• Home
  • »
  • News
  • »
  • sports
  • »
  • IND vs AUS: ಭಾರತ- ಆಸ್ಟ್ರೇಲಿಯಾ ಅಂತಿಮ ಹಣಾಹಣಿ, ಇಲ್ಲಿದೆ ಹವಾಮಾನ ವರದಿ, ಪಿಚ್ ರಿಪೋರ್ಟ್

IND vs AUS: ಭಾರತ- ಆಸ್ಟ್ರೇಲಿಯಾ ಅಂತಿಮ ಹಣಾಹಣಿ, ಇಲ್ಲಿದೆ ಹವಾಮಾನ ವರದಿ, ಪಿಚ್ ರಿಪೋರ್ಟ್

IND vs AUS

IND vs AUS

IND vs AUS: ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟಿ20 ಸರಣಿಯ ಅಂತಿಮ ಪಂದ್ಯ ಹೈದರಾಬಾದ್​ನ ಉಪ್ಪಲ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವು ಉಭಯ ತಂಡಗಳೆರಡಕ್ಕೂ ಮಹತ್ವದ್ದಾಗಿದ್ದು, ಸರಣಿ ಗೆಲ್ಲಲು ಆಸೀಸ್​-ಭಾರತ ಹವಣಿಸುತ್ತಿದೆ.

  • Share this:

ಭಾರತ ಮತ್ತು ಆಸ್ಟ್ರೇಲಿಯಾ (IND v AUS) ನಡುವಿನ 3 ಪಂದ್ಯಗಳ ಸರಣಿಯ ಅಂತಿಮ ಮತ್ತು 3ನೇ ಟಿ20 ಪಂದ್ಯವು ಇಂದು ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Rajiv Gandhi International Cricket Stadium Hyderabad) ನಡೆಯಲಿದೆ. ಈಗಾಗಲೇ ಸರಣಿಯಲ್ಲಿ ಮೊದಲ ಪಂದ್ಯ ಆಸೀಸ್ ಗೆದ್ದಿದ್ದರೆ, 2ನೇ ಪಂದ್ಯವನ್ನು ಭಾರತ ಗೆದ್ದು ಸರಣಿ ಸಮಗೊಂಡಿದೆ. ಹೀಗಾಗಿ ಇಂದಿನ ಪಂದ್ಯ ಗೆಲ್ಲುವ ತಂಡ ಸರಣಿಯನ್ನು ಕೈವಶ ಮಾಡಿಕೊಳ್ಳಲಿದೆ. ಹೀಗಾಗಿ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಹಾಗಿದ್ದರೆ ಇಂದಿನ ಪಂದ್ಯದ ಪರಿಸ್ಥಿತಿಗಳು ಏನು, ಹೈದರಬಾದ್ ಹವಾಮಾನ ವರದಿ ಹೇಗಿದೆ? ಪಿಚ್​ ರಿಪೋರ್ಟ್ ಯಾರಿಗೆ ಹೆಚ್ಚು ಸಹಾಯಕವಾಗಲಿದೆ ಎಂದು ಅಂಶವನ್ನು ತಿಳಿಯೋಣ.


ಪಂದ್ಯದ ವಿವರ:


ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯವು ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ಸಂಜೆ 7.00 ರಿಂದ ನಡೆಯಲಿದೆ. ಟಾಸ್ ಸಂಜೆ 6:30ಕ್ಕೆ ನಡೆಯಲಿದೆ. ಈ ಸರಣಿಯನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನೇರ ಪ್ರಸಾರವನ್ನು ವೀಕ್ಷಿಸಬಹುದು.  ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಪಂದ್ಯದ ಲೈವ್ ಅಪ್‌ಡೇಟ್‌ಗಳಿಗಾಗಿ News 18 Kannada ವೆಬ್‌ಸೈಟ್ ಅನುಸರಿಸಿ.


 ಹವಾಮಾನ ವರದಿ:


ಕಳೆದ ಪಂದ್ಯದಲ್ಲಿ ನಾಗ್ಪುರದಲ್ಲಿ ಮಳೆಯು ಕಾರಣ ಪಂದ್ಯವನ್ನು ಕೇವಲ 8 ಓವರ್​ಗಳಿಗೆ ಸೀಮಿತ ಮಾಡಲಾಗಿತ್ತು. ಆದರೆ ಇಂದು ಹೈದರಬಾದ್​ನಲ್ಲಿ ಮಳೆಯು ಅಡ್ಡಿಪಡಿಸುವುದು ಕಡಿಮೆ ಎನ್ನಲಾಗುತ್ತಿದೆ. ಕೇವಲ ಶೇ.11ರಷ್ಟು ಮಾತ್ರ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಮ್ಮೆ ಏನಾದರೂ ಮಳೆ ಬಂದಲ್ಲಿ ಅದು ಕೇವಲ ಕೆಲ ನಿಮಿಷಗಳಷ್ಟೇ ಬರಲಿದೆ ಎಂದು ಹೇಳಲಾಗಿದೆ. ಇನ್ನು, ಇಂದು ರಾತ್ರಿ ಶೇ. 59 ರಷ್ಟು ಮೋಡ ಇರಲಿದೆ. 22 ಡಿಗ್ರಿ ಸೆ. ನಷ್ಟು ತಾಪಮಾನ ಇರಲಿದೆ.


ಇದನ್ನೂ ಓದಿ: MS Dhoni: ಮಹತ್ವದ ಘೋಷಣೆ ಮಾಡಿದ ಧೋನಿ, ವಿಶ್ವಕಪ್​ ಕುರಿತು ಭವಿಷ್ಯ ನುಡಿದ ಕ್ಯಾಪ್ಟನ್​ ಕೂಲ್


ಪಿಚ್​ ರಿಪೋರ್ಟ್:


ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿ​  ಪಿಚ್​ ಆಗಿದೆ. ಹೀಗಾಗಿ ಟಿ20 ಕ್ರಿಕೆಟ್​ನಲ್ಲಿ ದೊಡ್ಡ ಮೊತ್ತದ ಸ್ಕೋರ್​ ಮಾಡಲು ಇದು ಸಹಾಯಕವಾಗಿದ್ದು, ರನ್​ಗಳ ಮಳೆ ಸುರಿಯುವ ಸಾಧ್ಯತೆ ಇದೆ. ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 190 ರನ್ ಆಗಿದ್ದು, 2ನೇ ಇನ್ನಿಂಗ್ಸ್ ನಲ್ಲಿ ಸರಾಸರಿ ಸ್ಕೋರ್​ 160 ರನ್ ಹೀಗಾಗಿ ಈ ಪಿಚ್​ನಲ್ಲಿ ಅಂದರೆ ಇಂದು ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಮೈದಾನದಲ್ಲಿ ವಿರಾಟ್ ಕೊಹ್ಲಿ ಉತ್ತಮ ದಾಖಲೆ ಹೊಂದಿದ್ದು, ಟಿ20 ಕ್ರಿಕೆಟ್​ನಲ್ಲಿ ಈ ಮೈದಾನದಲ್ಲಿ ಕೊಹ್ಲಿ 94 ರನ್ ಗಳಿಸಿ ಮಿಂಚಿದ್ದರು.


ಇದನ್ನೂ ಓದಿ: IND vs AUS: ಆಸೀಸ್​ ವಿರುದ್ಧದ ಅಂತಿಮ ಹಣಾಹಣಿಗೆ ಟೀಂ ಇಂಡಿಯಾದ ಸ್ಟಾರ್​ ಪ್ಲೇಯರ್​ ಔಟ್​?


IND vs AUS ಸಂಭಾವ್ಯ ತಂಡ:


ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ.


ಆಸ್ಟ್ರೇಲಿಯಾ ಸಂಭಾವ್ಯ ತಂಡ:  ಆರನ್ ಫಿಂಚ್, ಕ್ಯಾಮೆರಾನ್ ಗ್ರೀನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಡೇನಿಯಲ್​ ಸ್ಯಾಮ್ಸ್, ಪ್ಯಾಟ್ ಕಮಿನ್ಸ್, ಸೀನ್ ಅಬಾಟ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.

Published by:shrikrishna bhat
First published: