ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ (Border-Gavaskar Trophy) ಫೆಬ್ರವರಿ 9 ರಿಂದ ಪ್ರಾರಂಭವಾಗಲಿದೆ. ಇದು 4 ಪಂದ್ಯಗಳ ಟೆಸ್ಟ್ ಸರಣಿಯಾಗಿರಲಿದ್ದು, ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ ಟೆಸ್ಟ್ ಸರಣಿಗೆ ಬಾರ್ಡರ್ ಗವಾಸ್ಕರ್ ಟ್ರೋಫಿ ಎಂದು ಏಕೆ ಹೆಸರಿಸಲಾಗಿದೆ? ಈ ಟ್ರೋಫಿಯನ್ನು ಯಾವಾಗಿನಿಂದ ನೀಡಲಾಗುತ್ತದೆ? ಈ ಸರಣಿಯ ಬಗ್ಗೆ ಅನೇಕ ಜನರು ಈ ರೀತಿಯ ಪ್ರಶ್ನೆಗಳನ್ನು ಹೊಂದಿರುತ್ತಾರೆ. ಇಂತಹ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಬಾರ್ಡರ್ ಗವಾಸ್ಕರ್ ಸರಣಿಯ ಸಂಪೂರ್ಣ ಇತಿಹಾಸ ಹಾಗೂ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಬಲಾಬಲ ನೋಡಿ.
ಬಾರ್ಡರ್-ಗವಾಸ್ಕರ್ ಟ್ರೋಫಿ ಇತಿಹಾಸ:
ಭಾರತ ಕ್ರಿಕೆಟ್ ತಂಡವು 1947 ಮತ್ತು 1992ರ ನಡುವೆ ಆಸ್ಟ್ರೇಲಿಯಾ ವಿರುದ್ಧ 50 ಟೆಸ್ಟ್ ಪಂದ್ಯಗಳನ್ನು ಆಡಿದೆ. 1996ರಲ್ಲಿ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾವು ಭಾರತದ ದಂತಕಥೆ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಮತ್ತು ಆಸ್ಟ್ರೇಲಿಯಾದ ಲೆಜೆಂಡರಿ ಬ್ಯಾಟ್ಸ್‌ಮನ್ ಅಲನ್ ಬಾರ್ಡರ್ ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಗೌರವಿಸಲು ನಿರ್ಧರಿಸಿತು. ಅದರ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಎಂದು ಹೆಸರಿಸಲಾಯಿತು.
ಆ ವೇಳೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ ಸುನಿಲ್ ಗವಾಸ್ಕರ್ 10,000 ರನ್ ಹಾಗೂ ಆಸ್ಟ್ರೇಲಿಯಾ ಪರ ಅಲನ್ ಬಾರ್ಡರ್ 10,000 ರನ್ ಗಳಿಸಿದ್ದರು. ಇಬ್ಬರೂ ತಮ್ಮ ತಮ್ಮ ದೇಶಗಳ ಪರ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗರಾಗಿದ್ದರು. ಬಹಳ ಕಾಲ ಈ ದಾಖಲೆ ಇಬ್ಬರ ಹೆಸರಲ್ಲಿತ್ತು. ಬಾರ್ಡರ್ - ಗವಾಸ್ಕರ್ ಟ್ರೋಫಿಯಲ್ಲಿ ಸರಣಿ ಸಮವಾಗಿದ್ದರೆ, ಹಿಂದಿನ ವಿಜೇತರ ಬಳಿ ಟ್ರೋಫಿ ಉಳಿಯುತ್ತದೆ.
ಇದನ್ನೂ ಓದಿ: Rohit Sharma: ಟೆಸ್ಟ್ ನಾಯಕತ್ವವನ್ನೂ ಕಳೆದುಕೊಳ್ತಾರಾ ರೋಹಿತ್? ಮಹತ್ವದ ನಿರ್ಧಾರಕ್ಕೆ ಮುಂದಾದ ಬಿಸಿಸಿಐ!
BGT ಅಲ್ಲಿ ಉಭಯ ತಂಡಗಳ ಬಲಾಬಲ:
ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಮೊದಲ ಬಾರಿಗೆ 1996ರಲ್ಲಿ ಆಯೋಜಿಸಲಾಯಿತು. ಆಗ ಒಂದೇ ಒಂದು ಟೆಸ್ಟ್ ಸರಣಿ ಇತ್ತು. ಆ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು. ಬಾರ್ಡರ್-ಗವಾಸ್ಕರ್ ಟ್ರೋಫಿ ಅಡಿಯಲ್ಲಿ ಇದುವರೆಗೆ 15 ಸರಣಿಗಳನ್ನು ಎರಡೂ ದೇಶಗಳು ಆಡಿವೆ. ಇದನ್ನು ಭಾರತದಲ್ಲಿ 8 ಬಾರಿ ಮತ್ತು ಆಸ್ಟ್ರೇಲಿಯಾದಲ್ಲಿ 7 ಬಾರಿ ಆಯೋಜಿಸಲಾಗಿದೆ.
ಭಾರತ 9 ಬಾರಿ ಸರಣಿ ಗೆದ್ದರೆ, ಆಸ್ಟ್ರೇಲಿಯಾ 5 ಬಾರಿ ಗೆದ್ದಿದೆ. 2004-04ರಲ್ಲಿ ಒಂದೇ ಒಂದು ಸರಣಿ ಟೈ ಆಗಿತ್ತು. ಇಲ್ಲಿಯವರೆಗೆ 52 ಟೆಸ್ಟ್‌ಗಳಲ್ಲಿ ಭಾರತ 22 ಪಂದ್ಯಗಳನ್ನು ಗೆದ್ದಿದೆ ಮತ್ತು ಆಸ್ಟ್ರೇಲಿಯಾ 19 ಪಂದ್ಯಗಳನ್ನು ಗೆದ್ದಿದೆ. ಉಳಿದ 11 ಪಂದ್ಯಗಳು ಡ್ರಾ ಆಗಿವೆ. 2004-05ರಲ್ಲಿ ಆಸ್ಟ್ರೇಲಿಯಾ ಕೊನೆಯ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. 2012 ರಿಂದ ಭಾರತದಲ್ಲಿ ಟೆಸ್ಟ್ ಗೆದ್ದ ಏಕೈಕ ಪ್ರವಾಸಿ ತಂಡ ಆಸ್ಟ್ರೇಲಿಯಾ. ಪುಣೆಯಲ್ಲಿ ನಡೆದ 2016-17ರ ಸರಣಿಯ ಮೊದಲ ಪಂದ್ಯದಲ್ಲಿ ಭಾರತವನ್ನು 333 ರನ್‌ಗಳಿಂದ ಸೋಲಿಸಿತ್ತು.
2023 ಸರಣಿಯ ಉಭಯ ತಂಡಗಳು:
ಭಾರತ ತಂಡ (2 ಟೆಸ್ಟ್ಗಳಿಗೆ): ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ , ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ , ಪೀಟರ್ ಹ್ಯಾಂಡ್ಸ್‌ಕಾಂಬ್ , ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್ , ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾಮಿ , ಸ್ಟೀವ್ ಸ್ಮಿತ್, ಮಿಚೆಲ್ ಸ್ವೆಪ್ಸನ್, ಡೇವಿಡ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ