• Home
  • »
  • News
  • »
  • sports
  • »
  • IND vs AUS: ಇಂದು ಭಾರತ-ಆಸ್ಟ್ರೇಲಿಯಾ 3ನೇ ಟಿ20; ಹೇಗಿದೆ ಪಿಚ್​ ರಿಪೋರ್ಟ್? ಇಲ್ಲಿದೆ ಪ್ಲೇಯಿಂಗ್​ 11 ಡಿಟೇಲ್ಸ್

IND vs AUS: ಇಂದು ಭಾರತ-ಆಸ್ಟ್ರೇಲಿಯಾ 3ನೇ ಟಿ20; ಹೇಗಿದೆ ಪಿಚ್​ ರಿಪೋರ್ಟ್? ಇಲ್ಲಿದೆ ಪ್ಲೇಯಿಂಗ್​ 11 ಡಿಟೇಲ್ಸ್

IND vs AUS

IND vs AUS

IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯವು ಇಂದು ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಉಭಯ ತಂಡಗಳೆರಡಕ್ಕೂ ಮಹತ್ವದ್ದಾಗಿದ್ದು, ಸರಣಿ ಗೆಲ್ಲಲು ಆಸೀಸ್​-ಭಾರತ ಹವಣಿಸುತ್ತಿದೆ.

  • Share this:

ಭಾರತ ಮತ್ತು ಆಸ್ಟ್ರೇಲಿಯಾ (IND v AUS) ನಡುವಿನ 3 ಪಂದ್ಯಗಳ ಸರಣಿಯ ಅಂತಿಮ ಮತ್ತು 3ನೇ ಟಿ20 ಪಂದ್ಯವು ನಾಳೆ ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Rajiv Gandhi International Cricket Stadium Hyderabad) ನಡೆಯಲಿದೆ. ಇಂದಿನ ಪಂದ್ಯದ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಿದ್ದು, ಇಂದಿನ ಪಂದ್ಯ ಗೆದ್ದ ತಂಡವು ಸರಣಿ ಕೈವಶ ಮಾಡಿಕೊಳ್ಳಲಿದೆ. ಹೀಗಾಗಿ ಉಭಯ ತಂಡಗಳು ನಡುವೆ ಇಂದು ಭರ್ಜರಿ ಪೈಪೋಟಿ ನಡೆಯುವ ನಿರೀಕ್ಷೆಯಿದೆ. ಅಲ್ಲದೇ ಈ ಸರಣಿ ನಂತರ ಭಾರತ ದಕ್ಷಿಣ ಆಫ್ರಿಕಾ ಜೊತೆ 3 ಪಂದ್ಯಗಳ ಟಿ20 ಸರಣಿ ಆಡಲಿದ್ದು, ಇದರ ಗೆಲುವು ಮುಂಬರುವ ಆಫ್ರಿಕಾ ಮತ್ತು ವಿಶ್ವಕಪ್​ ಸರಣಿಗಳಿಗಳಿಗೆ ತಂಡದ ಆತ್ಮವಿಶ್ವಾಸ ಹೆಚ್ಚಿಸಲಿದೆ. ಹಾಗಿದ್ದರೆ ಇಂದಿನ ಪಂದ್ಯದ ಪಿಚ್​ ವರದಿ, ತಂಡಗಳ ಬಲಾಬಲ ಸೇರಿದಂತೆ ಪ್ರಮುಖ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ.


ಪಂದ್ಯದ ವಿವರ:


ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯವು ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ಸಂಜೆ 7.00 ರಿಂದ ನಡೆಯಲಿದೆ. ಟಾಸ್ ಸಂಜೆ 6:30ಕ್ಕೆ ನಡೆಯಲಿದೆ. ಈ ಸರಣಿಯನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನೇರ ಪ್ರಸಾರವನ್ನು ವೀಕ್ಷಿಸಬಹುದು.  ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಪಂದ್ಯದ ಲೈವ್ ಅಪ್‌ಡೇಟ್‌ಗಳಿಗಾಗಿ News 18 Kannada ವೆಬ್‌ಸೈಟ್ ಅನುಸರಿಸಿ.


ಪಿಚ್​ ರಿಪೋರ್ಟ್:


ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿ​  ಪಿಚ್​ ಆಗಿದೆ. ಹೀಗಾಗಿ ಟಿ20 ಕ್ರಿಕೆಟ್​ನಲ್ಲಿ ಇಲ್ಲಿ ದೊಡ್ಡ ಮೊತ್ತದ ಸ್ಕೋರ್​ ಮಾಡಲು ಇದು ಸಹಾಯಕವಾಗಿದ್ದು, ನಾಳೆ ರನ್​ಗಳ ಮಳೆ ಸುರಿಯುವ ಸಾಧ್ಯತೆ ಇದೆ. ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 190 ರನ್ ಆಗಿದ್ದು, 2ನೇ ಇನ್ನಿಂಗ್ಸ್ ನಲ್ಲಿ ಸರಾಸರಿ ಸ್ಕೋರ್​ 160 ರನ್ ಹೀಗಾಗಿ ಈ ಪಿಚ್​ನಲ್ಲಿ ಅಂದರೆ ಇಂದು ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ ಏನಾದರೂ ಪಂದ್ಯದಲ್ಲಿ ಇಬ್ಬನಿಯ ಅಂಶ ಹೆಚ್ಚಿದ್ದಲ್ಲಿ ಪಂದ್ಯದ ಗತಿ ಬದಲಾಗುವ ಸಾಧ್ಯತೆ ಇದೆ. ಇದರೊಂದೊಗೆ ಈ ಮೈದಾನದಲ್ಲಿ ಈವರೆಗೆ ಅನೇಕ ಐಪಿಎಲ್ ಪಂದ್ಯಗಳು ನಡೆದಿವೆ ಆದರೆ ಕೇವಲ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಮಾತ್ರವೇ ನಡೆಸಲಾಗಿದೆ. 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಈ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಆದರೆ ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿತ್ತು.


ಇದನ್ನೂ ಓದಿ: ICC T20 World Cup: ಟಿ20 ವಿಶ್ವಕಪ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು, ಯಾರೆಲ್ಲಾ ಭಾರತೀಯ ಪ್ಲೇಯರ್ಸ್​ಗಳಿದ್ದಾರೆ?


ಪಿಚ್​ನ ಅಂಕಿಅಂಶಗಳು:


ಗರಿಷ್ಠ ಮೊತ್ತ: ಭಾರತ 209/4
ಕಡಿಮೆ ಮೊತ್ತ: ವೆಸ್ಟ್ ಇಂಡೀಸ್ 207/5
ಅತಿ ಹೆಚ್ಚು ರನ್: ವಿರಾಟ್ ಕೊಹ್ಲಿ: 94
ಅತಿ ಹೆಚ್ಚು ಸಿಕ್ಸರ್: ವಿರಾಟ್ ಕೊಹ್ಲಿ: 6
ಅತಿ ಹೆಚ್ಚು ವಿಕೆಟ್‌: ಚಾಹಲ್ 2 ವಿಕೆಟ್
ಗರಿಷ್ಠ ಜೊತೆಯಾಟ: ವಿರಾಟ್ ಕೊಹ್ಲಿ -ಕೆಎಲ್ ರಾಹುಲ್: 100 ರನ್ ಜೊತೆಯಾಟ


ಇದನ್ನೂ ಓದಿ: IPL 2023: ಈ ವರ್ಷವೇ ನಡೆಯುತ್ತಾ ಐಪಿಎಲ್​ ಆಟಗಾರರ ಹರಾಜು? RCB ಗೆ ಬರ್ತಾರಾ CSKಕೀ ಪ್ಲೇಯರ್​?


IND vs AUS ಸಂಭಾವ್ಯ ತಂಡ:


ಭಾರತ ಸಂಭಾವ್ಯ ತಂಡ:  ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ.


ಆಸ್ಟ್ರೇಲಿಯಾ ಸಂಭಾವ್ಯ ತಂಡ:  ಆರನ್ ಫಿಂಚ್, ಕ್ಯಾಮೆರಾನ್ ಗ್ರೀನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಡೇನಿಯಲ್​ ಸ್ಯಾಮ್ಸ್, ಪ್ಯಾಟ್ ಕಮಿನ್ಸ್, ಸೀನ್ ಅಬಾಟ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.

Published by:shrikrishna bhat
First published: