• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs AUS: ಟಾಸ್​ ಗೆದ್ದ ಆಸೀಸ್​ ಬ್ಯಾಟಿಂಗ್​ ಆಯ್ಕೆ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs AUS: ಟಾಸ್​ ಗೆದ್ದ ಆಸೀಸ್​ ಬ್ಯಾಟಿಂಗ್​ ಆಯ್ಕೆ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs AUS

IND vs AUS

IND vs AUS: ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ತಂಡಗಳು ಇಂದು ಮೂರನೇ ಮತ್ತು ಕೊನೆಯ ODI ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದೆ.

  • Share this:

ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ತಂಡಗಳು ಇಂದು ಮೂರನೇ ಮತ್ತು ಕೊನೆಯ ODI ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ (M.A Chidambaram Stadium) ನಡೆಯುತ್ತಿದೆ. ಸದ್ಯ ಎರಡೂ ತಂಡಗಳು ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿವೆ. ಹೀಗಾಗಿ ಈ ಪಂದ್ಯ ನಿರ್ಣಾಯಕವಾಗಿರಲಿದೆ. ಈಗಾಗಲೇ ಟಾಸ್​ ಗೆದ್ದಿರುವ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್​ ಆರಂಭಿಸಿದೆ. ಇನ್ನು, ಭಾರತ ತಂಡ ತವರಿನಲ್ಲಿ ಸತತ ಎಂಟನೇ ಏಕದಿನ ಸರಣಿಯನ್ನು ಗೆಲ್ಲುವ ತವಕದಲ್ಲಿದೆ.


ಸತತ 8ನೇ ಸರಣಿ ಮೇಲೆ ಭಾರತದ ಕಣ್ಣು:


ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 6 ವರ್ಷಗಳ ನಂತರ ಏಕದಿನದಲ್ಲಿ ಮುಖಾಮುಖಿಯಾಗುತ್ತಿವೆ. ಇದಕ್ಕೂ ಮೊದಲು, 2017 ರಲ್ಲಿ ಇಬ್ಬರೂ ಇಲ್ಲಿ ಮುಖಾಮುಖಿಯಾಗಿದ್ದರು. ನಂತರ ಭಾರತ ಗೆದ್ದಿತು. ಆತಿಥೇಯ ಭಾರತ ತಂಡ ತನ್ನ ತವರು ನೆಲದಲ್ಲಿ ಸತತ ಎಂಟನೇ ಏಕದಿನ ಸರಣಿ ಗೆಲ್ಲುವತ್ತ ಕಣ್ಣಿಟ್ಟಿದೆ. 2019 ರಿಂದ, ಭಾರತವು ತವರಿನಲ್ಲಿ ಯಾವುದೇ ಏಕದಿನ ಸರಣಿಯನ್ನು ಕಳೆದುಕೊಂಡಿಲ್ಲ. ಭಾರತ ಇಲ್ಲಿ ಆಡಿದ 13 ಏಕದಿನ ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿದೆ. ಚೆನ್ನೈನಲ್ಲಿ 21 ಏಕದಿನ ಪಂದ್ಯಗಳು ನಡೆದಿದ್ದು, ಇದರಲ್ಲಿ ಟಾಸ್ ಗೆದ್ದ ತಂಡ 15 ಪಂದ್ಯಗಳನ್ನು ಗೆದ್ದಿದೆ.



ಗೆದ್ದರೆ ಮಾತ್ರ ರ‍್ಯಾಂಕಿಂಗ್​ನಲ್ಲಿ ಉಳಿಗಾಲ:


ಇನ್ನು, 2ನೇ ಏಕದಿನ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಭಾರತ, ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲಿ ನಂಬರ್ ಒನ್ ಸ್ಥಾನ ಕಾಯ್ದುಕೊಳ್ಳಬೇಕಾದರೆ ಇಂದು ನಡೆಯಲಿರುವ ಮೂರನೇ ಏಕದಿನ ಪಂದ್ಯವನ್ನು ಗೆಲ್ಲಲೇಬೇಕು. ಇಲ್ಲವಾದಲ್ಲಿ ಸರಣಿಯೊಂದಿಗೆ ಏಕದಿನ ರ‍್ಯಾಂಕಿಂಗ್ ನಲ್ಲಿ ಮೊದಲ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಮೂರನೇ ಏಕದಿನ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಲಿದೆ. ಐಸಿಸಿ ಏಕದಿನ ತಂಡ ರ‍್ಯಾಂಕಿಂಗ್ ನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕು. ಆಸೀಸ್ ಗೆದ್ದರೆ, ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಳ್ಳಲಿದೆ ಮತ್ತು ಏಕದಿನ ತಂಡದ ಶ್ರೇಯಾಂಕದಲ್ಲಿ ಪ್ರಸ್ತುತ 112 ಅಂಕಗಳಿಂದ 113 ಅಂಕಗಳಿಗೆ ಏರಲಿದೆ.


ಇದನ್ನೂ ಓದಿ: MS Dhoni: ಧೋನಿ ನಿವೃತ್ತಿ ಮತ್ತೆ ಮುಂದೂಡಿಕೆ? ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ CSK ಆಟಗಾರ


ಕೊಹ್ಲಿ ರೆಕಾರ್ಡ್ಸ್​​ ಸೂಪರ್​:


ವಿರಾಟ್ ಕೊಹ್ಲಿ ಚೆನ್ನೈನಲ್ಲಿ 7 ODI ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರು ಒಟ್ಟು 283 ರನ್ ಗಳಿಸಿದ್ದಾರೆ. ಚೆಪಾಕ್‌ನಲ್ಲಿ ವಿರಾಟ್ 4 ಬಾರಿ ಸಿಂಗಲ್ ಡಿಜಿಟ್‌ನಲ್ಲಿ ಔಟಾದಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಆಡುವ ನಿರೀಕ್ಷೆಯಿದೆ. ಅಲ್ಲದೇ ಸ್ಟೀವ್ ಸ್ಮಿತ್ ತಮ್ಮ 5000 ODI ರನ್‌ಗಳಿಂದ 51 ರನ್‌ಗಳ ದೂರದಲ್ಲಿದ್ದಾರೆ. ಏನಾದರೂ ಶತಕ ಸಿಡಿಸಿದರೆ ಭಾರತದ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಅನುಭವಿ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದಾರೆ. ಈ ಪಂದ್ಯದಲ್ಲಿ ಸ್ಮಿತ್ ನಾಯಕರಾಗಿದ್ದಾರೆ.




ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್​ 11:


ಭಾರತ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ


ಆಸ್ಟ್ರೇಲಿಯಾ ಪ್ಲೇಯಿಂಗ್​ 11: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೊಯಿನಿಸ್, ಆಷ್ಟನ್ ಅಗರ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ.

top videos
    First published: