ಭಾರತ ಮತ್ತು ಆಸ್ಟ್ರೇಲಿಯಾ (IND vs AUS Test) ನಡುವಿನ 4 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ (Vidarbha Cricket Association Stadium) ನಡೆಯುತ್ತಿದೆ. ಮೊದಲ ದಿನದಾಟದ ಅಂತ್ಯದ ನಂತರ ಇಂದು 2ನೇ ದಿನ ಆರಂಭಿಸಿರುವ ಭಾರತ ತಂಡ (Team India) ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದೆ. ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 52 ಓವರ್ಗಳಿಗೆ 3 ವಿಕೆಟ್ ನಷ್ಟಕ್ಕೆ 151 ರನ್ಗಳಿಸುವ ಮೂಲಕ 26 ರನ್ಗಳ ಹಿನ್ನಡೆಯಲ್ಲಿದೆ. ಸದ್ಯ ಕ್ರೀಸ್ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Virat Kohli) ಆಟವಾಡುತ್ತಿದ್ದಾರೆ.
ಶತಕದ ಹೊಸ್ತಿಲಲ್ಲಿ ಹಿಟ್ಮ್ಯಾನ್:
ಇನ್ನು, ಮೊದಲ ದಿನದಾಟದ ಅಂತ್ಯದ ವೇಳೆಗೆ ಕ್ರೀಸ್ ಕಾಯ್ದುಕೊಂಡಿದ್ದ ರೋಹಿತ್ ಶರ್ಮಾ ಇಂದು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು ಭೋಜನ ವಿರಾಮದ ವೇಳೆಗೆ 142 ಎಸೆತದಲ್ಲಿ 12 ಫೊರ್ ಮತ್ತು 2 ಸಿಕ್ಸ್ ಮೂಲಕ 85 ರನ್ ಗಳಿಸಿ ಶತಕದ ಸಮೀಪದಲ್ಲಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದು, 12 ರನ್ ಗಳಿಸಿದ್ದಾರೆ. ಉಳಿದಂತೆ ಕೆಎಲ್ ರಾಹುಲ್ 20 ರನ್, ರವಿಚಂದ್ರನ್ ಅಶ್ವಿನ್ 23 ರನ್, ಚೇತೇಶ್ವರ್ ಪೂಜಾರ 7 ರನ್ ಗಳಿಸಿ ಫೇವೆಲಿಯನ್ ತಲುಪಿದ್ದಾರೆ. ಸದ್ಯ ಕ್ರೀಸ್ನಲ್ಲಿರುವ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮೇಲೆ ಹೆಚ್ಚಿನ ನಿರೀಕ್ಷೆಯಿದ್ದು, ರೋಹಿತ್ ಜೊತೆ ಕೊಹ್ಲಿಯ ಶತಕಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ.
Lunch on Day 2 of the 1st Test.
Captain @ImRo45 going strong on 85* with Virat Kohli 12* #TeamIndia 151/3, trail by 26 runs.
Scorecard - https://t.co/edMqDi4dkU #INDvAUS @mastercardindia pic.twitter.com/zIMoKcjRyT
— BCCI (@BCCI) February 10, 2023
ಮೊದಲ ದಿನದಲ್ಲಿ ಒಟ್ಟು 11 ವಿಕೆಟ್‌ಗಳು ಬಿದ್ದವು, ಅದರಲ್ಲಿ 9 ವಿಕೆಟ್‌ಗಳು ಸ್ಪಿನ್ ಬೌಲರ್‌ಗಳ ಪಾಲಾಯಿತು. ಮೊದಲ ದಿನ ಸ್ಪಿನ್ ಬೌಲರ್‌ಗಳು 65 ಓವರ್‌ಗಳನ್ನು ನೀಡಿದರು. ಎರಡನೇ ದಿನದಲ್ಲಿ ಸ್ಪಿನ್ನರ್‌ಗಳು ಪಿಚ್‌ನಲ್ಲಿ ಮತ್ತೊಮ್ಮೆ ಭರ್ಜರಿ ಬೌಲಿಂಗ್ ಮಾಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಬ್ಯಾರ್ಗಳು ಈ ವಿಕೆಟ್‌ನಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡಬೇಕಾಗುತ್ತದೆ. ರೋಹಿತ್ ಜೊತೆಗೆ ಕೊಹ್ಲಿ, ಸೂರ್ಯಕುಮಾರ್ ಮತ್ತು ಭರತ್ ಅವರಿಂದ ಭಾರತ ಹೆಚ್ಚಿನ ನಿರೀಕ್ಷೆ ಹೊಂದಿದೆ.
ಇದನ್ನೂ ಓದಿ: Ravindra Jadeja: ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಜಡೇಜಾ? ಐಸಿಸಿಯಿಂದ ಬ್ಯಾನ್ ಆಗ್ತಾರಾ ಜಡ್ಡು-ಸಿರಾಜ್?
ಟಾಡ್ ಮರ್ಫಿ ಉತ್ತಮ ದಾಳಿ:
ಇನ್ನು, 2ನೇ ದಿನದಾಟದಲ್ಲಿ ಆಸೀಸ್ ಪರ ಟಾಡ್ ಮರ್ಫಿ ಮಾತ್ರ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಅವರು ಭೋಜನ ವಿರಾಮದ ವೇಳೆಗೆ 15 ಓವರ್ ಬೌಲ್ ಮಾಡಿ 2 ಓವರ್ ಮೇಡಿನ ಜೊತೆಗೆ 35 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು.
ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಎಸ್.ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್ಕಾಂಬ್, ಮ್ಯಾಟ್ ರೆನ್ಶಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಸ್ಕಾಟ್ ಬೊಲಂಡ್, ಟಾಡ್ ಮರ್ಫಿ, ನೇಥನ್ ಲ್ಯಾನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ