ಅನುಭವಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ದಾಳಿಗೆ ಇಂದು ಭಾರತದ ಬ್ಯಾಟ್ಸ್ಮನ್ಗಳು ಫೇವೆಲಿಯನ್ ಪರೇಡ್ ನಡೆಸಿದರು. ವಿಶಾಖಪಟ್ಟಣದಲ್ಲಿ (YS Raja Reddy Cricket Stadium) ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ (IND vs AUS ODI) ಕೇವಲ 26 ಓವರ್ಗೆ 10 ವಿಕೆಟ್ ಕಳೆದುಕೊಂಡು ಕೇವಲ 117 ರನ್ ಗಳಿಸುವ ಮೂಲಕ ಪ್ರವಾಸಿ ಆಸ್ಟ್ರೇಲಿಯಾಗೆ 118 ರನ್ಗಳ ಸಣ್ಣ ಟಾರ್ಗೆಟ್ ನೀಡಿದೆ. ಸ್ಟಾರ್ಕ್ (Mitchell Starc) ಭಾರತದ 5 ವಿಕೆಟ್‌ಗಳನ್ನು ತೆಗೆಯುವ ಮೂಲಕ ವಿಶಾಖಪಟ್ಟಣಂನಲ್ಲಿ ಮಿಂಚಿದರು.
ಟೀಂ ಇಂಡಿಯಾ ಪೆವಿಲಿಯನ್ ಪರೇಡ್:
ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ದಾಳಿಗೆ ಅಕ್ಷರಶಃ ತತ್ತರಿಸಿ ಹೋಯಿತು. ಭಾರತ ಕೇವಲ 26 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಳ್ಳುವ ಮೂಲಕ 118 ರನ್ ಟಾರ್ಗೆಟ್ ನೀಡಿದೆ. ಭಾರತದ ಪರ ನಾಯಕ ರೋಹಿತ್ ಶರ್ಮಾ 13 ರನ್, ವಿರಾಟ್ ಕೊಹ್ಲಿ 31 ರನ್, ಸೂರ್ಯಕುಮಾರ್ ಯಾದವ್ ಮತ್ತು ಶುಭ್ಮನ್ ಗಿಲ್ ಶೂನ್ಯ, ಕೆಎಲ್ ರಾಹುಲ್ 9 ರನ್, ಹಾರ್ದಿಕ್ ಪಾಂಡ್ಯ 1 ರನ್, ರವೀಂದ್ರ ಜಡೇಜಾ 16 ರನ್, ಅಕ್ಷರ್ ಪಟೇಲ್ 29 ರನ್, ಕುಲ್ದೀಪ್ ಯಾದವ್ 4 ರನ್, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಇಬ್ಬರೂ ಶೂನ್ಯಕ್ಕೆ ಔಟ್ ಆಗುವ ಮೂಲಕ ತಂಡ ಅಲ್ಪಮೊತ್ತಕ್ಕೆ ಕುಸಿಯಿತು.
What a bowling performance from Australia! ✨
India are all out for 117! #INDvAUS | 📝 Scorecard: https://t.co/5ISBBNMhiZ pic.twitter.com/bfWB2MMDQE
— ICC (@ICC) March 19, 2023
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿ ಆಸ್ಟ್ರೇಲಿಯಾ ನಾಯಕ ಸ್ಮಿತ್ ಸರಿಯಾದ ನಿರ್ಧಾರ ತೆಗೆದುಕೊಂಡರು. ಭಾರತದ ವಿರುದ್ಧ ಆಸೀಸ್ ಭರ್ಜರಿ ಬೌಲಿಂಗ್ ದಾಳಿ ನಡೆಸಿತು. ಆಸೀಸ್ ಪರ ಮಿಚೆಲ್ ಸ್ಟಾರ್ಕ್ 8 ಓವರ್ ಬಾಲ್ ಮಾಡಿ 53 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಉಳಿಂದತೆ ಸೀನ್ ಅಬಾಟ್ 3 ವಿಕೆಟ್ ಮತ್ತು ನಾಥನ್ ಎಲಿಸ್ 2 ವಿಕೆಟ್ ಪಡೆದು ಭಾರತದ ಕುಸಿತಕ್ಕೆ ಕಾರಣರಾದರು.
ಇದನ್ನೂ ಓದಿ: Suryakumar Yadav: 'ಮಿ 360' ಬ್ಯಾಕ್ ಟು ಬ್ಯಾಕ್ ಫ್ಲಾಪ್; ಏಕದಿನ ವಿಶ್ವಕಪ್ನಿಂದ SKY ಔಟ್?
ಟೀಂ ಇಂಡಿಯಾಗೆ ವಿಲ್ ಆದ ಮಳೆ:
ವೇಗದ ಬೌಲರ್‌ಗಳಿಗೆ ಅನುಕೂಲಕರವಾದ ಪಿಚ್ನಲ್ಲಿ ಆಸೀಸ್ ವೇಗಿಗಳು ಸಂಪೂರ್ಣ ಲಾಭ ಪಡೆದರು. ಈ ಹಿಂದೆ ವಿಶಾಖಪಟ್ಟಣಂನಲ್ಲಿ ಸಾಕಷ್ಟು ಮಳೆಯಾಗಿತ್ತು. ಇದರಿಂದಾಗಿ ಕವರ್‌ಗಳು ಮುಚ್ಚಿಹೋಗಿದ್ದವು. ಪಿಚ್ ಒಣಗಲು ಸಮಯ ಸಿಗಲಿಲ್ಲ. ಅದೇನೆಂದರೆ, ಪಿಚ್ ನಲ್ಲಿ ತೇವಾಂಶವಿದ್ದು, ಆಸ್ಟ್ರೇಲಿಯಾದ ವೇಗಿಗಳು ಅದರ ಸಂಪೂರ್ಣ ಲಾಭ ಪಡೆದರು. ಇದರಿಂದಾಗಿ ಬಾಲ್ ಸಾಕಷ್ಟು ಸ್ವಿಂಗ್ ಆಗುತ್ತಿತ್ತು. ಇದು ಭಾರತದ ವಿಕೆಟ್ ಪತನಕ್ಕೆ ಪ್ರಮುಖ ಕಾರಣವಾಯಿತು.
ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ಶುಭ್ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಲೋಕೇಶ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಮಿ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೊಯಿನಿಸ್, ನಾಥನ್ ಎಲಿಸ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ