ನಾಗ್ಪುರ ಟೆಸ್ಟ್ ಮೂಲಕ ರವೀಂದ್ರ ಜಡೇಜಾ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಂಬ್ಯಾಕ್ ಮಾಡಿದ್ದಾರೆ. ಜಡೇಜಾ (Ravindra Jadeja) ಆಸೀಸ್ ವಿರುದ್ಧ ಭರ್ಜರಿ ಪುನರಾಗಮನ ಮಾಡಿದ್ದಾರೆ. ಜಡೇಜಾ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆಯುವ ಮೂಲಕ ಟೀಂ ಇಂಡಿಯಾಗೆ (Team India) ನೆರವಾದರು. ಆದರೆ, ಮೊದಲ ದಿನವೇ ರವೀಂದ್ರ ಜಡೇಜಾ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ವಾಸ್ತವವಾಗಿ, ಮೊದಲ ದಿನದಂದು, ಜಡೇಜಾ ಬೆರಳಿಗೆ ಮೊಹಮ್ಮದ್ ಸಿರಾಜ್ (Mohammed Siraj) ಕ್ರೀಮ್‌ನಂತಹದನ್ನು ಲೇಪಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ ಆಸ್ಟ್ರೇಲಿಯಾದ ಮಾಧ್ಯಮಗಳು ಮತ್ತು ಮಾಜಿ ಅನುಭವಿಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದ್ದಾರೆ. ಇದನ್ನು ಬಾಲ್ ಟೆಂಪರಿಂಗ್‌ನೊಂದಿಗೆ (Ball Tampering) ಜೋಡಿಸಲು ಪ್ರಯತ್ನಿಸಲಾಗುತ್ತಿದೆ. ಈ ವಿಚಾರವಾಗಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಕೂಡ ಟೀಂ ಇಂಡಿಯಾಗೆ ಸಮನ್ಸ್ ನೀಡಿದ್ದರು. ಆದರೆ ಇದೀಗ ಬಿಸಿಸಿಐ ಈ ಕುರಿತು ಐಸಿಸಿಗೆ ಸ್ಪಷ್ಟನೆ ನೀಡಿದೆ.
ಐಸಿಸಿಗೆ ಸ್ಪಷ್ಟನೆ ನೀಡಿದ ಬಿಸಿಸಿಐ:
ಇನ್ನು, ಮಾಧ್ಯಮ ವರದಿ ಪ್ರಕಾರ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಗ್ಪುರ ಟೆಸ್ಟ್‌ನ ಮೊದಲ ದಿನದಂದು ರವೀಂದ್ರ ಜಡೇಜಾ ಅವರ ಬೆರಳಿಗೆ ಏನನ್ನು ಹಚ್ಚಲಾಗಿದೆ ಎಂದು ಸ್ಪಿನ್ನರ್ ಮತ್ತು ಭಾರತೀಯ ನಾಯಕ ರೋಹಿತ್ ಶರ್ಮಾ ಅವರನ್ನು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಪ್ರಶ್ನಿಸಿದ್ದಾರೆ. ಈ ಘಟನೆಯ ನೈಜತೆಯನ್ನು ಅವರು ವಿಡಿಯೋ ಮೂಲಕ ತಿಳಿದುಕೊಳ್ಳಲು ಯತ್ನಿಸಿದ್ದಾರೆ. ವರದಿ ಪ್ರಕಾರ ಜಡೇಜಾ ಮೇಲೆ ಯಾವುದೇ ಆರೋಪ ಹೊರಿಸಿಲ್ಲ ಎಂದು ತಿಳಿದುಬಂದಿದೆ.
Indian team management tells match-referee Ravindra Jadeja used pain-relief cream on finger
Read @ANI Story | https://t.co/JDij82QHAe#RavindraJadeja #IndianCricketTeam #Cricket pic.twitter.com/jeemvzz2Oe
— ANI Digital (@ani_digital) February 10, 2023
ಇದನ್ನೂ ಓದಿ: Ravindra Jadeja: ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಜಡೇಜಾ? ಐಸಿಸಿಯಿಂದ ಬ್ಯಾನ್ ಆಗ್ತಾರಾ ಜಡ್ಡು-ಸಿರಾಜ್?
ಜಡೇಜಾ ಭರ್ಜರಿ ಕಂಬ್ಯಾಕ್:
ರವೀಂದ್ರ ಜಡೇಜಾ ಆಸೀಸ್ ವಿರುದ್ಧ 5 ವಿಕೆಟ್ ಪಡೆಯುವ ಮೂಲಕ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಅವರು 15 ಓವರ್‌ಗಳನ್ನು ಬೌಲ್ ಮಾಡಿ ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೆನ್ ಮತ್ತು ಮ್ಯಾಟ್ ರೆನ್‌ಶಾ ಅವರ ವಿಕೆಟ್ ಪಡೆದರು. ಆಸ್ಟ್ರೇಲಿಯಾ ತಂಡದ ಅರ್ಧದಷ್ಟು ಮಂದಿ ಪೆವಿಲಿಯನ್‌ಗೆ ಮರಳಿದ್ದರು. ಅದರ ವಿಡಿಯೋ ವೈರಲ್ ಆದ ನಂತರವೇ ವಿವಾದ ಶುರುವಾಗಿದೆ. ಅನೇಕ ಆಸ್ಟ್ರೇಲಿಯನ್ ಆಟಗಾರರು ಇದನ್ನು ಬಾಲ್ ಟೆಂಪರಿಂಗ್‌ನೊಂದಿಗೆ ಸಂಯೋಜಿಸಲು ಪ್ರಾರಂಭಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಆಸ್ಟ್ರೇಲಿಯಾ ತಂಡವು ಮ್ಯಾಚ್ ರೆಫರಿಗೆ ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ದೂರು ನೀಡಿಲ್ಲ.
ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಎಸ್.ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್ಕಾಂಬ್, ಮ್ಯಾಟ್ ರೆನ್ಶಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಸ್ಕಾಟ್ ಬೊಲಂಡ್, ಟಾಡ್ ಮರ್ಫಿ, ನೇಥನ್ ಲ್ಯಾನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ