ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ಕ್ರಿಕೆಟ್ ತಂಡಗಳ ನಡುವೆ ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡ ಆಸೀಸ್ ವಿರುದ್ಧ ಸೋಲನ್ನಪ್ಪಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಆಸೀಸ್ 2-1ರಿಂದ ಸರಣಿ ಜಯ ದಾಖಲಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 3ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸೀಸ್ ತಂಡ ಟೀಂ ಇಂಡಿಯಾಗೆ 270 ರನ್ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಭಾರತ ತಂಡ (Team India) 49.1 ಓವರ್ಗಳಲ್ಲಿ 248 ರನ್ಗೆ ಆಲೌಟ್ ಆಗುವ ಮೂಲಕ 21 ರನ್ನಿಂದ ಸೋಲನ್ನಪ್ಪಿತು.
ಬ್ಯಾಟಿಂಗ್ನಲ್ಲಿ ಎಡವಿದ ಟೀಂ ಇಂಡಿಯಾ:
ಟೀಂ ಇಂಡಿಯಾಗೆ 270 ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡ 49.1 ಓವರ್ಗಳಲ್ಲಿ 248 ರನ್ಗೆ ಆಲೌಟ್ ಆಗುವ ಮೂಲಕ 21 ರನ್ನಿಂದ ಸೋಲನ್ನಪ್ಪಿತು. ಈ ಮೂಲಕ ಆಸೀಸ್ ವಿರುದ್ಧ ಏಕದಿನ ಸರಣಿ ಕೈಚೆಲ್ಲಿತು. ಭಾರತದ ಪರ ರೋಹಿತ್ ಶರ್ಮಾ 30 ರನ್, ಶುಬ್ಮನ್ ಗಿಲ್ 37, ವಿರಾಟ್ ಕೊಹ್ಲಿ 54 ರನ್, ಕೆಎಲ್ ರಾಹುಲ್ 32 ರನ್, ಅಕ್ಷರ್ ಪಟೇಲ್ 2 ರನ್, ಹಾರ್ದಿಕ್ ಪಾಂಡ್ಯ 40 ರನ್, ಸೂರ್ಯಕುಮಾರ್ ಯಾದವ್ ಶೂನ್ಯ, ರವೀಂದ್ರ ಜಡೇಜಾ 18 ರನ್, ಕುಲ್ದೀಪ್ ಯಾದವ್ 6 ರನ್, ಮೊಹಮ್ಮದ್ ಶಮಿ 14 ರನ್ ಮತ್ತು ಮೊಹಮ್ಮದ್ ಸಿರಾಜ್ 3 ರನ್ ಗಳಿಸಿದರು.
What a game 💥
Australia clinch the decider in Chennai to bag the ODI series 2-1 🙌#INDvAUS | 📝: https://t.co/ugxHxHyT1z pic.twitter.com/5kU9WRDiYP
— ICC (@ICC) March 22, 2023
ಭಾರತ ತಂಡದ ಪರ ಹಾರ್ದಿಕ್ ಪಾಂಡ್ಯ ಮತ್ತು ಕುಲದೀಪ್ ಯಾದವ್ 3-3 ವಿಕೆಟ್ ಪಡೆದರು. ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದ ಹಾರ್ದಿಕ್ 8 ಓವರ್ ಗಳಲ್ಲಿ 44 ರನ್ ನೀಡಿ ಈ ಮೂರು ವಿಕೆಟ್ ಕಬಳಿಸಿದರು. ಕುಲದೀಪ್ 10 ಓವರ್ ಗಳಲ್ಲಿ 56 ರನ್ ನೀಡಿ 3 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ 2-2 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ನಂಬರ್ 1 ಸ್ಥಾನ ಕಳೆದುಕೊಂಡ ಸಿರಾಜ್!
ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದ್ದ ಆಸೀಸ್:
ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 49 ಓವರ್ಗಳಿಗೆ 10 ವಿಕೆಟ್ ನಷ್ಟಕ್ಕೆ 269 ರನ್ ಗಳಿಸುವ ಮೂಲಕ ಭಾರತಕ್ಕೆ ಉತ್ತಮ ಮೊತ್ತದ ಟಾರ್ಗೆಟ್ ನೀಡಿತ್ತು. ಆಸೀಸ್ ಪರ, ಡೇವಿಡ್ ವಾರ್ನರ್ 23 ರನ್, ಟ್ರಾವಿಸ್ ಹೆಡ್ 33 ರನ್, ಮಿಚೆಲ್ ಮಾರ್ಷ್ 47 ರನ್, ಸ್ಟೀವ್ ಸ್ಮಿತ್ ಶೂನ್ಯ, ಮಾರ್ನಸ್ ಲಬುಶೇನ್ 28 ರನ್, ಅಲೆಕ್ಸ್ ಕ್ಯಾರಿ 38 ರನ್, ಮಾರ್ಕಸ್ ಸ್ಟೊಯಿನಿಸ್ 25 ರನ್, ಆಷ್ಟನ್ ಅಗರ್ 17 ರನ್, ಸೀನ್ ಅಬಾಟ್ 26 ರನ್, ಮಿಚೆಲ್ ಸ್ಟಾರ್ಕ್ 10 ರನ್ ಮತ್ತು ಆಡಮ್ ಝಂಪಾ 10 ರನ್ ಗಳಿಸಿದರು.
ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೊಯಿನಿಸ್, ಆಷ್ಟನ್ ಅಗರ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ