• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs AUS 1st Test: ಅಶ್ವಿನ್ ದಾಳಿಗೆ ತತ್ತರಿಸಿದ ಆಸೀಸ್​​; ಎರಡೇ ಗಂಟೆಗಳಲ್ಲಿ ಆಸ್ಟ್ರೇಲಿಯಾ ಆಲೌಟ್​

IND vs AUS 1st Test: ಅಶ್ವಿನ್ ದಾಳಿಗೆ ತತ್ತರಿಸಿದ ಆಸೀಸ್​​; ಎರಡೇ ಗಂಟೆಗಳಲ್ಲಿ ಆಸ್ಟ್ರೇಲಿಯಾ ಆಲೌಟ್​

ಟೀಂ ಇಂಡಿಯಾಗೆ ಭರ್ಜರಿ ಗೆಲುವು

ಟೀಂ ಇಂಡಿಯಾಗೆ ಭರ್ಜರಿ ಗೆಲುವು

IND vs AUS 1st Test: ನಾಗ್ಪುರ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಮೂರನೇ ದಿನದಲ್ಲಿ ಪಂದ್ಯ ಮುಕ್ತಾಯವಾಗಿದ್ದು, ಎರಡನೇ ಇನ್ನಿಂಗ್ಸ್​​ನಲ್ಲಿ ಸ್ವಲ್ಪವೂ ಹೋರಾಟ ತೋರದ ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾ ಎದುರು ಮಂಡಿಯೂರಿದೆ.

  • Share this:

ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ (Team India vs Australia) ನಡುವೆ ನಾಗ್ಪುರದಲ್ಲಿ (Nagpur) ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಟೆಸ್ಟ್​ ಪಂದ್ಯ ಮೂರೇ ದಿನಕ್ಕೆ ಮುಕ್ತಾಯವಾಗಿದ್ದು, ಭಾರೀ ಹಿನ್ನಡೆಯೊಂದಿಗೆ ಇಂದು ಎರಡನೇ ಇನ್ನಿಂಗ್ಸ್​​ ಆರಂಭಿಸಿದ ಆಸ್ಟ್ರೇಲಿಯಾ ತಂಡ ಸ್ವಲ್ಪವೂ ಹೋರಾಟ ತೋರದೆ ಸೋಲುಂಡಿದೆ. ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ ಕೇವಲ 2 ಗಂಟೆಯಲ್ಲಿ ಮುಕ್ತಾಯವಾಗಿದ್ದು, 32.3 ಓವರ್‌ಗಳಲ್ಲಿ 91 ರನ್‌ಗಳಿಗೆ ಆಲೌಟ್​ ಆಗುವ ಮೂಲಕ ಸೋಲು ಒಪ್ಪಿಕೊಂಡಿದೆ. ಇದರೊಂದಿಗೆ ಟೀಂ ಇಂಡಿಯಾ ಇನ್ನಿಂಗ್ಸ್ ಜೊತೆಗೆ 132 ರನ್ ಪಡೆದುಕೊಂಡಿದೆ. ಟೀಂ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ (Ravichandran Ashwin) 5 ವಿಕೆಟ್​​ ಗಳಿಸಿ ಮಿಂಚಿದ್ದಾರೆ. ಉಳಿದಂತೆ ಕಮ್​​ಬ್ಯಾಕ್ ಸ್ಟಾರ್​ ಜಡೇಜಾ (Ravindra Jadeja) 2 ವಿಕೆಟ್​​, ವೇಗಿ ಶಮಿ 2 ವಿಕೆಟ್​ ಪಡೆದುಕೊಂಡರೆ ಅಕ್ಷರ್​ ಪಟೇಲ್​​ (Akshar Patel) ಒಂದು ವಿಕೆಟ್​ ಗಳಿಸಿದ್ದಾರೆ. ಇನ್ನು, ಆಸ್ಟ್ರೇಲಿಯಾ ಪರ ಸ್ಟೀವ್​ ಸ್ಮಿತ್​ 25 ರನ್​ ಗಳಿಸಿ ಟಾಫ್​ ಸ್ಕೋರರ್​​ ಆಗಿದ್ದಾರೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0ಯೊಂದಿಗೆ ಮುನ್ನಡೆ ಪಡೆದುಕೊಂಡಿದೆ.


ಆಸ್ಟ್ರೇಲಿಯಾಗೆ ಅಶ್ವಿನ್ ಬಿಗ್​ ಶಾಕ್​!


ಮೂರನೇ ದಿನದಾಟದ ಊಟದ ವಿರಾಮದ ಬಳಿಕ 223 ರನ್​​ಗಳ ಹಿನ್ನಡೆಯೊಂದಿಗೆ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್​ ಆರಂಭ ಮಾಡಿತ್ತು. ಇನ್ನಿಂಗ್ಸ್ ಆರಂಭವಾದ 2ನೇ ಓವರ್​​ನಲ್ಲೇ ಅಶ್ವಿನ್​ ಆಸೀಸ್​​ಗೆ ಶಾಕ್​ ನೀಡಿದ್ದರು. ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಕೇವಲ ಒಂದು ರನ್​ ಗಳಿಸಿ ಔಟಾಗುವುದರೊಂದಿಗೆ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಆ ಬಳಿಕ ಲಾಬುಶೇನ್ 17 ರನ್, ಡೇವಿಡ್​ ವಾರ್ನರ್​ 10 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದ್ದರು.


ಇದನ್ನೂ ಓದಿ: IND vs AUS: ಮೊದಲ ಟೆಸ್ಟ್​​ನಲ್ಲೇ ಮೈಂಡ್ ಗೇಮ್​ ಶುರು; ಲಬುಶೇನ್​ಗೆ ಅಶ್ವಿನ್​​ ಕೌಂಟರ್​, ಅಸಲಿಗೆ ಆಗಿದ್ದೇನು?


ಆಸ್ಟ್ರೇಲಿಯಾ ಪೆವಿಲಿಯನ್ ಪರೇಡ್​


ಆದರೆ ಬೌಲಿಂಗ್​​ ದಾಳಿಗೆ ಇಳಿದ ಜಡೇಜಾ, ಲಾಬುಶೇನ್​​ ಅವರ ವಿಕೆಟ್​ ಪಡೆದು ಟೀಂ ಇಂಡಿಯಾಗೆ ಎರಡನೇ ವಿಕೆಟ್​​ ನೀಡಿದ್ದರು. ಆ ಬಳಿಕ ವಾರ್ನರ್​ ಅಶ್ವಿನ್​ಗೆ ವಿಕೆಟ್ ಒಪ್ಪಿಸಿದ್ದರು. ಇದರೊಂದಿಗೆ ಆಸ್ಟ್ರೇಲಿಯಾದ ಪೆವಿಲಿಯನ್ ಪರೇಡ್​ ಆರಂಭವಾಗಿತ್ತು. ಸ್ಮೀತ್​, ಜಡೇಜಾ ಓವರ್​​ನಲ್ಲಿ ಬೌಲ್ಡ್​ ಆದರೂ ನಾಟೌಟ್ ಆಗುವುದರೊಂದಿಗೆ ಜೀವದಾನ ಪಡೆದುಕೊಂಡಿದ್ದರು. ಉಳಿದಂತೆ ಶಮಿ ಎಸೆದ ಓವರ್​​ನಲ್ಲಿ ಸ್ಕಾಟ್ ಬೊಲಂಡ್ ಔಟಾಗುವುದರೊಂದಿಗೆ ಆಸೀಸ್​ ಇನ್ನಿಂಗ್ಸ್ ಮುಕ್ತಾಯವಾಯಿತು.
ಇದಕ್ಕೂ ಮುನ್ನ 321/7ರೊಂದಿಗೆ ಮೂರನೇ ದಿನದಾಟವನ್ನು ಆರಂಭಿಸಿದ ಟೀಂ ಇಂಡಿಯಾ 139.3 ಓವರ್​ಗಳಲ್ಲಿ 400 ರನ್​ಗಳಿಗೆ ಆಲೌಟ್​ ಆಗಿತ್ತು. ರೋಹಿತ್ ಶರ್ಮಾ ಶತಕ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್​ರ ಅರ್ಧ ಶತಕಗಳು ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​​ನಲ್ಲಿ ಬೃಹತ್ ಮೊತ್ತವನ್ನು ಪೇರಿಸಿತ್ತು. ಇದರೊಂದಿಗೆ ಆಸ್ಟ್ರೇಲಿಯಾ ವಿರುದ್ಧ 232 ರನ್​ ಮುನ್ನಡೆಯನ್ನು ಸಾಧಿಸಿತ್ತು. ಆಸೀಸ್ ಬೌಲರ್​ಗಳಲ್ಲಿ ಟಾಡ್ ಮರ್ಫಿ 7 ವಿಕೆಟ್​, ಪ್ಯಾಟ್ ಕಮಿನ್ಸ್ 2 ವಿಕೆಟ್​, ಉಳಿದ ಒಂದು ವಿಕೆಟ್​ ನೇಥನ್ ಲ್ಯಾನ್ ಪಾಲಾಗಿತ್ತು.


ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್​ 11:


ಭಾರತ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಎಸ್​.ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.


ಆಸ್ಟ್ರೇಲಿಯಾ ಪ್ಲೇಯಿಂಗ್​ 11: ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್​ಕಾಂಬ್, ಮ್ಯಾಟ್ ರೆನ್ಶಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಸ್ಕಾಟ್ ಬೊಲಂಡ್, ಟಾಡ್ ಮರ್ಫಿ, ನೇಥನ್ ಲ್ಯಾನ್.

Published by:Sumanth SN
First published: