• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs AUS: ಇಂದು ಭಾರತ-ಆಸೀಸ್​ 2ನೇ ಟೆಸ್ಟ್​ ಆರಂಭ, ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs AUS: ಇಂದು ಭಾರತ-ಆಸೀಸ್​ 2ನೇ ಟೆಸ್ಟ್​ ಆರಂಭ, ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs AUS

IND vs AUS

IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಸರಣಿಯ 2ನೇ ಪಂದ್ಯವು ಇಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯವು 9:30ಕ್ಕೆ ಆರಂಭವಾಗಲಿದ್ದು, ಪಂದ್ಯದ ಆರಂಭಕ್ಕೂ ಮುನ್ನ 9 ಗಂಟೆಗೆ ಟಾಸ್​ ಆಗಲಿದೆ.

  • Share this:

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ (IND vs AUS) ಇಂದಿನಿಂದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ (Arun Jaitley Stadium) ನಡೆಯಲಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ (Border–Gavaskar Trophy) ಅಡಿಯಲ್ಲಿ ನಡೆಯುತ್ತಿರುವ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಇದು ಚೇತೇಶ್ವರ ಪೂಜಾರ ಅವರ 100ನೇ ಟೆಸ್ಟ್ ಪಂದ್ಯವಾಗಿದೆ. ಈ ಟೆಸ್ಟ್​ನ್ನು ಸ್ಮರಣೀಯವಾಗಿಸಲು ಪೂಜಾರ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಲು ಟೀಂ ಇಂಡಿಯಾ ಸಿದ್ಧವಾಗಿದೆ.


ಪಂದ್ಯದ ವಿವರ:


ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಸರಣಿಯ 2ನೇ ಪಂದ್ಯವು ಇಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯವು 9:30ಕ್ಕೆ ಆರಂಭವಾಗಲಿದ್ದು, ಪಂದ್ಯದ ಆರಂಭಕ್ಕೂ ಮುನ್ನ 9 ಗಂಟೆಗೆ ಟಾಸ್​ ಆಗಲಿದೆ. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಸರಣಿಯ ನೇರ ಪ್ರಸಾರವನ್ನು ವೀಕ್ಷಿಸಬಹುದು, ಜೊತೆಗೆ ಡಿಡಿ ಸ್ಪೋರ್ಟ್ಸ್‌ನಲ್ಲಿ ಪಂದ್ಯವನ್ನು ಉಚಿತವಾಗಿ ಆನಂದಿಸಬಹುದು. ಲೈವ್ ಸ್ಟ್ರೀಮಿಂಗ್ ಅನ್ನು ನೀವು ಡಿಸ್ನಿ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು. ಅಲ್ಲದೆ, ಲೈವ್ ಅಪ್‌ಡೇಟ್‌ಗಳಿಗಾಗಿ ನೀವು ನಮ್ಮ ವೆಬ್‌ಸೈಟ್ News18 ಕನ್ನಡವನ್ನು ಅನುಸರಿಸಬಹುದು.


ಪಿಚ್​ ವರದಿ:


ಕಳೆದ ಮೂರು ಪಂದ್ಯಗಳಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 377 ಆಗಿದೆ. ಆದಾಗ್ಯೂ, ಸ್ಪಿನ್ನರ್‌ಗಳು ದೆಹಲಿ ಪಿಚ್​ನಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತಾರೆ. ಕಳೆದ ಮೂರು ಟೆಸ್ಟ್‌ಗಳಲ್ಲಿ 96 ವಿಕೆಟ್‌ಗಳಲ್ಲಿ 66 ವಿಕೆಟ್‌ಗಳನ್ನು ಸ್ಪಿನ್ನರ್​ಗಳು ಪಡೆದಿದ್ದಾರೆ. ಹೊಸ ಚೆಂಡಿನೊಂದಿಗೆ ವೇಗಿಗಳಿಗೆ ಸ್ವಲ್ಪ ಸಹಾಯವಾಗಲಿದೆ. ಟಾಸ್ ಗೆದ್ದ ನಾಯಕ ಇಲ್ಲಿ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಇನ್ನಿಂಗ್ಸ್​ ಸ್ಕೋರ್​ ನೋಡುವುದಾದರೆ, 1ನೇ ಇನಿಂಗ್ಸ್ ಸ್ಕೋರ್: 377 ರನ್, 2ನೇ ಇನಿಂಗ್ಸ್ ಸ್ಕೋರ್: 255 ರನ್, 3ನೇ ಇನಿಂಗ್ಸ್ ಸ್ಕೋರ್: 226 ರನ್ ಮತ್ತು 4ನೇ ಇನಿಂಗ್ಸ್ ಸ್ಕೋರ್: 200 ರನ್ ಆಗಿದೆ.


ಇದನ್ನೂ ಓದಿ: Prithvi Shaw: ಸೆಲ್ಫಿ ಕೊಡದ ಪೃಥ್ವಿ ಶಾ ಕಾರಿನ ಮೇಲೆ ಅಟ್ಯಾಕ್, ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ ಸ್ವಲ್ಪದರಲ್ಲೇ ಬಚಾವ್!


ಅಯ್ಯರ್ ಕಂಬ್ಯಾಕ್:


ಇನ್ನು, ಗಾಯದ ಸಮಸ್ಯೆಯಿಂದ ಮೊದಲ ಟೆಸ್ಟ್​ ಪಂದ್ಯದಿಂದ ಹೊರಗುಳಿದಿದ್ದ ಶ್ರೇಯಸ್​ ಅಯ್ಯರ್ ಇದೀಗ ಫಿಟ್​ ಆಗಿದ್ದು, ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಹೀಗಾಗಿ ಅವರು ನಾಳಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದು ವೇಳೆ ಅಯ್ಯರ್ ಕಣಕ್ಕಿಳಿದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇದೆ. ಆದರೆ ಶ್ರೇಯಸ್ ಅಯ್ಯರ್ ತಂಡಕ್ಕೆ ಸೇರ್ಪಡೆಗೊಂಡ ನಂತರ ಜಯದೇವ್ ಉನದ್ಕತ್ ಸೌರಾಷ್ಟ್ರಕ್ಕಾಗಿ ರಣಜಿ ಟ್ರೋಫಿ ಫೈನಲ್‌ನಲ್ಲಿ ಆಡಲು ತೆರಳಿದ್ದಾರೆ.
IND vs AUS  ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್​ 11: ರೋಹಿತ್ ಶರ್ಮಾ (C), ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್​ ಭರತ್ (WK), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.


ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್​ 11: ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ (WK), ಪೀಟರ್ ಹ್ಯಾಂಡ್ಸ್ಕಾಂಬ್/ಆಶ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್ (C), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್ ಮತ್ತು ಟಾಡ್ ಮರ್ಫಿ.

Published by:shrikrishna bhat
First published: