ಭಾರತ ಮತ್ತು ಆಸ್ಟ್ರೇಲಿಯಾ (IND v AUS) ನಡುವಿನ 3 ಪಂದ್ಯಗಳ ಸರಣಿಯ ಎರಡನೇ T20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವು ಇಂದು ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ (Vidarbha Cricket Association Stadium) ನಡೆಯಲಿದೆ. ಆದರೆ 7 ಗಂಟೆಗೆ ಆರಂಭವಾಗಬೇಕಿದ್ದ ಈ ಪಂದ್ಯವು ಈವರೆಗೂ ಪ್ರಾರಂಭವಾಗಿಲ್ಲ. ಸತತ ಮಳೆಯಿಂದಾಗಿ ಮೈದಾನವು ಈವರೆಗೂ ಸರಿಯಾಗಿ ಒಣಗದ ಕಾರಣ ಪಂದ್ಯವನ್ನು ಮತ್ತಷ್ಟು ಮುಂದೂಡಲಾಗಿದೆ. ಹೀಗಾಗಿ ಪಿಚ್ ಅಂಪೈರ್ಗಳು ಪಂದ್ಯದ ಬಗ್ಗೆ 8:45ಕ್ಕೆ ತಿಳಿಸುವುದಾಗಿ ಮಾಹಿತಿ ನೀಡಿದ್ದಾರೆ. ಇನ್ನು, ಈಗಾಗಲೇ ಸರಣಿಯ ಮೊದಲ ಪಂದ್ಯದಲ್ಲಿ ಆಸೀಸ್ ಭರ್ಜರಿ ಜಯ ದಾಖಲಿಸಿದೆ. ಹೀಗಾಗಿ ಇಂದಿನ ಪಂದ್ಯ ಟೀಂ ಇಂಡಿಯಾ (Team India) ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದ್ದು, ಸರಣಿಯಲ್ಲಿ ಉಳಿಯಬೇಕಾದರೆ ಈ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕಾಗಿದೆ. ಇಂದಿನ ಪಂದ್ಯ ಗೆದ್ದಲ್ಲಿ ಮಾತ್ರ ಸರಣಿ ಜೀವಂತವಾಗಿರಲಿದೆ. ಟಿ20 ವಿಶ್ವಕಪ್ (T20 World Cup) ತಯಾರಿಯ ಭಾಗವಾಗಿರುವ ಸರಣಿ ಆಗಿದ್ದರಿಂದ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.
ಪಂದ್ಯ ಆರಂಭ ವಿಳಂಭ:
ಹೌದು, ಮಳೆಯ ಕಾರಣ ಭಾರತ-ಆಸ್ಟ್ರೇಲಿಯಾ ಪಂದ್ಯವು ಮತ್ತಷ್ಟು ವಿಳಂಬವಾಗುತ್ತಿದೆ. ಮಳೆಯು ಹೆಚ್ಚಿದ ಕಾರಣ ಮೈದಾನವು ಈವರೆಗೂ ಸರಿಯಾಗಿ ಡ್ರೈ ಆಗದ ಕಾರಣ ಪಿಚ್ ಅಂಪೈರ್ಗಳು ಪಂದ್ಯದ ಸ್ಥಿತಿಯ ಬಗ್ಗೆ ಮುಂದಿನ 8:45ಕ್ಕೆ ಗಂಟೆಗೆ ತಿಳಿಸುವುದಾಗಿ ಹೇಳಿದ್ದಾರೆ. ಈ ಮೊದಲು 7 ಗಂಟೆಗೆ ಟಾಸ್ ಆಗಬೇಕಿತ್ತು. ಅದೂ ಸಹ 8 ಗಂಟೆಗೆ ಮುಂದೂಡಲ್ಪಟ್ಟು, ಇದೀಗ ಮತ್ತೊಮ್ಮೆ 8:45ಕ್ಕೆ ಪಂದ್ಯವನ್ನು ಮುಂದೂಡ್ಲಪಟ್ಟಿದೆ.
Listen in to what the umpires have to say about the possibility of play today.#INDvAUS pic.twitter.com/wznhbQfmID
— BCCI (@BCCI) September 23, 2022
ಇನ್ನು, ಪಂದ್ಯವು ಸಂಪೂರ್ಣ 20 ಓವರ್ ನಡೆಯುವುದು ಅನುಮಾನವಾಗಿದೆ. ಈಗಾಗಲೇ ಪಂದ್ಯವು ಸರಿಸುಮಾರು 1 ಗಮಟೆಗೂ ಹೆಚ್ಚಿನ ಕಾಲ ಮುಂದೂಡಲ್ಪಟ್ಟಿದೆ. ಹೀಗಾಗಿ ಪಿಚ್ ಅಂಪೈರ್ಗಳ ನಿರ್ಣಯದಂತೆ ಪಮದ್ಯದಲ್ಲಿ ಕೆಲ ಓವರ್ಗಳ ಕಡಿತಗೊಳ್ಳಿಸುವ ಸಾಧ್ಯತೆಯೂ ಇದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ತಿಳಿಸಿಲ್ಲ. ಆದರೆ ಪಂದ್ಯವನ್ನು ನಡೆಸುವುದಾಗಿ ಹೇಳಲಾಗಿದ್ದು, ಅಭಿಮಾನಿಗಳಲ್ಲಿ ಸ್ವಲ್ಪ ನೆಮ್ಮದಿ ತಂದಂತಾಗಿದೆ.
ಇದನ್ನೂ ಓದಿ: ICC T20 World Cup: ಟಿ20 ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು, ಯಾರೆಲ್ಲಾ ಭಾರತೀಯ ಪ್ಲೇಯರ್ಸ್ಗಳಿದ್ದಾರೆ?
ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಬುಮ್ರಾ?:
ಇನ್ನು, ಅನೇಕ ದಿನಗಳ ನಂತರ ಬುಮ್ರಾ ತಂಡಕ್ಕೆ ಆಯ್ಕೆ ಆಗಿದ್ದಾರೆ. ಆದರೂ ಅವರಿಗೆ ಮೊದಲ ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಡೆತ್ ಓವರ್ಗಳಲ್ಲಿ ಭಾರತ ಬೌಲಿಂಗ್ನಲ್ಲಿ ಸಾಕಷ್ಟು ಕಷ್ಟಪಡಬೇಕಾಯಿತು. ಅಲ್ಲದೇ ಇನ್ನೇನು ವಿಶ್ವಕಪ್ಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ಬುಮ್ರಾ ಅವರನ್ನು ಆದಷ್ಟು ತಂಡದಲ್ಲಿ ಆಡಿಸುವುದು ವಿಶ್ವಕಪ್ಗೆ ಸಹಾಯಕವಾಗಲಿದೆ ಮತ್ತು ಈ ಸರಣಿ ಗೆಲುವಿನಲ್ಲಿಯೂ ಪ್ರಮುಖ ಪಾತ್ರವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯುತ್ತಾರೆಯೋ? ಇಲ್ಲವೋ? ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್ಗೆ ದ್ರಾವಿಡ್ ಮಾಸ್ಟರ್ ಪ್ಲ್ಯಾನ್, ಆಸೀಸ್ಗೆ ತೆರಳಲು ಟೀಂ ಇಂಡಿಯಾ ಡೇಟ್ ಫಿಕ್ಸ್
IND vs AUS ಸಂಭಾವ್ಯ ತಂಡ:
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್,
ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ , ಯುಜ್ವೇಂದ್ರ ಚಹಾಲ್.
ಆಸ್ಟ್ರೇಲಿಯಾ ಸಂಭಾವ್ಯ ತಂಡ: ಆರನ್ ಫಿಂಚ್, ಕ್ಯಾಮೆರಾನ್ ಗ್ರೀನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ನಾಥನ್ ಎಲ್ಲಿಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ