• Home
  • »
  • News
  • »
  • sports
  • »
  • IND vs AUS Test: ಆಸೀಸ್​ ಸರಣಿಗೂ ಮುನ್ನ ಬಿಸಿಸಿಐ ಮಹತ್ವದ ನಿರ್ಧಾರ, ಈ ಇಬ್ಬರು ಆಟಗಾರರ ಮೇಲೆ ಹೆಚ್ಚಿದ ನಿರೀಕ್ಷೆ

IND vs AUS Test: ಆಸೀಸ್​ ಸರಣಿಗೂ ಮುನ್ನ ಬಿಸಿಸಿಐ ಮಹತ್ವದ ನಿರ್ಧಾರ, ಈ ಇಬ್ಬರು ಆಟಗಾರರ ಮೇಲೆ ಹೆಚ್ಚಿದ ನಿರೀಕ್ಷೆ

IND vs AUS Test

IND vs AUS Test

IND vs AUS Test: ಬಾರ್ಡರ್ ಗವಾಸ್ಕರ್ ಸರಣಿಯ ತಯಾರಿಗಾಗಿ ಟೀಂ ಇಂಡಿಯಾ ಸಂಪೂರ್ಣ ಸಿದ್ಧವಾಗಿದೆ ಮತ್ತು ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡುವ ಮೂಲಕ ತಂಡಕ್ಕೆ ಕಂಬ್ಯಾಕ್​ ಮಾಡಲು ಸಹಾಯವಾಗುವ ವಾತಾವರಣವನ್ನು ಬಿಸಿಸಿಐ ಸೃಷ್ಟಿಸಿದೆ.

  • Share this:

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ನಂತರ ಭಾರತ ಕ್ರಿಕೆಟ್ ತಂಡವು (Team India) ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. ತವರಿನಲ್ಲಿ ನಡೆಯಲಿರುವ ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC) ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಬಾರ್ಡರ್ ಗವಾಸ್ಕರ್ (Border–Gavaskar Trophy) ಸರಣಿಯ ತಯಾರಿಗೆ ಟೀಂ ಇಂಡಿಯಾ ಸಂಪೂರ್ಣ ಸಿದ್ಧತೆ ನಡೆಸಿದ್ದು, ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡುವ ಮೂಲಕ ಹೊಸ ಪ್ರತಿಭೆಗಳಿಗೆ ಮಣೆ ಹಾಕಿದೆ. ಈ ಸರಣಿಯಲ್ಲಿ ಚೇತೇಶ್ವರ ಪೂಜಾರ (Cheteshwar Pujara) ಮತ್ತು ಜಯದೇವ್ ಉನದ್ಕತ್ ಪ್ರಮುಖ ಪಾತ್ರ ವಹಿಸಬಹುದಾಗಿದ್ದು, ಇವರಿಬ್ಬರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇದಲ್ಲದೇ ಈ ಬಾರಿ ಇವರಿಬ್ಬರ ಜೊತೆಗೆ ಜಡೇಜಾ (Ravindra Jadeja) ಸಹ ಕಂಬ್ಯಾಕ್​ ಮಾಡುತ್ತಿದ್ದು, ಇವರಿಗಳು ಆಸೀಸ್​ ಸರಣಿಗೂ ಮುನ್ನ ರಣಜಿ ಪಂದ್ಯವನ್ನು ಆಡಬೇಕಿದೆ. ಹೀಗಾಗಿ ಈಗಾಗಳೇ ಇವರುಗಳು ರಣಜಿಯಲ್ಲಿ ಬರವರು ಹರಿಸುತ್ತಿದ್ದಾರೆ.


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸಲು ಭಾರತಕ್ಕೆ ಉತ್ತಮ ಅವಕಾಶವಿದೆ. ತವರಿನಲ್ಲಿ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದೊಂದಿಗೆ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಸ್ಪರ್ಧಿಸಲು ತಂಡ ಸಿದ್ಧವಾಗಿದೆ. 4 ಪಂದ್ಯಗಳ ಟೆಸ್ಟ್ ಸರಣಿಗೆ ಬಲಿಷ್ಠ ತಂಡವನ್ನು ಆಯ್ಕೆಗಾರರು ಆಯ್ಕೆ ಮಾಡಿದ್ದು, ಈ ಸರಣಿಯಲ್ಲಿ ಕನಿಷ್ಠ 2-0 ಅಂತರದಿಂದ ಗೆದ್ದಲ್ಲಿ ಭಾರತ ನೇರವಾಗಿ WTC ಫೈನಲ್​ಗೆ ಪ್ರವೇಶಿಸಲಿದೆ.


ರಣಜಿಯಲ್ಲಿ ಪೂಜಾರ - ಉನದ್ಕತ್:


ರಣಜಿ ಟ್ರೋಫಿಯಲ್ಲಿ ಆಡುತ್ತಿರುವ ಚೇತೇಶ್ವರ ಪೂಜಾರ ಮತ್ತು ಜಯದೇವ್ ಉನದ್ಕತ್ ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ವಿಶ್ರಾಂತಿ ನೀಡಲಾಗಿದೆ. ಈ ಇಬ್ಬರೂ ಆಟಗಾರರನ್ನು ಸೌರಾಷ್ಟ್ರ ತಂಡದ ಆಡುವ XI ನಿಂದ ಕಣಕ್ಕಿಳಿಯುತ್ತಿದ್ದರು, ವೇಗದ ಬೌಲರ್ ಉನದ್ಕತ್ ಸೌರಾಷ್ಟ್ರ ರಣಜಿ ತಂಡದ ನಾಯಕರಾಗಿದ್ದರೆ, ಪೂಜಾರ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ನಿಭಾಯಿಸುತ್ತಿದ್ದರು. ಆದರೆ, ಇದೀಗ ಇವರಿಬ್ಬರಿಗೂ ವಿರ್ಶರಾಂತಿ ನೀಡಿದ್ದು, ಸೌರಾಷ್ಟ್ರ ತಂಡದ ನಾಯಕತ್ವದ ಜವಾಬ್ದಾರಿಯನ್ನು ರವೀಂದ್ರ ಜಡೇಜಾಗೆ ನೀಡಲಾಗಿದೆ.


ಇದನ್ನೂ ಓದಿ: Rohit Sharma: ರೋಹಿತ್ ಶರ್ಮಾ ಶತಕಕ್ಕೆ ದಾಖಲೆಗಳೆಲ್ಲಾ ಧೂಳಿಪಟ, ಹೊಸ ಇತಿಹಾಸ ನಿರ್ಮಿಸಿದ ಹಿಟ್​ಮ್ಯಾನ್


ಜಡೇಜಾ ತಂಡಕ್ಕೆ ಕಂಬ್ಯಾಕ್​:


ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡದಿಂದ ಹೊರಗುಳಿದಿದ್ದಾರೆ. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡ ಗಾಯದ ನಂತರ ಈ ಸರಣಿಯಿಂದ ವಾಪಸಾಗುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ಟಿ20 ವಿಶ್ವಕಪ್‌ಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗಷ್ಟೇ ತವರಿನಲ್ಲಿ ನಡೆದ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ತಂಡ 2-0 ಅಂತರದಿಂದ ವಶಪಡಿಸಿಕೊಂಡಿದೆ. ಇನ್ನೊಂದೆಡೆ ತವರಿನಲ್ಲಿ ಭಾರತ ತಂಡದ ದಾಖಲೆ ಉತ್ತಮವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರಣಿ ಕುತೂಹಲ ಮೂಡಿಸುವ ಸಾಧ್ಯತೆ ಇದೆ. ಟೆಸ್ಟ್‌ನಲ್ಲಿ ಅಶ್ವಿನ್ ಅವರ ದಾಖಲೆ ಅತ್ಯುತ್ತಮವಾಗಿದೆ.
WTC ರೇಸ್​ನಲ್ಲಿ ಭಾರತ:


ಆಸ್ಟ್ರೇಲಿಯಾ ತಂಡದ ದಾಖಲೆ ಭಾರತದಲ್ಲಿ ವಿಶೇಷವಾಗಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಟೇಬಲ್ ಬಗ್ಗೆ ಮಾತನಾಡುತ್ತಾ, ಕಾಂಗರೂ ತಂಡ ಪ್ರಸ್ತುತ ನಂಬರ್ ಒನ್ ಸ್ಥಾನದಲ್ಲಿದೆ. ಮತ್ತೊಂದೆಡೆ ಟೀಂ ಇಂಡಿಯಾ ಎರಡನೇ ಸ್ಥಾನದಲ್ಲಿದೆ. ಜೂನ್‌ನಲ್ಲಿ ಇಬ್ಬರ ನಡುವೆ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇದೆ. ಇದು ಚಾಂಪಿಯನ್‌ಶಿಪ್‌ನ ಎರಡನೇ ಋತುವಾಗಿದೆ. ಮೊದಲ ಸೀಸನ್ ನಲ್ಲೂ ಭಾರತ ತಂಡ ಪ್ರಶಸ್ತಿ ಸುತ್ತು ತಲುಪಿದ್ದರೂ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿತ್ತು.


ಆಸೀಸ್​ ವಿರುದ್ಧದ 2 ಟೆಸ್ಟ್‌ಗೆ ಭಾರತ ತಂಡ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (WK), ಇಶಾನ್ ಕಿಶನ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.

Published by:shrikrishna bhat
First published: