ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ 4 ಪಂದ್ಯಗಳ ಸರಣಿಯ ಮೂರನೇ ಟೆಸ್ಟ್ ಪಂದ್ಯ ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ (Holkar Stadium) ನಡೆಯಿತು. ಈ ಟೆಸ್ಟ್ ಪಂದ್ಯದ ಮೂರನೇ ದಿನದಲ್ಲಿ ಆಸೀಸ್ ಭಾರತದ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಭಾರತ ನೀಡಿದ 77 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಆಸೀಸ್ 1 ವಿಕೆಟ್ ನಷ್ಟಕ್ಕೆ 78 ರನ್ ಗಳಿಸುವ ಮೂಲಕ ಬರ್ಜರಿ 9 ವಿಕೆಟ್ಗಳ ಜಯ ದಾಖಲಿಸಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಗೆಲುವನ್ನು ದಾಖಲಿಸಿದೆ. ಈ ಮೂಲಕ ಸರಣಿಯು 2-1ರಿಂದ ಕೂಡಿದ್ದು, ಮುಂದಿನ ಅಂತಿಮ ಪಂದ್ಯ ಭಾರತ ತಂಡಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಅಲ್ಲದೇ ಈ ಸೋಲಿನಿಂದಾಗಿ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC 2023) ಹಾದಿ ಇನ್ನಷ್ಟು ಕಠಿಣವಾಗಿದೆ.
ಸರಣಿಯಲ್ಲಿ ಆಸೀಸ್ಗೆ ಮೊದಲ ಗೆಲುವು:
ಇನ್ನು, ಭಾರತ ನೀಡಿದ 77 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 3ನೇ ದಿನದ ಆರಂಭದಲ್ಲಿಯೇ ಭರ್ಜರಿ ಜಯ ದಾಖಲಿಸಿದೆ. ದಿನದಾಟದ ಆರಂಭದಲ್ಲಿಯೇ ಆಸೀಸ್ ಕೇವಲ 1 ವಿಕೆಟ್ ನಷ್ಟಕ್ಕೆ 78 ರನ್ ಗಳಿಸುವ ಮೂಲಕ ಸರಣಿಯಲ್ಲಿ ಮೊದಲ ಜಯ ದಾಖಲಿಸಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ. ಆಸೀಸ್ ವಿರುದ್ಧ ಉಸ್ಮಾನ್ ಖವಾಜಾ ಅವರನ್ನು ಅಶ್ವಿನ್ ಶೂನ್ಯಕ್ಕೆ ಔಟ್ ಮಾಡುವ ಮೂಲಕ ಕೊಂಚ ಗೆಲುವಿನ ಆಸೆ ಚಿಗುರಿದರೂ ಬಳಿಕ ಟ್ರಾವಿಸ್ ಹೆಡ್ 49 ರನ್ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ 28 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
Australia win the Third Test by 9 wickets. #TeamIndia 🇮🇳 will aim to bounce back in the fourth and final #INDvAUS Test at the Narendra Modi Stadium in Ahmedabad 👍🏻👍🏻
Scorecard ▶️ https://t.co/t0IGbs2qyj @mastercardindia pic.twitter.com/M7acVTo7ch
— BCCI (@BCCI) March 3, 2023
ಇನ್ನು, ಇಂದೋರ್ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಬೌಲರ್ಗಳು ಅಬ್ಬರಿಸಿದ್ದಾರೆ. ಈ ಟೆಸ್ಟ್ನಲ್ಲಿ ಎರಡೂ ತಂಡಗಳು 200 ರನ್ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ ಆಸೀಸ್ ವಿರುದ್ಧ ಮ್ಯಾಥ್ಯೂ ಕುನ್ಹೆಮನ್ 5 ವಿಕೆಟ್ ಮತ್ತು ನಾಥನ್ ಲಿಯಾನ್ 3 ಹಾಗೂ ಟಾಡ್ ಮರ್ಫಿ 1 ವಿಕೆಟ್ ಪಡೆದರು. ಅದರಂತೆ ಭಾರತದ ಬೌಲರ್ಗಳೂ ಸಹ ಮೊದಲ ಇನ್ನಿಂಗ್ಸ್ನಲ್ಲಿ ರವೀಂದ್ರ ಜಡೇಜಾ 4 ವಿಕೆಟ್ ಪಡೆದರೆ, ಅಶ್ವಿನ್ ಮತ್ತು ಉಮೇಶ್ ಯಾದವ್ ತಲಾ 3 ವಿಕೆಟ್ ಪಡೆದರು.
ಇದನ್ನೂ ಓದಿ: Jasprit Bumrah: ಶಸ್ತ್ರಚಿಕಿತ್ಸೆಗಾಗಿ 12 ಸಾವಿರ ಕಿಲೋ ಮೀಟರ್ ಪ್ರಯಾಣ, ಟೀಂ ಇಂಡಿಯಾ ಆಟಗಾರನಿಗೆ ಏನಾಯ್ತು?
ಬಳಿಕ 2ನೇ ಇನ್ನಿಂಗ್ಸ್ನಲ್ಲಿ ಮಿಚೆಲ್ ಸ್ಟಾರ್ಕ್ ಮತ್ತು ಮ್ಯಾಥ್ಯೂ ಕುನ್ಹೆಮನ್ ತಲಾ 1 ವಿಕೆಟ್ ಹಾಗೂ ನಾಥನ್ ಲಿಯಾನ್ ಬರೋಬ್ಬರಿ 8 ವಿಕೆಟ್ ಪಡೆದು ಮಿಮಚಿದರು. ಅದರಂತೆ ಭಾರತದ ಪರ ಅಶ್ವಿನ್ 1 ವಿಕೆಟ್ ಪಡೆದರು.
WTC ಫೈನಲ್ ಹಾದಿ ಕಷ್ಟ:
ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯ ಗೆದ್ದ ಬಳಿಕ ಇದೀಗ 3ನೇ ಟೆಸಟ್ನಲ್ಲಿ ಸೋತಿದೆ. ಹೀಗಾಗಿ ಭಾರತದ ಸೋಲು ನೇರವಾಗಿ WTC 2023 ಪೈನಲ್ ರೇಸ್ಗೆ ಪರಿಣಾಮ ಬೀರಲಿದೆ. ಅಲ್ಲದೇ ಹೀಗಾಗಿ 4ನೇ ಪಂದ್ಯ ಮಾಡು ಇಲ್ಲವೇ ಮಡಿ ಎಂಬ ಹೋರಾಟದಲ್ಲಿ ಭಾರತ ಗೆಲ್ಲಲೇಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ