• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs AUS: ಆಸೀಸ್​ ಎದುರು ಅಬ್ಬರಿಸಿದ ಪಾಂಡ್ಯ, ಪಿಂಚ್​ ಪಡೆಗೆ ಬೃಹತ್​​ ಮೊತ್ತದ ಟಾರ್ಗೆಟ್

IND vs AUS: ಆಸೀಸ್​ ಎದುರು ಅಬ್ಬರಿಸಿದ ಪಾಂಡ್ಯ, ಪಿಂಚ್​ ಪಡೆಗೆ ಬೃಹತ್​​ ಮೊತ್ತದ ಟಾರ್ಗೆಟ್

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

IND vs AUS: ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊಲದ ಪಂದ್ಯ ಮೊಹಾಲಿಯಲ್ಲಿ ನಡೆಯುತ್ತಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿತು.

  • Share this:

ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯವು ಇಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (Punjab Cricket Association) ​​ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈಗಾಗಲೇ ಟಾಸ್​ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್​ ಪಿಂಚ್​ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ಮೊದಲು ಬ್ಯಾಟಿಂಗ್​ ಮಾಡಿತು. ಟೀಂ ಇಂಡಿಯಾ ನಿಗದಿತ 20 ಓವರ್​ ನಲ್ಲಿ 6 ವಿಕೆಟ್​ ನಷ್ಟಕ್ಕೆ 208 ರನ್ ಗಳಿಸಿತು. ಭಾರತದ ಪರ ಹಾರ್ದಿಕ್​ ಪಾಂಡ್ಯ ಅಬ್ಬರದ ಬ್ಯಾಟಿಂಗ್​ ಮಾಡಿ ಮಿಂಚಿದರು.


ಉತ್ತಮ ಬ್ಯಾಟಿಂಗ್​ ಮಾಡಿದ ಭಾರತ:


ಇನ್ನು, ತವರಿನ ಫುಲ್​ ಅಡ್ವಾಂಟೆಜ್​ ಪಡೆದ ಭಾರತ ತಂಡ ಆರಂಭಿಕರಾಗಿ  ನಾಯಕ ರೋಹಿತ್​ ಜೊತೆ ಕಣಕ್ಕಿಳಿದ ಕನ್ನಡಿಗ ಕೆಎಲ್ ರಾಹುಲ್ ಆಸೀಸ್​ ವಿರುದ್ಧ ಭರ್ಜರಿಯಾಗಿ ಬ್ಯಾಟಿಂಗ್​ ಮಾಡಿದ್ದಾರೆ. ಅನೇಕ ದಿನಗಳಿಂದ ಕಳಪೆ ಫಾರ್ಮ್​ನಲ್ಲಿದ್ದ ರಾಹುಲ್​ ಇಂದು ಸೂಪರ್ ಆಗಿ​ ಬ್ಯಾಟಿಂಗ್​ ಮಾಡಿದರು. ಅವರು​ 35 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಫೊರ್​ ನೆರವಿನಿಂದ 55 ರನ್ ಗಳಿಸಿ ಜೋಶ್ ಹ್ಯಾಝಲ್‌ವುಡ್ ಬೌಲಿಂಗ್​ ನಲ್ಲಿ ವಿಕೆಟ್​ ಒಪ್ಪಿಸಿದರು.


ಉಳಿದಂತೆ ನಾಯಕ ರೋಹಿತ್​ ಶರ್ಮಾ 1 ಸಿಕ್ಸ್ 1 ಪೋರ್​ ನೆರವಿನಿಂದ ಕೇವಲ 11 ರನ್, ವಿರಾಟ್​ ಕೊಹ್ಲಿ 7 ಬೌಲ್​ ಆಡಿ ಕೇವಲ 2 ರನ್, ಸೂರ್ಯಕುಮಾರ್ ಯಾದವ್ 4 ಸಿಕ್ಸ್ ಮತ್ತು 2 ಬೌಂಡರಿ ನೆರವಿನಿಂದ 46 ರನ್. ಉಳಿದಂತೆ  ಅಕ್ಷರ್ ಪಟೇಲ್​ 6 ರನ್, ದಿನೇಶ್​ ಕಾರ್ತಿಕ್​ 6 ರನ್, ಹರ್ಷಲ್ ಪಟೇಲ್​ 7 ರನ್ ಮತ್ತು ಅಂತಿಮವಾಗಿ ಪವರ್​ ಹಿಟ್ಟರ್ ಹಾರ್ದಿಕ್ ಪಾಂಡ್ಯ  7 ಫೋರ್​ ಮತ್ತು 5 ಸಿಕ್ಸ್ ನೆರವಿನಿಂದ ಬರೋಬ್ಬರಿ 71 ರನ್ ಗಳಿಸಿದರು.


ಇದನ್ನೂ ಓದಿ: ICC Cricket Rules: ಅಕ್ಟೋಬರ್ 1 ರಿಂದ ಹೊಸ ನಿಯಮ, ಬೌಲರ್​ ಈ ರೀತಿ ಮಾಡಿದ್ರೆ ಬ್ಯಾಟ್ಸ್​ಮನ್​ಗೆ ಸಿಗುತ್ತೆ 5 ರನ್


ನಾಥನ್ ಎಲ್ಲಿಸ್ ಉತ್ತಮ ದಾಳಿ:


ಆಸೀಸ್​ ಪರ ಬೌಲರ್​​ಗಳು ಉತ್ತಮ ದಾಳಿ ನಡೆಸಿದರೂ ಭಾರತ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಆಸೀಸ್​ ಪರ ನಾಥನ್ ಎಲ್ಲಿಸ್ 3 ವಿಕೆಟ್​ ಮತ್ತು  ಜೋಶ್ ಹ್ಯಾಝಲ್‌ವುಡ್ 2 ವಿಕೆಟ್​ ಪಡೆದು ಮಿಂಚಿದರು. ಉಳಿದಂತೆ ಕ್ಯಾಮೆರಾನ್ ಗ್ರೀನ್ 1 ವಿಕೆಟ್​ ಪಡೆದರು.


ರಿಷಭ್ ಪಂತ್​-ಬುಮ್ರಾ ಔಟ್​:


ಇನ್ನು, ಇಂದಿನ ಆಸೀಸ್​ ಪಂದ್ಯದಲ್ಲಿ ರಿಷಭ್ ಪಂತ್​ ಪ್ಲೇಯಿಂಗ್​ 11ನಿಂದ ಹೊರಗುಳಿದಿದ್ದಾರೆ. ಅವರ ಬದಲಾಗಿ ವಿಕೆಟ್​ ಕೀಪರ್​ ಕಂ ಬ್ಯಾಟ್ಸ್​ಮನ್​ ಆಗಿ ದಿನೇಶ್​ ಕಾರ್ತಿಕ್​ ಪ್ಲೇಯಿಂಗ್​ 11 ನಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೇ ಕೆಎಲ್ ರಾಹುಲ್-ರೋಹಿತ್ ಶರ್ಮಾ  ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಇದಲ್ಲದೇ ಪಂತ್​ ಜೊತೆ ಬುಮ್ರಾ ಸಹ ತಂಡದಿಂದ ಹೊರಗುಳಿದಿದ್ದು, ಅವರ ಬದಲಿಗೆ ಹರ್ಷಲ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.


ಇದನ್ನೂ ಓದಿ: Dhoni-Yuvraj Singh: ಧೋನಿ-ಯುವಿ ಅಭಿಮಾನಿಗಳಿಗೆ ಸಂತಸದ ಸುದ್ದಿ, ಮತ್ತೆ ಒಂದಾದ ಕುಚುಕು ಗೆಳೆಯರು


ಭಾರತ-ಆಸೀಸ್​ ಪ್ಲೇಯಿಂಗ್​ 11:


ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮೇಶ್ ಯಾದವ್, ಯುಜ್ವೇಂದ್ರ ಚಾಹಲ್.


ಆಸ್ಟ್ರೇಲಿಯಾ ತಂಡ: ಆರೋನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ನಾಥನ್ ಎಲ್ಲಿಸ್, ಆಡ್ಯಂ ಝಂಪಾ, ಜೋಶ್ ಹ್ಯಾಝಲ್‌ವುಡ್.

Published by:shrikrishna bhat
First published: