IND vs AUS: ಟಾಸ್​ ಗೆದ್ದ ಭಾರತ, ಓವರ್​ಗಳಲ್ಲಿ ಕಡಿತ; ಟೀಂ ಇಂಡಿಯಾ ಪ್ಲೇಯಿಂಗ್​ 11ನಲ್ಲಿ ಬದಲಾವಣೆ

IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯ ಇಂದು ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್​ ಗೆದ್ದ ಭಾರತ ಇದೀಗ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

IND vs AUS

IND vs AUS

  • Share this:
ಭಾರತ ಮತ್ತು ಆಸ್ಟ್ರೇಲಿಯಾ  (IND v AUS) ನಡುವಿನ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯ ಇಂದು ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ (Vidarbha Cricket Association Stadium) ನಡೆಯುತ್ತಿದೆ. ಆದರೆ ಮಳೆಯ ಕಾರಣ ಮೈದಾನ ಹೆಚ್ಚಿನ ತೇವಾಂಶ ಇದ್ದ ಕಾರಣ ಪಂದ್ಯವನ್ನು ಸಾಕಷ್ಟು ಸಮಯ ಮುಂದೂಡಲ್ಪಟ್ಟಿತ್ತು. ಪಂದ್ಯವು ನಿಗದಿಯಂತೆ 7 ಗಂಟಗೆ ಆರಂಭವಾಗುವ ಬದಲಾಗಿ ಇದೀಗ 9:30ಕ್ಕೆ ಆರಂಭವಾಗುತ್ತಿದೆ. ಈಗಾಗಲೇ ಟಾಸ್​ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ( Rohith Sharma) ಮೊದಲು ಬೌಲಿಂಗ್​ ಆಯ್ದುಕೊಂಡಿದ್ದು, ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆರಂಭಿಸಲಿದೆ.

8 ಓವರ್​ಗಳ ಪಂದ್ಯ:

ಇನ್ನು, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಇಂದಿನ 2ನೇ ಟಿ20 ಪಂದ್ಯವು ವಿಳಂಬ ಆದ ಕಾರಣ 20 ಓವರ್​ಗಳ ಬದಲಾಗಿ ಕೇವಲ 8 ಓವರ್​ಗಳಿಗೆ ಸೀಮಿತಗೊಳಿಸಲಾಗಿದೆ. ಇದರಿಮದಾಗಿ ಉಭಯ ತಂಡಗಳು ತಲಾ 8 ಓವರ್​ಗಳು ದೊರಕಲಿದೆ. ಅಲ್ಲದೇ ಕೇವಲ 2 ಓವರ್​ ಪವರ್ ಪ್ಲೇ ಮತ್ತು ಪ್ರತಿ ಬೌಲರ್​ಗೆ ಕೇವಲ 2 ಓವರ್​ ನೀಡಬಹುದಾಗಿದೆ. ಅಲ್ಲದೇ ಆಟಗಾರರಿಗೆ ಡ್ರಿಂಕ್ಸ್ ಬ್ರೇಕ್​ ಸಹ ಇರುವುದಿಲ್ಲ.

ಬುಮ್ರಾ ಇನ್​ ಭುವಿ ಔಟ್​:

ಇನ್ನು, ಅನೇಕದ ಇನಗಳ ಬಳಿಕ ಇದೀಗ ಬುಮ್ರಾ ಭಾರತದ ಪರ ಕಣಕ್ಕಿಳಿಯುತ್ತಿದ್ದಾರೆ. ಆದರೆ ಅವರ ಬದಲಾಗಿ ಇದೀಗ ಭುವನೇಶ್ವರ್​ ಕುಮಾರ್ ಅವರನ್ನು ಇಂದಿನ ಪಂದ್ಯದಿಂದ ಕೈ ಬಿಡಲಾಗಿದೆ. ಅಲ್ಲದೇ ರಿಷಭ್ ಪಂತ್​ ಸಹ ತಂಡದ ಪ್ಲೇಯಿಂಗ್​ 11ನಲ್ಲಿ ಸ್ಥಾನ ಪಡೆದುಕೊಂಡಿದ್ದು, ಅಚ್ಚರಿ ಮೂಡಿಸಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ರೋಚಕವಾಗಿಲಿದ್ದು, 8 ಓವರ್​ಗಳ ಪಂದ್ಯವಾಗಿರುವುದರಿಂದ ಆರಂಭಿಕರಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ: Virat Kohli: ಕೊಹ್ಲಿ ದಾಖಲೆ ಮುರಿದ ಬಾಬರ್ ಅಜಮ್, ರಾಹುಲ್​ ಹಿಂದಿಕ್ಕಿದ ರಿಜ್ವಾನ್

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ:

ಇನ್ನು, ಭಾರತ ತಂಡಕ್ಕೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಇಂದಿನ ಪಂದ್ಯ ಗೆದ್ದಲ್ಲಿ ಮಾತ್ರ ಟೀಂ ಇಂಡಿಯಾ ಸರಣಿ ಜೀವಂತವಾಗಿರಲಿದೆ. ಈಗಾಗಲೇ ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯ ದಾಖಲಿಸಿತ್ತು. ಮೊಹಾಲಿಯಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಭಾರತ 208 ರನ್​ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಆದರೂ ಈ ಮೊತ್ತವನ್ನು ಡಿಫೆಂಡ್​ ಮಾಡಿಕೊಳ್ಳುವಲ್ಲಿ ಭಾರತದ ಬೌಲರ್ ಗಳಿಗೆ ಸಾಧ್ಯವಾಗದ ಕಾರಣ ಆಸ್ಟ್ರೇಲಿಯಾ 4 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಇದರಿಂದಾಗಿ ಸರಣಿಯಲ್ಲಿ ಆಸೀಸ್​ ಈಗಾಗಲೇ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: IPL 2023: ಈ ವರ್ಷವೇ ನಡೆಯುತ್ತಾ ಐಪಿಎಲ್​ ಆಟಗಾರರ ಹರಾಜು? RCB ಗೆ ಬರ್ತಾರಾ CSKಕೀ ಪ್ಲೇಯರ್​?

IND vs AUS ಪ್ಲೇಯಿಂಗ್​ 11:

ಭಾರತ ತಂಡ:  ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ ತಂಡ: ಆರನ್ ಫಿಂಚ್, ಕ್ಯಾಮೆರಾನ್ ಗ್ರೀನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಡೇನಿಯಲ್​ ಸ್ಯಾಮ್ಸ್, ಪ್ಯಾಟ್ ಕಮಿನ್ಸ್, ಸೀನ್ ಅಬಾಟ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.

 
Published by:shrikrishna bhat
First published: