• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • IND vs AUS: ಭಾರತ-ಆಸೀಸ್ ಪಂದ್ಯದ ಮೈದಾನಕ್ಕೆ ಆಗಮಿಸಿದ ವಿಶೇಷ ಅತಿಥಿ, ಕೆಲಕಾಲ ಮ್ಯಾಚ್​ ಸ್ಥಗಿತ

IND vs AUS: ಭಾರತ-ಆಸೀಸ್ ಪಂದ್ಯದ ಮೈದಾನಕ್ಕೆ ಆಗಮಿಸಿದ ವಿಶೇಷ ಅತಿಥಿ, ಕೆಲಕಾಲ ಮ್ಯಾಚ್​ ಸ್ಥಗಿತ

IND vs AUS ODI

IND vs AUS ODI

IND vs AUS: ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಭೇಟಿಯಾಗಲು ಭದ್ರತಾ ಸರಪಳಿಯನ್ನು ಮುರಿದು ಮೈದಾನಕ್ಕೆ ಪ್ರವೇಶಿಸುತ್ತಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಚೆನ್ನೈ ಏಕದಿನ ಪಂದ್ಯದ ವೇಳೆ ಭದ್ರತಾ ಲೋಪ ಸಂಭವಿಸಿದೆ.

 • Share this:

ಕ್ರಿಕೆಟ್ ಆಟದ ಸಂದರ್ಭದಲ್ಲಿ ಅಭಿಮಾನಿಗಳು ಮೈದಾನಕ್ಕೆ ನುಗ್ಗುವುದು ಹೊಸದೇನಲ್ಲ. ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಭೇಟಿಯಾಗಲು ಭದ್ರತಾ ಸರಪಳಿಯನ್ನು ಮುರಿದು ಮೈದಾನಕ್ಕೆ ಪ್ರವೇಶಿಸುತ್ತಾರೆ. ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವೆ ನಡೆಯುತ್ತಿರುವ ಚೆನ್ನೈ ಏಕದಿನ ಪಂದ್ಯದ ವೇಳೆ ಭದ್ರತಾ ಲೋಪ ಸಂಭವಿಸಿದೆ. ಈ ರೀತಿ ಮಾಡಿದ್ದು ಯಾವುದೇ ಕ್ರಿಕೆಟ್ ಅಭಿಮಾನಿಯಲ್ಲ ಒಂದು ನಾಯಿ (Dog). ಲೈವ್​ ಪಂದ್ಯದ ವೇಳೆ ನಾಯಿಯೊಂದು ಮೈದಾನಕ್ಕೆ ಪ್ರವೇಶಿಸಿತು. ಈ ನಾಯಿಯಿಂದಾಗಿ ಪಂದ್ಯವನ್ನು ಕೆಲವು ನಿಮಿಷಗಳ ಕಾಲ ನಿಲ್ಲಿಸಬೇಕಾಯಿತು. ಈ ವೇಳೆ ಕಾಮೆಂಟ್ ಮಾಡಿರುವ ಮಾಜಿ ಆಟಗಾರ ಸುನೀಲ್ ಗವಾಸ್ಕರ್ (Sunil Gavaskar) ಅವರ ಹೇಳಿಕೆಯೂ ಸಾಕಷ್ಟು ವೈರಲ್ ಆಗುತ್ತಿದೆ.


ಮೈದಾನಕ್ಕೆ ನುಗ್ಗಿದ ನಾಯಿ:


ವಾಸ್ತವವಾಗಿ ಪಂದ್ಯದ 43ನೇ ಓವರ್ ನಡೆಯುತ್ತಿತ್ತು. ಸೀನ್ ಅಬಾರ್ಟ್ ಮತ್ತು ಆಸ್ಟನ್ ಎಗ್ಗರ್ ಮೈದಾನದಲ್ಲಿ ಆಡುತ್ತಿದ್ದರು. ಆಗ ಏಕಾಏಕಿ ನಾಯಿಯೊಂದು ಕ್ರೀಡಾಂಗಣಕ್ಕೆ ಪ್ರವೇಶಿಸಿತು. ಈ ನಾಯಿ ಆಟಗಾರರ ಕಡೆಗೆ ಓಡಲಾರಂಭಿಸಿತು. ಮೈದಾನದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ನಾಯಿಯನ್ನು ಕ್ರೀಡಾಂಗಣದಿಂದ ಹೊರಗೆ ಓಡಿಸಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಕೆಲ ನಿಮಿಷಗಳ ಕಾಲ ಪಂದ್ಯವನ್ನು ನಿಲ್ಲಿಸಬೇಕಾಯಿತು. ಈ ನಾಯಿ ಗ್ರೌಂಡ್ ಸ್ಟಾಫ್ ಗೆ ತುಂಬಾ ತೊಂದರೆ ಕೊಟ್ಟಿದೆ. ಏತನ್ಮಧ್ಯೆ, ಕಾಮೆಂಟರಿ ಮಾಡುತ್ತಿರುವ ಸುನಿಲ್ ಗವಾಸ್ಕರ್, ಈ ನಾಯಿ ತನ್ನನ್ನು ಹಿಂಬಾಲಿಸುವ ಮೈದಾನದ ಸಿಬ್ಬಂದಿಯ ಫಿಟ್ನೆಸ್ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.ಮೊದಲು ಬ್ಯಾಟ್​ ಮಾಡಿದ ಆಸೀಸ್​:


ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಉತ್ತಮ ಆರಂಭದ ಹೊರತಾಗಿಯೂ ಆಸ್ಟ್ರೇಲಿಯಾ ತಂಡ 49 ಓವರ್‌ಗಳಲ್ಲಿ 269 ರನ್‌ಗಳಿಗೆ ಆಲೌಟ್ ಆಯಿತು. ಸರಣಿಯ ಮೊದಲ ಪಂದ್ಯವನ್ನು ಭಾರತ ತಂಡ ಐದು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಮುಂಬೈನಲ್ಲಿ ಭಾರತದ ಗೆಲುವಿನ ನಂತರ, ವಿಶಾಖಪಟ್ಟಣಂನಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಕಾಂಗರೂ ತಂಡ 10 ವಿಕೆಟ್‌ಗಳ ಜಯ ಸಾಧಿಸಿದೆ.


ಇದನ್ನೂ ಓದಿ: WTC Final 2023: ಟೀಂ ಇಂಡಿಯಾಗೆ ಬಿಗ್​ ಶಾಕ್​, ಏಕದಿನ-ಟೆಸ್ಟ್​ ವಿಶ್ವಕಪ್​ನಿಂದ ಸ್ಟಾರ್​ ಪ್ಲೇಯರ್​ ಔಟ್​?


ಟೀಂ ಇಂಡಿಯಾ ಭರ್ಜರಿ ಬೌಲಿಂಗ್​:


ಟಾಸ್​ ಸೋತು ಮೊದಲು ಬೌಲಿಂಗ್ ಮಾಡಿದ ಭಾರತ ತಂಡ ಭರ್ಜರಿ ಬೌಲಿಂಗ್ ಮಾಡಿತು. ಆರಂಭದಿಂದಲೂ ಸಂಘಟಿತ ದಾಳಿ ನಡೆಸಿದ ಟೀಂ ಇಂಡಿಯಾ ಆಸ್ಟ್ರೇಲಿಯಾ ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳನ್ನು ಔಟ್​ ಮಾಡುವಲ್ಲಿ ಯಶಸ್ವಿಯಾದರು.  ಭಾರತದ ಪರ ಹಾರ್ದಿಕ್​ ಪಾಂಡ್ಯ ಮತ್ತು ಕಲ್ದೀಪ್​ ಯಾದವ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್​ ತಾಲ 2 ವಿಕೆಟ್​ ಕಬಳಿಸಿದರು.
ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್​ 11:


ಭಾರತ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ

top videos


  ಆಸ್ಟ್ರೇಲಿಯಾ ಪ್ಲೇಯಿಂಗ್​ 11: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೊಯಿನಿಸ್, ಆಷ್ಟನ್ ಅಗರ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ.

  First published: