IND vs AUS: ಟಾಸ್​ ಗೆದ್ದ ಆಸ್ಟ್ರೇಲಿಯಾ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs AUS: ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯವು ಇಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (Punjab Cricket Association) ​​ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯಲಿದೆ.

IND vs AUS

IND vs AUS

  • Share this:
ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯವು ಇಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (Punjab Cricket Association) ​​ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್​ ಪಿಂಚ್​ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ಮೊದಲು ಬ್ಯಾಟಿಂಗ್​ ಮಾಡಲಿದೆ. ಭಾರತ ತಂಡದಲ್ಲಿ ಮಹತ್ವದ ಬದಲಾವಣೆ ಆಗಿದ್ದು, ರಿಷಭ್ ಪಂತ್​ ಅವರನ್ನು ತಂಡದಿಂದ ಕೈಬಿಡಲಾಗಿದೆ. ಹೀಗಾಗಿ ಇಂದಿನ ಪಂದ್ಯಕ್ಕೆ ದಿನೇಶ್​ ಕಾರ್ತಿಕ್​ ಆಯ್ಕೆ ಆಗಿದ್ದಾರೆ.

ಪಂದ್ಯದ ವಿವರ: 

ಭಾರತ ಮತ್ತು ಆಸ್ಟ್ರೇಲಿಯಾ  ಮೊದಲ ಟಿ20 ಪಂದ್ಯವು ಮೊಹಾಲಿಯಲ್ಲಿ ನಡೆಯಲಿದೆ. ಸಂಜೆ 7 ಗಂಟೆಗೆ ಟಾಸ್​ ಮತ್ತು 7:30ಕ್ಕೆ ಪಂದ್ಯ ಪ್ರಾರಂಭವಾಗಲಿದೆ. ಈ ಸರಣಿಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನೇರ ಪ್ರಸಾರವನ್ನು ವೀಕ್ಷಿಸಬಹುದು.  ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಪಂದ್ಯದ ಲೈವ್ ಅಪ್‌ಡೇಟ್‌ಗಳಿಗಾಗಿ ನೀವು News 18 Kannada ವೆಬ್‌ಸೈಟ್ ಅನುಸರಿಸಿ.





ಪಿಚ್​ ವರದಿ:

ಇನ್ನು, ಪಂಜಾಬ್ ಕ್ರಿಕೆಟ್ ಸಂಸ್ಥೆ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿನ ವಿಕೆಟ್ ಬ್ಯಾಟಿಂಗ್ ಸ್ನೇಹಿ ಮೇಲ್ಮೈಯಾಗಿದ್ದು, ಇಲ್ಲಿ ಮತ್ತೊಮ್ಮೆ ಬ್ಯಾಟರ್‌ಗಳಿಗೆ ನೆರವಾಗುವ ನಿರೀಕ್ಷೆಯಿದೆ. ವೇಗಿಗಳು ಪಂದ್ಯದ ಉತ್ತರಾರ್ಧದಲ್ಲಿ ಸ್ವಲ್ಪ ಪ್ರಭಾವ ಬೀರುವ ಸಾಧ್ಯತೆ ಇದೆ.  ಈ ಮೈದಾನದಲ್ಲಿ ಚೇಸಿಂಗ್ ಸೂಕ್ತ ಆಯ್ಕೆಯಾಗಿದೆ.

ಇದನ್ನೂ ಓದಿ: ICC Cricket Rules: ಅಕ್ಟೋಬರ್ 1 ರಿಂದ ಹೊಸ ನಿಯಮ, ಬೌಲರ್​ ಈ ರೀತಿ ಮಾಡಿದ್ರೆ ಬ್ಯಾಟ್ಸ್​ಮನ್​ಗೆ ಸಿಗುತ್ತೆ 5 ರನ್

ಪಂತ್​ ಔಟ್​ ಕಾರ್ತಿಕ್​ ಇನ್​:

ಇನ್ನು, ಇಂದಿನ ಆಸೀಸ್​ ಪಂದ್ಯದಲ್ಲಿ ರಿಷಭ್ ಪಂತ್​ ಪ್ಲೇಯಿಂಗ್​ 11ನಿಂದ ಹೊರಗುಳಿದಿದ್ದಾರೆ. ಅವರ ಬದಲಾಗಿ ವಿಕೆಟ್​ ಕೀಪರ್​ ಕಂ ಬ್ಯಾಟ್ಸ್​ಮನ್​ ಆಗಿ ದಿನೇಶ್​ ಕಾರ್ತಿಕ್​ ಪ್ಲೇಯಿಂಗ್​ 11 ನಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೇ ಕೆಎಲ್ ರಾಹುಲ್-ರೋಹಿತ್ ಶರ್ಮಾ  ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

ಭಾರತ-ಆಸ್ಟ್ರೇಲಿಯಾ ತಂಡಗಳ ಅಂಕಿಅಂಶಗಳು:

ಗರಿಷ್ಠ ಮೊತ್ತ: ಭಾರತ 4 ವಿಕೆಟ್‌ಗೆ 202ರನ್
ಕಡಿಮೆ ಮೊತ್ತ: 74 ಆಲೌಟ್
ಭಾರತದ ಪರ ಹೆಚ್ಚು ರನ್: ವಿರಾಟ್ ಕೊಹ್ಲಿ 718 ರನ್
ಆಸ್ಟ್ರೇಲಿಯಾ ಪರ ಹೆಚ್ಚು ರನ್: ಆರನ್ ಫಿಂಚ್ 440 ರನ್
ಅತಿ ಹೆಚ್ಚು ವಿಕೆಟ್‌: ಬುಮ್ರಾ 15 ವಿಕೆಟ್
ಅತ್ಯುತ್ತಮ ಬೌಲಿಂಗ್: ಆರ್ ಅಶ್ವಿನ್ 4/11

ಭಾರತ-ಆಸ್ಟ್ರೇಲಿಯಾ ಮುಖಾಮುಖಿ: 23 ಬಾರಿ
ಭಾರತದ ಗೆಲುವು: 13
ಆಸ್ಟ್ರೇಲಿಯಾ ಗೆಲುವು: 9
ಫಲಿತಾಂಶ ಇಲ್ಲದ್ದು: 1

ಭಾರತ-ಆಸೀಸ್​ ಪ್ಲೇಯಿಂಗ್​ 11:

ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮೇಶ್ ಯಾದವ್, ಯುಜ್ವೇಂದ್ರ ಚಾಹಲ್.

ಇದನ್ನೂ ಓದಿ: Irfan Pathan: ಸೌದಿ ಮಾಡೆಲ್ ಫಸ್ಟ್​ ಲುಕ್​ಗೆ ಕ್ಲೀನ್​ ಬೋಲ್ಡ್ ಆದ ಪಠಾಣ್​, ಇಬ್ಬರ ನಡುವಿನ ವಯಸ್ಸಿನ ಅಂತರ ಗೊತ್ತಾ?

ಆಸ್ಟ್ರೇಲಿಯಾ ತಂಡ: ಆರೋನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ನಾಥನ್ ಎಲ್ಲಿಸ್, ಆಡ್ಯಂ ಝಂಪಾ, ಜೋಶ್ ಹ್ಯಾಝಲ್‌ವುಡ್
Published by:shrikrishna bhat
First published: