ದೆಹಲಿ ಮೈದಾನದಲ್ಲಿ ಟೀಂ ಇಂಡಿಯಾದ (Team India) ದಾಖಲೆಗಳು ಅತ್ಯುತ್ತಮವಾಗಿವೆ. ಆದರೆ ಆಸ್ಟ್ರೇಲಿಯ ತಂಡ ಇದೇ ಮೈದಾನದಲ್ಲಿ ಐತಿಹಾಸಿಕ ಗೆಲುವು ದಾಖಲಿಸುವ ತವಕದಲ್ಲಿದೆ. ಪ್ರವಾಸಿ ತಂಡ ದೆಹಲಿ ಟೆಸ್ಟ್‌ನಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ ಭಾರತದ (IND vs AUS) ಮೇಲೆ ಮೇಲುಗೈ ಸಾಧಿಸಿದೆ. ಪ್ರವಾಸಿ ತಂಡದ ಆ ಬೌಲರ್ ಇಂದು ಭರ್ಜರಿ ಪ್ರದರ್ಶನ ನೀಡಿದರು. ಭಾರತ ತಂಡ ಮೊದಲ ಇನ್ನಿಂಗ್ಸ್ ಅಂತ್ಯವಾಗಿದ್ದು, 262 ರನ್ಗಳಿಗೆ ಆಲೌಟ್ ಆಯಿತು. ಬಳಿಕ ದಿನದಾಟದ ಅಂತ್ಯಕ್ಕೆ 2ನೇ ಇನ್ನಿಂಗ್ಸ್ ಆರಂಭಿಸಿದ ಆಸೀಸ್ 12 ಓವರ್ನಲ್ಲಿ 61 ರನ್ಗಳಿಸಿ 1 ವಿಕೆಟ್ ಕಳೆದುಕೊಳ್ಳುವ ಮೂಲಕ 62 ರನ್ಗಳ ಮುನ್ನಡೆ ಸಾಧಿಸಿದೆ. ಭಾರತದ ಪರ ಜಡೇಜಾ (Ravindra Jadeja) 1 ವಿಕೆಟ್ ಪಡೆದಿದ್ದಾರೆ. ಆಸೀಸ್ ಪರ ಉಸ್ಮಾನ್ ಖ್ವಾಜಾ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಅಕ್ಷರ್ ಪಟೇಲ್ ಏಕಾಂಗಿ ಹೋರಾಟ:
ಇನ್ನು, 2ನೇ ಟೆಸ್ಟ್ ಪಂದ್ಯದ 2ನೇ ದಿನ ಭಾರತೀಯ ಆಟಗಾರರು ಆಸೀಸ್ ವಿರುದ್ಧ ರನ್ ಗಳಿಸಲು ಪರದಾಡಿದರು. ಆದರೆ ಅಕ್ಷರ್ ಪಟೇಲ್ ಮಾತ್ರ ಆಸೀಸ್ ವಿರುದ್ಧ ಏಕಾಂಗಿಯಾಗಿ ಹೋರಾಡಿದರು. ಅವರು 115 ಎಸೆತದಲ್ಲಿ 3 ಸಿಕ್ಸ್ ಮತ್ತು 9 ಫೋರ್ ಮೂಲಕ 74 ರನ್ ಗಳಿಸಿದರು. ಉಳದಂತೆ, ನಾಯಕ ರೋಹಿತ್ ಶರ್ಮಾ32 ರನ್, ಕೆಎಲ್ ರಾಹುಲ್ 17 ರನ್, ಚೇತೇಶ್ವರ್ ಪೂಜಾರ ಶೂನ್ಯ, ವಿರಾಟ್ ಕೊಹ್ಲಿ 44 ರನ್, ಶ್ರೇಯಸ್ ಅಯ್ಯರ್ 4 ರನ್, ರವೀಂದ್ರ ಜಡೇಜಾ 26 ರನ್, ಶಿಖರ್ ಭರತ್ 6 ರನ್, ರವಿಚಂದ್ರನ್ ಅಶ್ವಿನ್ 37 ರನ್, ಮೊಹಮ್ಮದ್ ಶಮಿ 2 ರನ್, ಮೊಹಮ್ಮದ್ ಸಿರಾಜ್ 1 ರನ್ ಗಳಿಸಿದರು.
Innings Break!#TeamIndia all out for 262 runs in the first innings of the 2nd Test.@akshar2026 (74) & @ashwinravi99 (37) with a brilliant 114 run partnership 💪
Scorecard - https://t.co/1DAFKevk9X #INDvAUS @mastercardindia pic.twitter.com/MHROqbFQ0D
— BCCI (@BCCI) February 18, 2023
ದೆಹಲಿಯಲ್ಲಿ ಆಸ್ಟ್ರೇಲಿಯಾ ಬೌಲರ್ಗಳು ಅದ್ಭುತ ಪ್ರದರ್ಶನ ನೀಡಿದರು. ಈ ಮೂಲಕ ಭಾರತ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಆಸೀಸ್ ಪರ ನಾಥನ್ ಲಿಯಾನ್ 29 ಓವರ್ ಮಾಡಿ 53 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಉಳದಂತೆ, ಟಾಡ್ ಮರ್ಫಿ 2 ವಿಕೆಟ್ ಮತ್ತು ಮ್ಯಾಥ್ಯೂ ಕುಹ್ನೆಮನ್ ಸಹ 2 ವಿಕೆಟ್ ಪಡೆದರು. ನಾಯಕ ಪ್ಯಾಟ್ ಕಮಿನ್ಸ್ 1 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: IND vs AUS: ಅಂಪೈರ್ಗಳ ತಪ್ಪು ನಿರ್ಧಾರಕ್ಕೆ ಔಟ್ ಆದ ಕೊಹ್ಲಿ, ಅಷ್ಟಕ್ಕೂ ಆಗಿದ್ದೇನು?
ಡೇವಿಡ್ ವಾರ್ನರ್ ಟೆಸ್ಟ್ ಪಂದ್ಯದಿಂದ ಔಟ್:
ಎರಡನೇ ದಿನದ ಆಟದಲ್ಲಿ ಆಸ್ಟ್ರೇಲಿಯಕ್ಕೆ ದೊಡ್ಡ ಪೆಟ್ಟು ಬಿದ್ದಿತು. ಕಾಂಗರೂ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಇನ್ನು ಮುಂದೆ ದೆಹಲಿ ಟೆಸ್ಟ್ ಪಂದ್ಯದಲ್ಲಿ ಆಡುವುದಿಲ್ಲ ಎಂದು ಆಸೀಸ್ ಮಂಡಳಿ ತಿಳಿಸಿದೆ. ಮೊದಲ ದಿನ ಮೊಹಮ್ಮದ್ ಸಿರಾಜ್ ಎಸೆತಗಳಲ್ಲಿ ವಾರ್ನರ್ ಗಾಯಗೊಂಡಿದ್ದರು. ಕನ್ಕ್ಯುಶನ್ ಕಾರಣ, ಈಗ ಅವರ ಸ್ಥಾನದಲ್ಲಿ ಮ್ಯಾಟ್ ರೆನ್ಶಾ ನೆಲಕ್ಕೆ ಬಂದಿಳಿದರು.
ಭಾರತ-ಆಸ್ಟ್ರೇಲಿಯಾ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಮ್ಯಾಟ್ ರೆನ್ಶಾ, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಪೀಟರ್ ಹ್ಯಾಂಡ್ಸ್‌ಕಾಂಬ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ