ್ನು, ಇಂದೋರ್​ ಹೋಳ್ಕರ್​ ಮೈದಾನ ಕಳಪೆಯಾಗಿತ್ತು ಎಂದು ಐಸಿಸಿ 3 ಡಿಮೆರಿಟ್​ ಪಾಯಿಂಟ್​​ ನೀಡಿದೆ. ಇದರಿಂದಾಗಿ ಹೋಳ್ಕರ್ ಸ್ಟೇಡಿಯಂ ಮುಂದಿನ 1 ವರ್ಷಗಳ ಕಾಲ ನಿಷೇಧಕ್ಕೊಳಗಾಗಬಹುದು ಎನ್ನಲಾಗಿದೆ. ಐಸಿಸಿ ನಿಯಮಗಳ ಪ್ರಕಾರ, ಯಾವ ಪಿಚ್ ಆದರೂ ಸತತ 5 ವರ್ಷಗಳ ಅವಧಿಯಲ್ಲಿ ಏನಾದರೂ 5 ಡಿಮೆರಿಟ್ ಪಾಯಿಂಟ್‌ ಪಡೆದರೆ ಆ ಮೈದಾನವನ್ನು 1 ವರ್ಷಗಳ ಕಾಲ ನಿಷೇಧ ಮಾಡಬಹುದು. ಅಲ್ಲದೇ ಈ ಡಿಮೆರಿಟ್​ 3 ಪಾಯಿಂಟ್​ ಇರುವುದರಿಂದ ಮುಂದಿನ 5 ವರ್ಷದಲ್ಲಿ 2 ಡಿಮೆರಿಟ್​ ಪಾಯಿಂಟ್​ ಪಡೆದರೆ 12 ತಿಂಗಳು ನಿಷೇಧಕ್ಕೆ ಒಳಗಾಗುತ್ತದೆ.


ಎರಡೇ ದಿನದಲ್ಲಿ 30 ವಿಕೆಟ್​:


ಹೌದು, 5 ದಿನದ ಟೆಸ್ಟ್​ ಪಂದ್ಯ ಕೇವಲ ಎರಡುವರೆ ದಿನದಲ್ಲಿಯೇ ಅಂತ್ಯಗೊಂಡಿತು. ಈ ಮೂಲಕ ಪಿಚ್​ ಮೇಲೆ ಸಾಕಷ್ಟು ಚರ್ಚೆಗಳು ಎದ್ದಿವೆ. ಇದಕ್ಕೆ ತಕ್ಕಂತೆ ಐಸಿಸಿ ಸಹ 3 ಡಿಮೆರಿಟ್ ಪಾಯಿಂಟ್​ ನೀಡಿದೆ. ಈ ಪಂದ್ಯದಲ್ಲಿ ಸ್ಪಿನ್ನರ್​ಗಳು ಪ್ರಾಬಲ್ಯ ಸಾಧಿಸಿದರು. ಇದರಲ್ಲಿ 31 ವಿಕೆಟ್​ಗಳು ಬಿದ್ದಿವೆ. ಕೇವಲ 2 ದಿನದಲ್ಲಿ ಬರೋಬ್ಬರಿ 30 ವಿಕೆಟ್​ಗಳು ಬಿದ್ದಿವೆ. ಅದರಲ್ಲಿಯೂ ಸ್ಪಿನ್ನರ್​ಗಳು ಬರೋಬ್ಬರಿ 27 ವಿಕೆಟ್​ ಪಡೆದರೆ ಉಳಿದ 4 ವಿಕೆಟ್​ಗಳನ್ನು ವೇಗಿಗಳು ಪಡೆದಿದ್ದಾರೆ.




WTC 2023  ಹಾದಿ ಕಠಿಣ:


ಮೂರನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದರಿಂದಾಗಿ ಟೀಂ ಇಂಡಿಯಾದ ಫೈನಲ್​ ಹಾದಿ ಇನ್ನಷ್ಟು ಕಷ್ಟವಾಗಿದೆ. ಈ ಮೂಲಕ ಆಸ್ಟ್ರೇಲಿಯ ತಂಡ ಅಂಕಪಟ್ಟಿಯಲ್ಲಿ 1ನೇ ಸ್ಥಾನದಲ್ಲಿದ್ದು, ಭಾರತ ತಂಡ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡ ಕೂಡ ಫೈನಲ್‌ ರೇಸ್‌ನಲ್ಲಿದೆ. ಅವರು ನ್ಯೂಜಿಲೆಂಡ್‌ನಿಂದ ಕೊನೆಯ ಸರಣಿಯನ್ನು ಆಡಬೇಕಾಗಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು