IND vs AUS: ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ, ಸರಣಿ ಮುನ್ನಡೆ

ಭಾರತಕ್ಕೆ ಭರ್ಜರಿ ಜಯ

ಭಾರತಕ್ಕೆ ಭರ್ಜರಿ ಜಯ

IND vs AUS Test: ದೆಹಲಿ ಟೆಸ್ಟ್‌ನಲ್ಲಿ ಭಾರತ ತಂಡವು ಆಸೀಸ್ (IND vs AUS) ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಬಾರ್ಡರ್​ ಗವಾಸ್ಕರ್ ಟ್ರೋಫಿಯ 4 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-0 ಮುನ್ನಡೆ ಸಾಧಿಸಿದೆ.

  • Share this:

ದೆಹಲಿ ಟೆಸ್ಟ್‌ನಲ್ಲಿ ಭಾರತ ತಂಡವು ಆಸೀಸ್ (IND vs AUS) ವಿರುದ್ಧ ಭರ್ಜರಿ ಜಯ ದಾಖಲಿಸಿದೆ. 2ನೇ ಟೆಸ್ಟ್​ನ ಮೂರನೇ ದಿನದಾಟದ ಆರಂಭದಲ್ಲಿ ಆಸೀಸ್​ ಮೇಲೆ ಭರ್ಜರಿ ದಾಳಿ ನಡೆಸಿದ ಜಡೇಜಾ (Ravindra Jadeja) 7 ವಿಕೆಟ್ ಕಬಳಿಸಿದರೆ ಆರ್ ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಆಸೀಸ್​ ಭಾರತಕ್ಕೆ ಗೆಲುವಿಗೆ 115 ರನ್‌ಗಳ ಗುರಿ ನೀಡಿತು. ಈ ಮೊತ್ತ ಬೆನ್ನಟ್ಟಿದ ಭಾರತ ತಂಡ 4 ವಿಕೆಟ್​ ನಷ್ಟಕ್ಕೆ 118 ರನ್ ಗಳಿಸುವ ಮೂಲಕ ಬರೋಬ್ಬರಿ 6 ವಿಕೆಟ್​ಗಳ ಜಯ ದಾಖಲಿಸಿದೆ. ಇದರಿಂದಾಗಿ ಬಾರ್ಡರ್​ ಗವಾಸ್ಕರ್ ಟ್ರೋಫಿಯ 4 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-0 ಮುನ್ನಡೆ ಸಾಧಿಸಿದೆ.


ಭಾರತಕ್ಕೆ ಸುಲಭ ಜಯ:


ಆಸೀಸ್​ ನೀಡಿದ 115 ರನ್​​ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ ಅಂತಿಮವಾಗಿ 4 ವಿಕೆಟ್​ ನಷ್ಟಕ್ಕೆ 118 ರನ್​ ಗಳಿಸುವ ಮೂಲಕ 6 ವಿಕೆಟ್​ಗಳ ಜಯ ಸಾಧಿಸಿತು. ಈ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಆಸೀಸ್​ ನೀಡಿದ ಟಾರ್ಗೆಟ್​ ಬೆನ್ನಟ್ಟಿದ ಭಾರತದ ಪರ ನಾಯಕ ರೋಹಿತ್ ಶರ್ಮಾ 31 ರನ್, ಕೆಎಲ್ ರಾಹುಲ್ 1 ರನ್, ವಿರಾಟ್ ಕೊಹ್ಲಿ 20 ರನ್, ಶ್ರೇಯಸ್​ ಅಯ್ಯರ್ 12 ರನ್, ಚೇತೇಶ್ವರ್ ಪೂಜಾರ 31 ರನ್ ಮತ್ತು ಶಿಖರ್ ಭರತ್ 23 ರನ್ ಗಳಿಸುವ ಮೂಲಕಲ ಗೆಲುವಿನಲ್ಲಿ ಪ್ರಮುಖರಾದರು.



ಬೌಲಿಂಗ್​ನಲ್ಲಿ ಮಿಂಚಿದ ಜಡ್ಡು:


ಭಾರತ ಮತ್ತು ಆಸೀಸ್​ ನಡುವಿನ 2ನೇ ಟೆಸ್ಟ್​ ಪಂದ್ಯದ 3ನೇ ದಿನದಾಟದ ಆರಂಭದಲ್ಲಿಯೇ ಟೀಂ ಇಂಡಿಯಾ ಭರ್ಜರಿ ಬೌಲಿಂಗ್ ಮಾಡುವ ಮೂಲಕ ಆಸ್ಟ್ರೇಲಿಯಾವನ್ನು ಅಲ್ಪಮೊತ್ತಕ್ಕೆ ಆಲೌಟ್​ ಮಾಡಿತು. ಭಾರತದ ಪರ ಇಂದು ಮತ್ತೆ ರವೀಂದ್ರ ಜಡೇಜಾ ಭರ್ಜರಿ ಬೌಲಿಂಗ್ ಮಾಡಿದ್ದಾರೆ. ಅವರು 12.1 ಓವರ್​ ಮಾಡಿ 42 ರನ್​ ನೀಡಿ ಬರೋಬ್ಬರಿ 7 ವಿಕೆಟ್ ಪಡೆದು ಮಿಂಚಿದರು. ಅಶ್ವಿನ್ ಸಹ 3 ವಿಕೆಟ್​ ಕಬಳಿಸಿದರು.


ಇದನ್ನೂ ಓದಿ: IND vs PAK: ಟೀಂ ಇಂಡಿಯಾ​ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!


ಬ್ಯಾಟಿಂಗ್​ನಲ್ಲಿ ಎಡವಿದ ಆಸ್ಟ್ರೇಲಿಯಾ:


ಭಾರತದ ದಾಳಿಗೆ ಆಸ್ಟ್ರೇಲಿಯಾ ಫೆವೆಲಿಯನ್​ ಪೆರೇಡ್​ ನಡೆಸಿತು. ಆಸೀಸ್​ ಕೇವಲ 113 ರನ್​ಗಳಿಗೆ ಆಲೌಟ್​ ಆಯಿತು. ಆಸ್ಟ್ರೇಲಿಯಾ ಪರ, ಉಸ್ಮಾನ್ ಖ್ವಾಜಾ 6 ರನ್, ಮಾರ್ನಸ್ ಲಾಬುಶೇನ್ 35 ರನ್, ಸ್ಟೀವ್ ಸ್ಮಿತ್ 9 ರನ್, ಮ್ಯಾಟ್ ರೆನ್ಶಾ 2 ರನ್, ಟ್ರಾವಿಸ್ ಹೆಡ್ 43 ರನ್, ಪೀಟರ್ ಹ್ಯಾಂಡ್ಸ್‌ಕಾಂಬ್ ಶೂನ್ಯ, ಅಲೆಕ್ಸ್ ಕ್ಯಾರಿ 7 ರನ್, ಪ್ಯಾಟ್ ಕಮಿನ್ಸ್ ಶೂನ್ಯ, ನಾಥನ್ ಲಿಯಾನ್ 8 ರನ್, ಟಾಡ್ ಮರ್ಫಿ 3 ರನ್, ಮ್ಯಾಥ್ಯೂ ಕುಹ್ನೆಮನ್ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು.




ಭಾರತ-ಆಸ್ಟ್ರೇಲಿಯಾ ಪ್ಲೇಯಿಂಗ್​ 11:


ಭಾರತ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.


ಆಸ್ಟ್ರೇಲಿಯಾ ಪ್ಲೇಯಿಂಗ್​ 11: ಮ್ಯಾಟ್ ರೆನ್ಶಾ, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಪೀಟರ್ ಹ್ಯಾಂಡ್ಸ್‌ಕಾಂಬ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್.

Published by:shrikrishna bhat
First published: