ನಾಗ್ಪುರದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ಟೀಂ ಇಂಡಿಯಾ (IND vs AUS) ದೆಹಲಿ ಟೆಸ್ಟ್‌ನಲ್ಲೂ ತನ್ನ ಹಿಡಿತವನ್ನು ಸಾಧಿಸಿದೆ. ದೆಹಲಿ ಟೆಸ್ಟ್ ನ ಮೂರನೇ ದಿನ ಕೇವಲ 3 ಎಸೆತಗಳಲ್ಲಿ ಇಡೀ ಪಂದ್ಯವೇ ಬದಲಾಯಿತು. ಈ ಮೂರು ಎಸೆತಗಳಲ್ಲಿ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಆಸ್ಟ್ರೇಲಿಯಾದ ಮೂವರು ಬ್ಯಾಟ್ಸ್ ಮನ್ ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಈ ಆಘಾತಗಳಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಆಸ್ಟ್ರೇಲಿಯಾ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು. ರವೀಂದ್ರ ಜಡೇಜಾ (Ravindra Jadeja) 7 ವಿಕೆಟ್ ಕಬಳಿಸಿದರೆ ಆರ್ ಅಶ್ವಿನ್ 3 ವಿಕೆಟ್ ಪಡೆದುಮಿಂಚಿದರು. ಈ ಮೂಲಕ ಆಸೀಸ್ ಭಾರತಕ್ಕೆ ಗೆಲುವಿಗೆ 115 ರನ್‌ಗಳ ಗುರಿ ನೀಡಿದೆ.
ಮತ್ತೆ ಮಿಂಚು ಹರಿಸಿದ ಜಡ್ಡು:
ಭಾರತ ಮತ್ತು ಆಸೀಸ್ ನಡುವಿನ 2ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ಆರಂಭದಲ್ಲಿಯೇ ಟೀಂ ಇಂಡಿಯಾ ಭರ್ಜರಿ ಬೌಲಿಂಗ್ ಮಾಡುವ ಮೂಲಕ ಆಸ್ಟ್ರೇಲಿಯಾವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿತು. ಭಾರತದ ಪರ ಇಂದು ಮತ್ತೆ ರವೀಂದ್ರ ಜಡೇಜಾ ಭರ್ಜರಿ ಬೌಲಿಂಗ್ ಮಾಡಿದ್ದಾರೆ. ಅವರು 12.1 ಓವರ್ ಮಾಡಿ 42 ರನ್ ನೀಡಿ ಬರೋಬ್ಬರಿ 7 ವಿಕೆಟ್ ಪಡೆದು ಮಿಂಚಿದರು. ಅಶ್ವಿನ್ ಸಹ 3 ವಿಕೆಟ್ ಕಬಳಿಸಿದರು.
Innings Break!
It was a @imjadeja show here in Delhi as he picks up seven wickets in the morning session.
Australia are all out for 113 runs. #TeamIndia need 115 runs to win the 2nd Test.
Scorecard - https://t.co/1DAFKevk9X #INDvAUS @mastercardindia pic.twitter.com/0h9s37RA85
— BCCI (@BCCI) February 19, 2023
ಇನ್ನು, ಭಾರತದ ದಾಳಿಗೆ ಆಸ್ಟ್ರೇಲಿಯಾ ಫೆವೆಲಿಯನ್ ಪೆರೇಡ್ ನಡೆಸಿತು. ಆಸೀಸ್ ಕೇವಲ 113 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ, ಉಸ್ಮಾನ್ ಖ್ವಾಜಾ 6 ರನ್, ಮಾರ್ನಸ್ ಲಾಬುಶೇನ್ 35 ರನ್, ಸ್ಟೀವ್ ಸ್ಮಿತ್ 9 ರನ್, ಮ್ಯಾಟ್ ರೆನ್ಶಾ 2 ರನ್, ಟ್ರಾವಿಸ್ ಹೆಡ್ 43 ರನ್, ಪೀಟರ್ ಹ್ಯಾಂಡ್ಸ್‌ಕಾಂಬ್ ಶೂನ್ಯ, ಅಲೆಕ್ಸ್ ಕ್ಯಾರಿ 7 ರನ್, ಪ್ಯಾಟ್ ಕಮಿನ್ಸ್ ಶೂನ್ಯ, ನಾಥನ್ ಲಿಯಾನ್ 8 ರನ್, ಟಾಡ್ ಮರ್ಫಿ 3 ರನ್, ಮ್ಯಾಥ್ಯೂ ಕುಹ್ನೆಮನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: IND vs PAK: ಟೀಂ ಇಂಡಿಯಾ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!
ಇಂದೇ ಭಾರತಕ್ಕೆ ಗೆಲುವು:
ಇನ್ನು, ಕೇವಲ 115 ರನ್‌ಗಳ ಟಾರ್ಗೆಟ್ ಇರುವುದರಿಂದ ಭಾರತ ತಂಡ ಇಂದೇ ಪಂದ್ಯವನ್ನು ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಹೀಗಾದ್ದಲ್ಲಿ ಭಾರತ ತಂಡ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 2-0 ಮುನ್ನಡೆ ಸಾಧಿಸಲಿದೆ. ಈ ಮೂಲಕ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಇನ್ನಷ್ಟು ಹತ್ತಿರವಾಗಲಿದೆ.
ಭಾರತ-ಆಸ್ಟ್ರೇಲಿಯಾ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಮ್ಯಾಟ್ ರೆನ್ಶಾ, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಪೀಟರ್ ಹ್ಯಾಂಡ್ಸ್‌ಕಾಂಬ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ