• Home
  • »
  • News
  • »
  • sports
  • »
  • India vs New Zealand: ಮಳೆ ಬಂದರೆ ಭಾರತಕ್ಕೆ ಸರಣಿ ಕೈವಶ, ಇಲ್ಲಿದೆ ನೇಪಿಯರ್ ಹವಾಮಾನ ವರದಿ

India vs New Zealand: ಮಳೆ ಬಂದರೆ ಭಾರತಕ್ಕೆ ಸರಣಿ ಕೈವಶ, ಇಲ್ಲಿದೆ ನೇಪಿಯರ್ ಹವಾಮಾನ ವರದಿ

IND vs NZ

IND vs NZ

Ind v NZ 3rd T20 Napier weather forecast: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಸರಣಿಯ ಮೂರನೇ T20 ಅಂತರಾಷ್ಟ್ರೀಯ ಪಂದ್ಯ ನೇಪಿಯರ್‌ನ ಮೆಕ್ಲೀನ್ ಪಾರ್ಕ್‌ನಲ್ಲಿ ನಡೆಯಲಿದೆ. ಮಂಗಳವಾರ ನೇಪಿಯರ್‌ನ ಮೆಕ್ಲೀನ್ ಪಾರ್ಕ್‌ನಲ್ಲಿ ಹವಾಮಾನ ಹೇಗಿದೆ ಎಂದು ನೋಡೋನ ಬನ್ನಿ.

ಮುಂದೆ ಓದಿ ...
  • Share this:

ಇಂದಿನ ಪಂದ್ಯ ಗೆದ್ದಲ್ಲಿ ಟಿ20 ಸರಣಿಯನ್ನು ಭಾರತ ತಂಡ ಗೆಲ್ಲಲಿದೆ. ಇಂದು ನೇಪಿಯರ್‌ನ ಮ್ಯಾಕ್ಲೀನ್ ಪಾರ್ಕ್‌ನಲ್ಲಿ (Mclean Park) ಆತಿಥೇಯ ನ್ಯೂಜಿಲೆಂಡ್ (India vs New Zealand) ವಿರುದ್ಧ ಸೆಣಸಲಿದೆ. ಸರಣಿಯ ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 65 ರನ್‌ಗಳಿಂದ ಗೆದ್ದುಕೊಂಡಿದ್ದು, ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಈ ಪಂದ್ಯದಲ್ಲಿ ಮಳೆಯಿಂದಾಗಿ ಪಂದ್ಯ ನಡೆಯದೇ ಹೋದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya)  ನಾಯಕತ್ವದ ತಂಡವು ಸರಣಿ ಕೈವಶ ಮಾಡಿಕೊಳ್ಳಲಿದೆ. ಕಿವೀಸ್ ತಂಡಕ್ಕೆ ಇದು ಡು ಆರ್ ಡೈ ಎಂಬಂತಾಗಿದೆ. ಈ ಪಂದ್ಯದಿಂದ ತಂಡದ ನಿಯಮಿತ ನಾಯಕ ಕೇನ್ ವಿಲಿಯಮ್ಸನ್ (Kane Williamson) ಅವರನ್ನು ಹೊರಗಿಟ್ಟಿರುವ ಕಾರಣ ಆತಿಥೇಯರು ಭಾರಿ ಹಿನ್ನಡೆ ಅನುಭವಿಸಿದ್ದಾರೆ.


ನೇಪಿಯರ್‌ ಹವಾಮಾನ ವರದಿ:


ಮೆಕ್ಲೀನ್ ಪಾರ್ಕ್‌ನಲ್ಲಿ  ಭಾರತ ಮತ್ತು ನ್ಯೂಜಿಲ್ಯಾಂಡ್​ ಮೂರನೇ ಟಿ20 ಪಂದ್ಯ ನಡೆಯಲಿದೆ. ಆದರೆ ಇಂದಿನ ಪಂದ್ಯದಲ್ಲಿ ಹವಾಮಾನವು ಪ್ರಮುಖ ಪಾತ್ರ ವಹಿಸಿದೆ. ನೇಪಿಯರ್‌ನ ಮೆಕ್ಲೀನ್ ಪಾರ್ಕ್‌ನಲ್ಲಿ ಮಂಗಳವಾರ ಸಂಜೆ ಆಕಾಶದಲ್ಲಿ ಮೋಡ ಕವಿದ ವಾತಾವರಣವಿದೆ. ಪಂದ್ಯದ ದಿನದಂದು (ಇಂದು) ಶೇ.70ರಷ್ಟು ಮಳೆಯಾಗುವ ಮುನ್ಸೂಚನೆ ಇದೆ. ಪಂದ್ಯಕ್ಕೂ ಮುನ್ನ ಮಳೆಯಾಗುವ ಸಾಧ್ಯತೆ ಇದ್ದು, ಇಂತಹ ಪರಿಸ್ಥಿತಿಯಲ್ಲಿ ಪಂದ್ಯ ತಡವಾಗಿ ಆರಂಭವಾಗಬಹುದು. ರಾತ್ರಿ ಮಳೆಯ ಮುನ್ಸೂಚನೆ ಶೇ.70ರಷ್ಟಿದೆ. ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿಪಡಿಸಬಹುದು. ಒಂದು ವೇಳೆ ಮಳೆಯಿಂದ ಮೊದಲ ಪಂದ್ಯದಂತೆ ಸಂಪೂರ್ಣವಾಗಿ ಮ್ಯಾಚ್​ ರದ್ದಾದ್ದಲ್ಲಿ ಭಾರತ ತಂಡವು ಸರಣಿ ಗೆಲುವನ್ನು ಕಾಣಲಿದೆ. ಏಕೆಂದರೆ ಟೀಂ ಇಂಡಿಯಾ ಈಗಾಗಲೇ 1-0 ಮುನ್ನಡೆಯಲ್ಲಿದೆ.ಪಿಚ್​ ರಿಪೋರ್ಟ್​:


ಮೆಕ್ಲೀನ್ ಪಿಚ್ (ಮ್ಯಾಕ್ಲೀನ್ ಪಾರ್ಕ್ ಪಿಚ್) ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಇಲ್ಲಿ ಇಲ್ಲಿಯವರೆಗೆ ಒಟ್ಟು 5 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಈ ಸ್ಥಳದಲ್ಲಿ ಹೆಚ್ಚಿನ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಲಾಗಿದೆ. ಆದಾಗ್ಯೂ, ಆಟ ಮುಂದುವರೆದಂತೆ, ವಿಕೆಟ್ ನಿಧಾನವಾಗುತ್ತದೆ. ವಿಶಾಲವಾದ ಮೈದಾನದ ಕಾರಣ ಬೌಲರ್‌ಗಳು ಲಾಭ ಪಡೆಯಬಹುದು. ಈ ವಿಕೆಟ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 2 ಬಾರಿ ಗೆದ್ದರೆ, ಚೇಸಿಂಗ್ ತಂಡ 3 ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಇಂದು ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.


ಪಂದ್ಯ ಯಾವಾಗ ಆರಂಭ? ವಿವರ:


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಟಿ20 ಸರಣಿಯ 2ನೇ ಪಂದ್ಯವು ಇಂದು ನ್ಯೂಜಿಲ್ಯಾಂಡ್​ನ ನೇಪಿಯರ್‌ನ ಮ್ಯಾಕ್ಲೀನ್ ಪಾರ್ಕ್‌ನಲ್ಲಿ ನಡೆಯಲಿದೆ. ಟಿ20 ಪಂದ್ಯಗಳ ಸರಣಿಯ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 11:30ಕ್ಕೆ ಟಾಸ್ ಮತ್ತು 12 ರಿಂದ ಪಂದ್ಯ ನಡೆಯಲಿವೆ. ಟಿ20 ಪಂದ್ಯಗಳ ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದು. ಹಾಗೂ ಪಂದ್ಯದ ನೇರಪ್ರಸಾರವನ್ನು ಡಿಡಿ ಸ್ಪೋರ್ಟ್ಸ್​ನಲ್ಲಿ ವೀಕ್ಷಿಸಬಹುದು.


ಇದನ್ನೂ ಓದಿ: India vs New Zealand: ಭಾರತ-ಕಿವೀಸ್​ 3ನೇ ಟಿ20 ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11


IND vs NZ ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್​ 11: ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (C/WK), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್​, ದೀಪಕ್ ಹೂಡ, ವಾಷಿಂಗ್ಟನ್‌ ಸುಂದರ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್.


ನ್ಯೂಜಿಲ್ಯಾಂಡ್​ ಸಂಭಾವ್ಯ ಪ್ಲೇಯಿಂಗ್​ 11: ಡೆವೊನ್ ಕಾನ್ವೇ (WK), ಫಿನ್ ಅಲೆನ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಲಾಕಿ ಫರ್ಗುಸನ್, ಟಿಮ್ ಸೌಥಿ (ನಾಯಕ) ಮತ್ತು ಇಶ್ ಸೋಧಿ.

Published by:shrikrishna bhat
First published: