• Home
  • »
  • News
  • »
  • sports
  • »
  • IND vs NZ, 1st ODI: ಟೀಂ ಇಂಡಿಯಾ ವಿರುದ್ಧ ಕಿವೀಸ್​ಗೆ ಭರ್ಜರಿ ಜಯ, ಆಕರ್ಷಕ ಶತಕ ಸಿಡಿಸಿದ ಲ್ಯಾಥಮ್

IND vs NZ, 1st ODI: ಟೀಂ ಇಂಡಿಯಾ ವಿರುದ್ಧ ಕಿವೀಸ್​ಗೆ ಭರ್ಜರಿ ಜಯ, ಆಕರ್ಷಕ ಶತಕ ಸಿಡಿಸಿದ ಲ್ಯಾಥಮ್

ನ್ಯೂಜಿಲ್ಯಾಂಡ್​ ತಂಡಕ್ಕೆ ಜಯ

ನ್ಯೂಜಿಲ್ಯಾಂಡ್​ ತಂಡಕ್ಕೆ ಜಯ

IND vs NZ, 1st ODI: ಕಿವೀಸ್​ ತಂಡ 47.1 ಓವರ್​ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 309 ರನ್ ಗಳಿಸುವ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

  • Share this:

ಶಿಖರ್ ಧವನ್ (Shikhar Dhawan) ನಾಯಕತ್ವದಲ್ಲಿ ಭಾರತ ತಂಡ ಆತಿಥೇಯ ನ್ಯೂಜಿಲೆಂಡ್ (IND vs NZ) ವಿರುದ್ಧ ಏಕದಿನ ಸರಣಿ ಆರಂಭವಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಇಂದು ಆಕ್ಲೆಂಡ್‌ನಲ್ಲಿ (Auckland) ನಡೆಯಿತು.  ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಕಿವೀಸ್​ ತಂಡ 47.1 ಓವರ್​ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 309 ರನ್ ಗಳಿಸುವ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.


ಭರ್ಜರಿ ಶತಕ ಸಿಡಿಸಿದ ಲ್ಯಾಥಮ್:


ಇನ್ನು, ಭಾರತ ನೀಡಿದ 307 ರನ್ ಗಳ ಬೆನ್ನಟ್ಟಿದ ಕಿವೀಸ್​ 47.1 ಓವರ್​ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 309 ರನ್ ಗಳಿಸುವ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ನ್ಯೂಜಿಲ್ಯಾಂಡ್​ ಪರ ನಾಯಕ ಕೇನ್​ ವಿಲಿಯಮ್​ಸನ್ 98 ಎಸೆತದಲ್ಲಿ 7 ಪೋರ್​ 1 ಸಿಕ್ಸ್ ಮೂಲಕ 94 ರನ್ ಗಳಿಸುವ ಮೂಲಕ ಶತಕ ವಂಚಿತರಾದರು. ಆದರೆ ಟಾಮ್ ಲ್ಯಾಥಮ್ ಭಾರತೀಯ ಬೌಲರ್​ಗಳ ದಾಳಿಗೆ ಸರಿಯಾಗಿ ಉತ್ತರಿಸಿ ಆಕರ್ಷಕ ಶತಕ ಸಿಡಿಸಿದರು. ಅವರು 104 ಎಸೆತದಲ್ಲಿ 19 ಫೋರ್​ 5 ಸಿಕ್ಸ್ ಮೂಲಕ ಬರೋಬ್ಬರಿ 145 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖರಾದರು. ಉಳಿದಂತೆ ಪಿಂಚ್​ ಅಲೇನ್​ 22 ರನ್, ಡೆವೊನ್ ಕಾನ್ವೇ 24 ರನ್ ಮತ್ತು ಡಾರೆಲ್ ಮಿಚೆಲ್ 11 ರನ್ ಗಳಿಸಿದರು.



ಉತ್ತಮ ಬೌಲಿಂಗ್ ಮಾಡಿದ ಉಮ್ರಾನ್​:


ಟೀಂ ಇಂಡಿಯಾ ಬ್ಯಾಟಿಂಗ್​ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದರೂ ಸಹ ಬೌಲಿಂಗ್​ನಲ್ಲಿ ಎಡವಿತು. ಆರಂಭದಲ್ಲಿ ಉತ್ತಮ ದಾಳಿ ನಡೆಸಿದರೂ ನಂತರ ವಿಲಿಯಮ್​ಸನ್ ಮತ್ತು ಲ್ಯಾಥಮ್​ ಅವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆದರೆ ಭಾರತದ ಸ್ಪೀಡ್​ ಸ್ಟಾರ್​ ಉಮ್ರಾನ್ ಮಲ್ಲಿಕ್ 2 ವಿಕೆಟ್ ಪಡೆದು ಮಿಂಚಿದರೆ ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದರು.


ಉತ್ತಮ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ:


ಭಾರತದ ಪರ ನಾಯಕ ಶಿಖರ್ ಧವನ್ ಮತ್ತು ಶ್ರೇಯಸ್​ ಅಯ್ಯರ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಆರಂಭಿಕರಾಗಿ ಕಣಕ್ಕಿಳಿದ ಧವನ್ ಕಿವೀಸ್​ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು 77 ಎಸೆತದಲ್ಲಿ 13 ಬೌಂಡರಿ ಸಿಡಿಸಿ ಆಕರ್ಷಕ 72 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅವರಂತೆ ಶ್ರೇಯಸ್​ ಅಯ್ಯರ್ ಸಹ 76 ಎಸೆತದಲ್ಲಿ 4 ಸಿಕ್ಸ್ ಮತ್ತು ಫೋರ್​ ಮೂಲಕ ಆಕರ್ಷಕ 80 ರನ್ ಗಳಿಸಿ ಅಬ್ಬರಿಸುವ ಮೂಲಕ ತಂಡದ ಮೊತ್ತ 300ರ ಗಡಿ ದಾಟಲು ಸಹಾಯಕರಾದರು.


ಇದನ್ನೂ ಓದಿ: Stuart Broad: ಮದುವೆಯಾಗದೇ ಅಪ್ಪನಾದ ಮತ್ತೊಬ್ಬ ಸ್ಟಾರ್​ ಕ್ರಿಕೆಟಿಗ, ಸೋಶಿಯಲ್ ಮೀಡಿಯಾದಲ್ಲಿ ಗುಡ್​ನ್ಯೂಸ್​


ಉಳಿದಂತೆ, ಶುಭ್​ಮನ್ ಗಿಲ್​ ಸಹ ಆಕರ್ಷಕ ಅರ್ಧಶತಕ ಸಿಡಿಸಿದರು. ಅವರು ಕಿವೀಸ್​ ವಿರುದ್ಧ 65 ಎಸೆತದಲ್ಲಿ 3 ಪೋರ್​ ಮತ್ತು 1 ಸಿಕ್ಸ್ ನೆರವಿನಿಂದ 50 ರನ್ ಗಳಿಸಿದರು. ರಿಷಭ್ ಪಂತ್ 15 ರನ್, ಸೂರ್ಯಕುಮಾರ್ ಯಾದವ್ 4 ರನ್, ಸಂಜು ಸ್ಯಾಮ್ಸನ್​ 36 ರನ್ ಗಳಿಸಿದರೆ ಅಂತಿಮವಾಗಿ ಕ್ರೀಸ್​ಗೆ ಬಂದ ವಾಷಿಂಗ್ಟನ್​ ಸುಂದರ್​ 16 ಎಸತದಲ್ಲಿ 37 ರನ್ ಗಳಿಸಿ ಮಿಂಚಿದರು. ಬೃಹತ್ ಮೊತ್ತ ಕಲೆಹಾಕಿದರೂ ಬೌಲಿಂಗ್​ನಲ್ಲಿ ಮಿಂಚದ ಕಾರಣ ಭಾರತ ತನ್ನ ಮೊದಲ ಪಂದ್ಯವನ್ನು ಕೈಚಲ್ಲಿದೆ.

Published by:shrikrishna bhat
First published: