IND vs AUS: ಭಾರತ ಪ್ರವಾಸಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಬಿಗ್​ ಶಾಕ್​, 3 ಆಟಗಾರರು ಔಟ್

IND vs AUS: ಭಾರತದ ವಿರುದ್ಧ ಸರಣಿಗಾಗಿ ಆಸೀಸ್​ ತಂಡ ಭಾರತಕ್ಕೆ ಬರಲಿದೆ. ಆದರೆ ಈ ಸರಣಿಯಿಂದ ಇದೀಗ ತಂಡದ ಪ್ರಮುಖ 3 ಆಟಗಾರರು ಗಾಯದ ಸಮಸ್ಯೆಯಿಂದ ಹೊರನಡೆದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 ಆಸ್ಟ್ರೇಲಿಯಾ (Australia) ತಂಡ ಮತ್ತೊಮ್ಮೆ ಟಿ20 ವಿಶ್ವಕಪ್ (T20 World Cup) ಗೆಲ್ಲಲು ಭರ್ಜರಿ ತಯಾರಿ ನಡೆಸುತ್ತಿದೆ. ಈ ತಂಡ ಟೂರ್ನಿಯ ಹಾಲಿ ಚಾಂಪಿಯನ್ ಕೂಡ ಆಗಿದೆ. ಕಾಂಗರೂ ತಂಡ ಟಿ20 ವಿಶ್ವಕಪ್​ಗೂ ಮುನ್ನ ಭಾರತ ಪ್ರವಾಸ ಕೈಗೊಳ್ಳಲಿದೆ. ಇದರ ನಡುವೆ 3 ಪಂದ್ಯಗಳ T20 ಸರಣಿಯನ್ನು (IND vs AUS) ಆಡಬೇಕಾಗಿದೆ. ಆದರೆ ಗಾಯದ ಕಾರಣ 3 ಪ್ರಮುಖ ಆಟಗಾರರು ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಟೀಂ ಮ್ಯಾನೇಜ್‌ಮೆಂಟ್ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ ಎಂದು ಹೇಳಿದೆ. ಇದರಿಂದಾಗಿ ತಂಡದ ಪ್ರಮುಖ ಆಟಗಾರರು ಭಾರತದ ವಿರುದ್ಧದ ಸರಣಿಯಿಂದ ದೂರ ಉಳಿದಿದ್ದಾರೆ. ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 20 ರಂದು ಮೊಹಾಲಿಯಲ್ಲಿ ನಡೆಯಲಿದೆ.

ಭಾರತ ಸರಣಿಯಿಂದ ಆಸೀಸ್​ ಸ್ಟಾರ್​ ಪ್ಲೇಯರ್ಸ್​ ಔಟ್​:

ಹೌದು, ಭಾರತದ ವಿರುದ್ಧ ಸರಣಿಗಾಗಿ ಆಸೀಸ್​ ತಂಡ ಭಾರತಕ್ಕೆ ಬರಲಿದೆ. ಆದರೆ ಈ ಸರಣಿಯಿಂದ ಇದೀಗ ತಂಡದ ಪ್ರಮುಖ 3 ಆಟಗಾರರು ಔಟ್​ ಆಗಿದ್ದಾರೆ. ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್, ಆಲ್ ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮತ್ತು ಮಿಚೆಲ್ ಮಾರ್ಷ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರ ನಡೆದಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾದಿಂದ ಬಂದಿರುವ ಮಾಹಿತಿ ಪ್ರಕಾರ, ಮಿಚೆಲ್ ಸ್ಟಾರ್ಕ್ ಅವರು ಮೊಣಕಾಲು ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.

ಇದಲ್ಲದೇ ಮಾರ್ಷ್ ಅವರಿಗೆ ಸ್ಟಾಯಿನಿಸ್ ಭಾಗದಲ್ಲಿ ಸಮಸ್ಯೆ ಇದೆ. ಅವರ ಸ್ಥಾನಕ್ಕೆ ನಾಥನ್ ಎಲ್ಲಿಸ್, ಡೇನಿಯಲ್ ಸ್ಯಾಮ್ಸ್ ಮತ್ತು ಸೀನ್ ಅಬಾಟ್ ಸೇರ್ಪಡೆಗೊಂಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಟಿಮ್ ಡೇವಿಡ್ ಪ್ರವಾಸದಿಂದ ಪಾದಾರ್ಪಣೆ ಮಾಡಬಹುದು. ಸ್ಟೀವ್ ಸ್ಮಿತ್ ನಂಬರ್-3ರಲ್ಲಿ ಅವಕಾಶ ಪಡೆಯಬಹುದು. ಡೇವಿಡ್ ವಾರ್ನರ್ ಕುಟುಂಬದೊಂದಿಗೆ ಸಮಯ ಕಳೆಯುವ ಕಾರಣ ಈಗಾಗಲೇ ಪ್ರವಾಸದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Team India: ಆಸೀಸ್- ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ, ತಂಡದಿಂದ ಸ್ಟಾರ್​ ಆಲ್​ರೌಂಡರ್​ ಔಟ್​

ಭಾರತ Vs ಆಸ್ಟ್ರೇಲಿಯಾ ಸರಣಿ ವೇಳಾಪಟ್ಟಿ:

6 ದಿನಗಳಲ್ಲಿ 3 ಟಿ20 ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ದಕ್ಷಿಣ ಆಫ್ರಿಕಾ ಕೂಡ ಭಾರತಕ್ಕೆ ಬರಬೇಕಿದೆ. ಮೊದಲ ಪಂದ್ಯ ಸೆಪ್ಟೆಂಬರ್ 20 ರಂದು ಮೊಹಾಲಿಯಲ್ಲಿ ನಡೆಯಲಿದೆ. ಎರಡನೇ ಪಂದ್ಯ ಸೆಪ್ಟೆಂಬರ್ 23 ರಂದು ನಾಗ್ಪುರದಲ್ಲಿ ಮತ್ತು ಕೊನೆಯ ಪಂದ್ಯ ಸೆಪ್ಟೆಂಬರ್ 25 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ದ್ವಿಪಕ್ಷೀಯ ಸರಣಿಯ ಹೊರತಾಗಿ, ಬಿಸಿಸಿಐ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಿದೆ.

ಇದನ್ನೂ ಓದಿ: T20 World Cup 2022: ಟೀಂ ಇಂಡಿಯಾ ವಿಶ್ವಕಪ್​ ತಂಡವನ್ನು ಟೀಕಿಸಿದ ಕಾಂಗ್ರೆಸ್ ನಾಯಕ, ಫೇಸ್​ಬುಕ್​ ಪೋಸ್ಟ್ ವೈರಲ್

IND vs AUS ತಂಡ:

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್ ಮತ್ತು ಜಸ್ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ ತಂಡ: ಆರನ್ ಫಿಂಚ್ (ನಾಯಕ), ಸೀನ್ ಅಬಾಟ್, ಆಶ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಜೋಸ್ ಇಂಗ್ಲಿಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಡೇನಿಯಲ್ ಸ್ಯಾಮ್ಸ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್ ಮತ್ತು ಆಡಮ್ ಝಂಪಾ.
Published by:shrikrishna bhat
First published: