• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs AUS 1st ODI: ಟೀಂ ಇಂಡಿಯಾ ದಾಳಿಗೆ ಮುಗ್ಗರಿಸಿದ ಆಸೀಸ್​, ಅಲ್ಪಮೊತ್ತಕ್ಕೆ ಕುಸಿದ ಕಾಂಗರೂಗಳು

IND vs AUS 1st ODI: ಟೀಂ ಇಂಡಿಯಾ ದಾಳಿಗೆ ಮುಗ್ಗರಿಸಿದ ಆಸೀಸ್​, ಅಲ್ಪಮೊತ್ತಕ್ಕೆ ಕುಸಿದ ಕಾಂಗರೂಗಳು

IND vs AUS 1st ODI

IND vs AUS 1st ODI

IND vs AUS 1st ODI: ಆಸ್ಟ್ರೇಲಿಯಾ ವಿರುದ್ಧದ ಮೊದಲ ODI ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ದಾಳಿಗೆ ಆಸೀಸ್​ ತತ್ತರಿಸಿದೆ.

  • Share this:

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ (IND vs AUS 1st ODI) ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ಬೌಲರ್​ಗಳ ಸಂಘಟಿತ ದಾಳಿಗೆ ಆಸ್ಟ್ರೇಲಿಯಾ ತಂಡ ತತ್ತರಿಸುವ ಮೂಲಕ ಅಲ್ಪಮೊತ್ತಕ್ಕೆ ಕುಸಿದಿದೆ. ಆಸೀಸ್​ ತಂಡವು 35.4 ಓವರ್​ಗೆ 10 ವಿಕೆಟ್​ ನಷ್ಟಕ್ಕೆ 188 ರನ್​ ಗಳಿಸುವ ಮೂಲಕ ಭಾರತ ತಂಡಕ್ಕೆ 189 ರನ್​ಗಳ ಟಾರ್ಗೆಟ್​ ನೀಡಿದೆ. ಮೊದಲ ಪಂದ್ಯದಿಂದ ಕೌಟುಂಬಿಕ ಕಾರಣದಿಂದ ನಿಯಮಿತ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಹೊರಗುಳಿದಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ತಂಡವನ್ನು ಹಾರ್ದಿಕ್​ ಪಾಂಡ್ಯ (Hardik Pandya) ಮುನ್ನಡೆಸುತ್ತಿದ್ದಾರೆ.


ಟೀಂ ಇಂಡಿಯಾ ಭರ್ಜರಿ ಬೌಲಿಂಗ್ ದಾಳಿ:


ಇನ್ನು, ಟಾಸ್​ ಗೆದ್ದು ಮೊದಲು ಬೌಲಿಂಗ್​ ಮಾಡಿದ ಭಾರತ ತಂಡ ಪಂದ್ಯದ ಆರಂಭದಿಂದಲೂ ಆಸೀಸ್​ ಬ್ಯಾಟರ್​ಗಳ ಮೇಲೆ ನಿಯಂತ್ರಣ ಸಾಧಿಸಿತು. ಭಾರತದ ಪರ 6 ಓವರ್​ ಮಾಡಿ ಮೊಹಮ್ಮದ್ ಸಿರಾಜ್​ ಮತ್ತು ಮೊಹಮ್ಮದ್ ಶಮಿ ತಲಾ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ರವೀಂದ್ರ ಜಡೇಜಾ 2 ವಿಕೆಟ್​ ಪಡೆದರು. ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕುಲ್​ದೀಪ್​ ಯಾದವ್ ತಲಾ 1 ವಿಕೆಟ್ ಪಡೆದು ಆಸ್ಟ್ರೇಲಿಯಾ ಪತನಕ್ಕೆ ಕಾರಣರಾದರು.



ಭಾರತ ತಂಡದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅದ್ಭುತ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ವೇಗದ ಬೌಲರ್‌ಗಳು ಕ್ರಮವಾಗಿ ಮೂರು ವಿಕೆಟ್ ಪಡೆದಿದ್ದಾರೆ. ಇದಲ್ಲದೆ ರವೀಂದ್ರ ಜಡೇಜಾ ಸಹ ಟೆಸ್ಟ್​ ಸರಣಿಯಂತೆ ಇಲ್ಲಿಯೂ ಉತ್ತಮ ಬೌಲಿಂಗ್​ ಮುಂದುವರೆಸಿದ್ದಾರೆ.


ಇದನ್ನೂ ಓದಿ: Kohli-Babar: ಕೊಹ್ಲಿ ದಾಖಲೆ ಮುರಿದ ಬಾಬರ್​ ಅಜಮ್, ವಿಶ್ವ ಕ್ರಿಕೆಟ್​ನಲ್ಲಿ ಹೊಸ ರೆಕಾರ್ಡ್ ಬರೆದ ಪಾಕ್ ನಾಯಕ


ಮಿಚೆಲ್ ಮಾರ್ಷ್​ ಏಕಾಂಗಿ ಹೋರಾಟ:


ಇನ್ನು, ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ತಂಡ 35.4 ಓವರ್​ಗಳಿಗೆ 188 ರನ್​ಗಳಿಗೆ ಆಲೌಟ್​ ಆಯಿತು. ಆಸೀಸ್​ ಪರ ಮಿಚೆಲ್ ಮಾರ್ಷ್ 81 ರನ್​ ಗಳಿಸುವ ಮೂಲಕ ಏಕಾಂಗಿಯಾಗಿ ಹೋರಾಡಿದರು. ಉಳಿದಂತೆ ಟ್ರಾವಿಸ್ ಹೆಡ್ 5 ರನ್, ಸ್ಟೀವ್ ಸ್ಮಿತ್ 22 ರನ್, ಮಾರ್ನಸ್ ಲಬುಶೇನ್ 15 ರನ್, ಜೋಶ್ ಇಂಗ್ಲಿಸ್ 26 ರನ್, ಕ್ಯಾಮೆರಾನ್ ಗ್ರೀನ್ 12 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 8 ರನ್, ಮಾರ್ಕಸ್ ಸ್ಟೊಯಿನಿಸ್ 5 ರನ್, ಸೀನ್ ಅಬಾಟ್ ಶೂನ್ಯ, ಮಿಚೆಲ್ ಸ್ಟಾರ್ಕ್ 4 ರನ್ ಮತ್ತು ಆಡಮ್ ಝಂಪಾ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು.




ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್​ 11:


ಭಾರತ ಪ್ಲೇಯಿಂಗ್​ 11: ಶುಭ್​ಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮದ್ ಶಮಿ, ಮೊಹಮದ್ ಸಿರಾಜ್,ಕುಲ್ದೀಪ್ ಯಾದವ್.


ಆಸ್ಟ್ರೇಲಿಯಾ ಪ್ಲೇಯಿಂಗ್​ 11: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್, ಜೋಶ್ ಇಂಗ್ಲಿಸ್, ಕ್ಯಾಮೆರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ.

Published by:shrikrishna bhat
First published: